ನವ ದೆಹಲಿ: 2019 ರ ಪುಲ್ವಾಮಾ ಭಯೋತ್ಪಾದಕ ದಾಳಿಯನ್ನು ನಾಟಕೀಯ ಘಟನೆ ಮತ್ತು ಬಿಜೆಪಿ ಸೃಷ್ಟಿ ಎಂದು ಹೇಳಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee ) ವಿವಾದಕ್ಕೆ ಸಿಲುಕಿದ್ದಾರೆ. ಅವರ ಹೇಳಿಕೆಯನ್ನು ಬಿಜೆಪಿ ಕಟುವಾಗಿ ಟೀಕಿಸಿದ್ದು ಹುತಾತ್ಮ ಯೋಧರಿಗೆ ಹಾಗೂ ದೇಶದ ಜನತೆಗೆ ಮಮತಾ ಅಪಮಾನ ಮಾಡಿದ್ದಾರೆ ಎಂದು ಹೇಳಿದೆ. ಮಮತಾ ಬ್ಯಾನರ್ಜಿ ಪಾಕಿಸ್ತಾನದ ಪರ ಇದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂಬುದಾಗಿ ಪಶ್ಚಿಮ ಬಂಗಾಳದ ಬಿಜೆಪಿಯ ಸಂದ ಸುಕಾಂತಾ ಮುಜುಮ್ದಾರ್ ಹೇಳಿದ್ದಾರೆ.
ಕೋಲ್ಕತ್ತಾದ ಎಸ್ಪಲಾಂಡೆಯಲ್ಲಿ ನಡೆದ ಹುತಾತ್ಮರ ದಿನದ ರ್ಯಾಲಿಯಲ್ಲಿ ಮಮತಾ ಬ್ಯಾನರ್ಜಿ ಈ ವಿವಾದಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ. ತಮ್ಮ ಭಾಷಣದ ಸುಮಾರು 14 ನಿಮಿಷ 37 ಸೆಕೆಂಡುಗಳಲ್ಲಿ, “ಪುಲ್ವಾಮಾ (ಭಯೋತ್ಪಾದಕ ದಾಳಿ) ಯಂತಹ ನಾಟಕೀಯ ಘಟನೆಗಳನ್ನು ಮುಂದೆಯೂ ಮಾಡಲು ಬಿಜೆಪಿ ಯೋಜಿಸುತ್ತಿದೆ ಎಂದು ನಾನು ವಿದ್ಯಾರ್ಥಿಗಳು ಮತ್ತು ಯುವಕರಿಗೆ ಹೇಳುತ್ತೇನೆ” ಎಂದು ಬ್ಯಾನರ್ಜಿ ಹೇಳಿದ್ದಾರೆ.
ಮಮತಾ ನೀಡಿರುವ ಹೇಳಿಕೆ ದೇಶಕ್ಕೆ ಮಾಡಿರುವ ಅವಮಾನ ಎಂಬುದಾಗಿ ಬಿಜೆಪಿ ಟೀಕೆ ಮಾಡಿದೆ. ಮಮತಾ ಬ್ಯಾನರ್ಜಿಗೆ ಪಾಕಿಸ್ತಾನದ ನಂಟು ಇದೆ. ಹೀಗಾಗಿ ಪಾಕ್ ಉಗ್ರರ ಕೃತ್ಯಗಳನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ತನಿಖೆ ನಡೆಸಬೇಕು ಎಂಬುದಾಗಿ ಹೇಳಿದೆ.
ಎಲ್ಲಿ ಹೇಳಿದ್ದು ಮಮತಾ?
ಹುತಾತ್ಮರ ದಿನದ ರ್ಯಾಲಿ ತೃಣಮೂಲ ಕಾಂಗ್ರೆಸ್ನ ವಾರ್ಷಿಕ ಕಾರ್ಯಕ್ರಮವಾಗಿದೆ. 1993ರಲ್ಲಿ ಕೋಲ್ಕತ್ತಾದಲ್ಲಿ ಪೊಲೀಸ್ ಗೋಲಿಬಾರ್ನಲ್ಲಿ ಮೃತಪಟ್ಟ 13 ಯುವ ಕಾಂಗ್ರೆಸ್ ಕಾರ್ಯಕರ್ತರ ನೆನಪಿಗಾಗಿ ಇದನ್ನು ನಡೆಸಲಾಗುತ್ತದೆ. ಘಟನೆಯ ಸಮಯದಲ್ಲಿ ಮಮತಾ ಬ್ಯಾನರ್ಜಿ ಭಾರತೀಯ ಯುವ ಕಾಂಗ್ರೆಸ್ ನ ರಾಜ್ಯ ಅಧ್ಯಕ್ಷರಾಗಿದ್ದರು. ಈ ಸಭೆಯಲ್ಲಿ ಮಾತನಾಡಿದ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಬಿಜೆಪಿ ಮತಕ್ಕಾಗಿ ಚಲನಚಿತ್ರಗಳಲ್ಲಿರುವಂತೆ ನಕಲಿ, ನಾಟಕೀಯ ವೀಡಿಯೊಗಳನ್ನು ರಚಿಸಲು ಯೋಜಿಸುತ್ತಿದ್ದಾರೆ. ಅವರು ವೀಡಿಯೊಗಳನ್ನು ಚಿತ್ರೀಕರಿಸುವ ಮೂಲಕ ಬಂಗಾಳವನ್ನು ದೂಷಿಸುತ್ತಾರೆ. ಇದು ಅವರ ಪಿತೂರಿ” ಎಂದು ಮಮತಾ ಬಿಜೆಪಿ ವಿರುದ್ಧ ಟೀಕೆ ಮಾಡಿದ್ದರು.
