Site icon Vistara News

ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಭರ್ಜರಿ ಬ್ಯಾಟಿಂಗ್​​; ಬಾಲ್​ ಬಡಿದು ಬಿಜೆಪಿ ಕಾರ್ಯಕರ್ತನಿಗೆ ತೀವ್ರ ಗಾಯ

BJP Worker Injured By Ball Hit By Union Minister Jyotiraditya Scindia Batting

#image_title

ಭೋಪಾಲ್​: ಮಧ್ಯಪ್ರದೇಶದಲ್ಲಿ ನೂತನವಾಗಿ ನಿರ್ಮಾಣವಾಗಿರುವ ಕ್ರಿಕೆಟ್​ ಸ್ಟೇಡಿಯಂನಲ್ಲಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ (Minister Jyotiraditya Scindia) ಕ್ರಿಕೆಟ್​ ಆಡಿ, ಭರ್ಜರಿ ಬ್ಯಾಟಿಂಗ್​ ಮಾಡಿದ್ದಾರೆ. ಆದರೆ ಇಲ್ಲೊಂದು ಅಪಘಾತವಾಗಿದೆ. ಜ್ಯೋತಿರಾದಿತ್ಯ ಸಿಂಧಿಯಾ ಹೊಡೆದ ಬಾಲ್​, ಬಿಜೆಪಿ ಕಾರ್ಯಕಾರಿ ಸದಸ್ಯ ವಿಕಾಸ್​ ಮಿಶ್ರಾ ಹಣೆಗೆ ಬಲವಾಗಿ ಬಡಿದು, ಆಳವಾದ ಗಾಯವಾಗಿದೆ. ಬಳಿಕ ವಿಕಾಸ್​ ಮಿಶ್ರಾರನ್ನು ಆಸ್ಪತ್ರೆಗೆ ದಾಖಲಿಸಿ, ಹೊಲಿಗೆ ಹಾಕಿಸಲಾಗಿದೆ.

ಇಟೌರಾದಲ್ಲಿರುವ ಮಧ್ಯಪ್ರದೇಶ್​ ಕ್ರಿಕೆಟ್ ಅಸೋಸಿಯೇಶನ್​ ಸ್ಟೇಡಿಯಂ ಬುಧವಾರ ಉದ್ಘಾಟನೆಗೊಂಡಿತ್ತು. ಅದಾದ ಮೇಲೆ ಸುಮ್ಮನೆ ಸೌಹಾರ್ದಯುತವಾಗಿ ಪಂದ್ಯ ನಡೆಯಿತು. ಅದರಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ ಬ್ಯಾಟಿಂಗ್​ ಮಾಡಿದರು. ಅವರು ಹೊಡೆದ ಬಾಲ್​ ವಿಕಾಸ್​ಗೆ ತಾಗಿ, ಹಣೆಗೆ ಗಾಯವಾಗಿ ರಕ್ತ ಸುರಿಯಲು ಶುರುವಾಗುತ್ತಿದ್ದಂತೆ ಆಟ ನಿಲ್ಲಿಸಿ, ಕೂಡಲೇ ವಿಕಾಸ್​ ಅವರನ್ನು ಸಂಜಯ್​ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಯಿತು. ವಿಕಾಸ್​ ಜತೆ ಆಸ್ಪತ್ರೆಗೆ ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ಮಾಜಿ ರಾಜೇಂದ್ರ ಶುಕ್ಲಾ , ಸಂಸದರಾದ ಜನಾರ್ದನ್​ ಮಿಶ್ರಾ ಕೂಡ ತೆರಳಿದ್ದರು.

ಇದನ್ನೂ ಓದಿ: ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್​ಗೆ ಮರಳುವ ಸೂಚನೆ ಕಾಣುತ್ತಿದೆ; ಎಐಸಿಸಿ ವಕ್ತಾರ ಹೀಗೆ ಹೇಳಲು ಕಾರಣವೇನು?

Exit mobile version