Site icon Vistara News

ಪತ್ನಿ ಮತ್ತು ಮಕ್ಕಳನ್ನು ಮನೆಯಿಂದ ಹೊರಕ್ಕೆ ಹಾಕಿದ ಬಾಲಿವುಡ್ ನಟ ನವಾಜುದ್ದೀನ್​ ಸಿದ್ದಿಕಿ; ಆರೋಪ

Bollywood actor Nawazuddin Siddiqui threw his wife and children out of the house

#image_title

ಮುಂಬಯಿ: ಬಾಲಿವುಡ್​ ನಟ ನವಾಜುದ್ದೀನ್ ಸಿದ್ದಿಕ್ಕಿಯ (Nawazuddin Siddiqui) ಕೌಟುಂಬಿಕ ಗಲಾಟೆ ಬೀದಿ ರಂಪವಾಗಿ ಮಾರ್ಪಟ್ಟಿದೆ. ಅವರ ಪತ್ನಿ ಅಲಿಯಾ ಶುಕ್ರವಾರ ಇನ್​ಸ್ಟಾಗ್ರಾಮ್​ನಲ್ಲಿ ಹೊಸ ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದು, ನನ್ನನ್ನು ಹಾಗೂ ಇಬ್ಬರು ಮಕ್ಕಳನ್ನು ನವಾಜುದ್ದೀನ್​ ಸಿದ್ದಿಕಿ ಮನೆಯಿಂದ ಹೊರಕ್ಕೆ ಹಾಕಿ ಬೀದಿಪಾಲು ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಮಗಳು ಶೋರಾ ಅಳುತ್ತಿದ್ದಾಳೆ ಎಂಬುದಾಗಿಯೂ ಅವರು ವಿಡಿಯೊದಲ್ಲಿ ಆರೋಪಿಸಿದ್ದಾರೆ.

ನವಾಜುದ್ದೀನ್​ ಹಾಗೂ ಅಲಿಯಾ ದಾಂಪತ್ಯದಲ್ಲಿ ಬಿರುಕು ಮೂಡಿದ ಬಳಿಕ ಹಲವಾರು ಗಲಾಟೆಗಳು ನಡೆದಿದ್ದವು. ಕಳೆದ ವಾರವಷ್ಟೇ ಅಲಿಯಾ ವಿಡಿಯೊ ಮಾಡಿ ನವಾಜುದ್ದೀನ್​, ನನ್ನನ್ನು ಹಾಗೂ ಮಕ್ಕಳನ್ನು ಅಂಧೇರಿಯಲ್ಲಿರುವ ಬಂಗಲೆಯಲ್ಲಿ ಕೂಡಿ ಹಾಕಿದ್ದಾನೆ. ಇಲ್ಲಿ ಯಾವುದೇ ಸೌಕರ್ಯಗಳು ಇಲ್ಲ. ಸ್ನಾನ ಮಾಡುವುದಕ್ಕೂ ಆಗುತ್ತಿಲ್ಲ ಎಂದು ಆರೋಪಿಸಿದ್ದರು. ಇದೀಗ ಮನೆಯಿಂದಲೇ ಹೊರಕ್ಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ : Nawazuddin Siddiqui : ನವಾಜುದ್ದೀನ್‌ ನೀವು ಕಂಡಂತಲ್ಲ; ನಟನ ಬಗ್ಗೆ ಗಂಭೀರ ಆರೋಪ ಮಾಡಿದ ಸಹೋದರ!

ಪೊಲೀಸ್​ ಠಾಣೆಯಿಂದ ಕರೆ ಬಂದ ಕಾರಣ ಬಂಗಲೆಯಿಂದ ಹೊರಕ್ಕೆ ಬಂದಿದ್ದೆ. ಆದರೆ, ವಾಪಸ್​ ಮನೆಯೊಳಗೆ ಹೋಗಲು ಬಾಡಿಗಾರ್ಡ್​ಗಳು ಬಿಡುತ್ತಿಲ್ಲ. ಹೀಗಾಗಿ ನಾವು ಮೂವರು ಬೀದಿಯಲ್ಲಿ ನಿಂತಿದ್ದೇವೆ. ನನ್ನ ಬಳಿಕ ಕೇವಲ 81 ರೂಪಾಯಿ ಇದೆ. ಮುಂದೇನು ಮಾಡುವುದು ಎಂದು ಗೊತ್ತಿಲ್ಲ. ಅಪ್ಪನ ಕೃತ್ಯಕ್ಕೆ ಬೇಸರ ಮಾಡಿಕೊಂಡು ಮಗಳು ಶೋರಾ ಅಳುತ್ತಿದ್ದಾಳೆ. ಪುತ್ರ ಯಾನಿ ಕೂಡ ಇದ್ದಾನೆ ಎಂದು ಅಲಿಯಾ ವಿಡಿಯೊದಲ್ಲಿ ಹೇಳಿದ್ದಾರೆ.

ನವಾಜ್ ಅತ್ಯಂತ ಕೆಟ್ಟದಾಗಿ ವರ್ತಿಸುತ್ತಿದ್ದಾನೆ. ನನ್ನ ಹಾಗೂ ಮಕ್ಕಳ ವಿಚಾರದಲ್ಲಿ ಕೆಳ ಮಟ್ಟಕ್ಕೆ ಇಳಿದಿದ್ದೀಯಾ. ಈ ರೀತಿ ಮಾಡುವುದಕ್ಕೆ ನಿನ್ನನ್ನು ಎಂದೂ ಕ್ಷಮಿಸುವುದಿಲ್ಲ. ಮಕ್ಕಳು ಬೀದಿಯಲ್ಲಿ ನರಳುವಂತೆ ಮಾಡಬಾರದಿತ್ತು ಎಂಬುದಾಗಿಯೂ ಅಲಿಯಾ ಹೇಳುತ್ತಾರೆ.

Exit mobile version