ಚಂಡೀಗಢ: ಆಮ್ ಆದ್ಮಿ ಪಾರ್ಟಿ(ಆಪ್)ಗೆ ಚಂಡೀಗಢ ಮೇಯರ್ ಎಲೆಕ್ಷನ್‌ನಲ್ಲಿ ಮುಖಭಂಗವಾಗಿದೆ. ಆಪ್‌ನ ಜಸ್ಬೀರ್ ಸಿಂಗ್ ವಿರುದ್ಧ ಬಿಜೆಪಿಯ ಅನೂಪ್ ಗುಪ್ತಾ ಅವರು ಕೇವಲ ಒಂದು ಮತದ ಅಂತರದಿಂದ ಗೆದ್ದು, ಮೇಯರ್ ಆಗಿ ಆಯ್ಕೆಯಾಗಿದ್ದಾ(Chandigarh mayor election).
ಮಂಗಳವಾರ ಬೆಳಗ್ಗೆ 11 ಗಂಟೆಗೆ ಮೇಯರ್ ಚುನಾವಣೆ ಆರಂಭವಾಯಿತು. ಒಟ್ಟು 29 ಮತದಾರರ ಪೈಕಿ ಬಿಜೆಪಿಯ ಅನೂಪ್ ಗುಪ್ತಾ ಅವರು 15 ಮತಗಳನ್ನು ಪಡೆದರೆ, ಆಪ್‌ನ ಜಸ್ಬೀರ್ ಸಿಂಗ್ 14 ಮತಗಳನ್ನು ಪಡೆದರು. ಹಾಗಾಗಿ, ಒಂದು ಮತದ ಅಂತರದಲ್ಲಿ ಆಪ್ ವಿರುದ್ದ ಬಿಜೆಪಿ ಜಯ ಸಾಧಿಸಿತು.
ಮೇಯರ್ ಆಗಿ ಆಯ್ಕೆಯಾಗಲು ಕನಿಷ್ಠ 15 ಮತಗಳ ಅಗತ್ಯವಿತ್ತು. ಕಾಂಗ್ರೆಸ್ 6 ಮತ್ತು ಅಕಾಲಿ ದಳದ ಒಬ್ಬ ಸದಸ್ಯರಿದ್ದರು. ಆದರೆ, ಅವರು ಮತದಾನದಿಂದ ದೂರ ಉಳಿದಿದ್ದರಿಂದ ಬಿಜೆಪಿಯ ಗೆಲುವಿಗೆ ಅನುಕೂಲವಾಯಿತು.
ಇದನ್ನೂ ಓದಿ | Delhi Mayor Polls | ದಿಲ್ಲಿ ಮೇಯರ್ ಎಲೆಕ್ಷನ್, ಆಪ್-ಬಿಜೆಪಿ ಗಲಾಟೆ, ಪಾಲಿಕೆ ಸಭೆಯಲ್ಲಿ ಕೋಲಾಹಲ