ಜಮ್ಮು-ಕಾಶ್ಮೀರದಲ್ಲಿ ಇಂದು ಮುಂಜಾನೆ ಅವಳಿ ಸ್ಫೋಟವುಂಟಾಗಿದ್ದು, 6 ಮಂದಿ ಗಂಭೀರ ಗಾಯಗೊಂಡಿದ್ದಾರೆ. ಜಮ್ಮುವಿನ ನೇವಾಲ್ ಏರಿಯಾದಲ್ಲಿ ಸ್ಫೋಟ ಉಂಟಾಗಿದೆ. ವಿವಿಧ ವಸ್ತುಗಳ ಸಾಗಣೆಗಾಗಿ ಅನೇಕ ಟ್ರಕ್ಗಳನ್ನು ನಿಲ್ಲಿಸಿದ್ದ ಸ್ಥಳದಲ್ಲಿಯೇ ಸ್ಫೋಟವಾಗಿದೆ. ಆದರೆ ಸ್ಫೋಟಗೊಂಡಿದ್ದು ಏನು ಎಂಬುದರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಸ್ಫೋಟದ ಬೆನ್ನಲ್ಲೇ ಸ್ಥಳದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಪ್ರತಿ ವಾಹನಗಳನ್ನೂ ಕಟ್ಟುನಿಟ್ಟಾಗಿ ತಪಾಸಣೆ ಮಾಡಿಯೇ ಅಲ್ಲಿಂದ ಬಿಡಲಾಗುತ್ತಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಭಾರತ್ ಜೋಡೋ ಯಾತ್ರೆ ಜಮ್ಮು-ಕಾಶ್ಮೀರದಲ್ಲಿ ನಡೆಯುತ್ತಿದೆ. ಇಂದು ಜಮ್ಮುವಿನ ಮೂಲಕವೇ ಪಾದಯಾತ್ರೆ ಹಾದುಹೋಗುತ್ತಿದೆ. ಈ ಮಧ್ಯೆ ಅವಳಿ ಸ್ಫೋಟವಾಗಿದ್ದು ಇನ್ನಷ್ಟು ಆತಂಕ ಹೆಚ್ಚಿಸಿದೆ. ಸೆಪ್ಟೆಂಬರ್ನಿಂದ ಪ್ರಾರಂಭವಾಗಿರುವ ಭಾರತ್ ಜೋಡೋ ಯಾತ್ರೆ ಈಗ ಮುಕ್ತಾಯದ ಹಂತ ತಲುಪಿದ್ದು, ಜಮ್ಮು-ಕಾಶ್ಮೀರಕ್ಕೆ ತಲುಪಿದೆ. ಭದ್ರತೆಯ ದೃಷ್ಟಿಯಿಂದ ಜಮ್ಮುವಿನಿಂದ-ಶ್ರೀನಗರ ಮಧ್ಯದ ಕೆಲವು ಪ್ರದೇಶಗಳಲ್ಲಿ ಬಸ್ ಮೂಲಕ ಸಂಚರಿಸಲು ಕಾಂಗ್ರೆಸ್ ನಾಯಕರು ನಿರ್ಧಾರ ಮಾಡಿದ್ದಾರೆ.
ಇದನ್ನೂ ಓದಿ: Rajouri Terror Attack | ರಾಜೌರಿಯಲ್ಲಿ ದಾಳಿ ನಡೆಸಿದ್ದ ಇಬ್ಬರು ಉಗ್ರರ ಹತ್ಯೆ; ಮೃತ ನಾಗರಿಕರ ಸಂಖ್ಯೆ 7ಕ್ಕೆ ಏರಿಕೆ