ಪುಲ್ವಾಮ ಘಟನೆ ನಡೆದಿದ್ದು ಯಾವಾಗ?
ಫೆಬ್ರವರಿ 14, 2019 ರಂದು ರಾಷ್ಟ್ರೀಯ ಹೆದ್ದಾರಿ 44ರ ಮೂಲಕ ಶ್ರೀನಗರಕ್ಕೆ ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್ಪಿಎಫ್) ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ವಾಹನಗಳ ಮೇಲೆ ಪಾಕ್ ಉಗ್ರ ಆತ್ಮಾಹುತಿ ಬಾಂಬ್ ದಾಳಿ ನಡೆದಿತ್ತು. ಜಮ್ಮು ಮತ್ತು ಕಾಶ್ಮೀರದ ಕಾಕಪೋರಾದ ಜೈಶ್-ಎ-ಮೊಹಮ್ಮದ್ (ಜೆಎಂ) ಭಯೋತ್ಪಾದಕ 22 ವರ್ಷದ ಆದಿಲ್ ಅಹ್ಮದ್ ದಾರ್ ಸ್ಫೋಟಕ ತುಂಬಿದ ವಾಹನವನ್ನು ಸಿಆರ್ಪಿಎಫ್ ಸಿಬ್ಬಂದಿಯನ್ನು ಕರೆದೊಯ್ಯುತ್ತಿದ್ದ ಬಸ್ಗೆ ಡಿಕ್ಕಿ ಹೊಡೆಸಿದ್ದ, ಘಟನೆಯಲ್ಲ ನಮ್ಮ 40 ಯೋಧರು ಹುತಾತ್ಮರಾಗಿದ್ದರು.
ಇದನ್ನೂ ಓದಿ : Amit Shah: ಪುಲ್ವಾಮಾ ದಾಳಿ ಬಗ್ಗೆ ಸತ್ಯಪಾಲ್ ಮಲಿಕ್ ಹೇಳಿದ್ದು ನಿಜವೇ ಆಗಿದ್ದರೆ..; ಅಮಿತ್ ಶಾ ಕೇಳಿದ ಪ್ರಶ್ನೆ ಏನು?
ಭಾರತವು ಇನ್ನೂ ದಾಳಿಯ ಬಗ್ಗೆ ಶೋಕಿಸುತ್ತಿದ್ದ ತಕ್ಷಣವೇ ಆದಿಲ್ ಮಾಡಿ ಬಿಟ್ಟಿದ್ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು. ಪುಲ್ವಾಮಾ ದಾಳಿ ಕೇವಲ ಭಾರತ ದೇಶಖ್ಕೆ ಮಾತ್ರ ಸೀಮಿತವಾಗಿರಲಿಲ್ಲ ಹಿಂದೂ ಬಹುಸಂಖ್ಯಾತರ ವಿರುದ್ಧದ ಪ್ರತೀಕಾರದ ಕ್ರಮ ಎಂದು ಉಗ್ರ ಹೇಳಿದ್ದ.
ವೀಡಿಯೊದಲ್ಲಿ, ಜೈಶ್-ಎ-ಮೊಹಮ್ಮದ್ ಭಯೋತ್ಪಾದಕ ಹಿಂದೂ ಸಮುದಾಯವನ್ನು ‘ಹಿಂದೂಸ್ತಾನ್ ಕಾ ನಪಾಕ್ ಮುಶ್ರಿಕಾನ್’ (ಭಾರತದ ಅಶುದ್ಧ ವಿಗ್ರಹ ಆರಾಧಕರು) ಮತ್ತು ‘ಗೋ ಕಾ ಪೆಶಾಬ್ ಪೀನೆ ವಾಲೋನ್’ (ಹಸುವಿನ ಮೂತ್ರ ಕುಡಿಯುವವರು) ಎಂದು ಅಮಾನ ಮಾಡಿದ್ದ.