Site icon Vistara News

ಪಟನಾ ರೈಲ್ವೆ ಸ್ಟೇಷನ್​​​ನಲ್ಲಿ ಅವ್ಯವಸ್ಥೆ ಸೃಷ್ಟಿಸಿತು ಅದೊಂದು ಕರೆ; ಪ್ರಯಾಣಿಕರಿಗಂತೂ ದಿಕ್ಕು ತೋಚದಂತಾಗಿತ್ತು

Bomb Threat To Patna Railway Station

ಪಾಟ್ನಾ: ಬಿಹಾರದ ಪಟ್ನಾ ರೈಲ್ವೆ ನಿಲ್ದಾಣದಲ್ಲಿ ಸೋಮವಾರ ಸಂಜೆ ಪ್ರಯಾಣಿಕರೆಲ್ಲ ಕಂಗಾಲಾಗಿ ನಿಂತಿದ್ದರು. ಎಲ್ಲಿ ಓಡಬೇಕು, ಏನು ಮಾಡಬೇಕು ಎಂಬುದು ತಿಳಿಯದಂತಾಗಿ ಪೇಚಾಟಕ್ಕೆ ಸಿಲುಕಿದ್ದರು. ಭದ್ರತಾ ಸಿಬ್ಬಂದಿ ಕೂಡ ಫುಲ್​ ಅಲರ್ಟ್​ ಆಗಿದ್ದರು. ರೈಲ್ವೆ ಸ್ಟೇಶನ್​​ನ ಮೂಲೆಮೂಲೆಯಲ್ಲಿ ಪೊಲೀಸ್​ ಸಿಬ್ಬಂದಿ ಹುಡುಕಾಟ ನಡೆಸಿದ್ದರು.…
ಇವೆಲ್ಲಕ್ಕೂ ಕಾರಣವಾಗಿದ್ದು ಒಂದು ಹುಸಿ ಬಾಂಬ್​ ಕರೆ. ಸೋಮವಾರ (ಡಿ.19) ಸಂಜೆ ಹೊತ್ತಿಗೆ ಪಾಟ್ನಾ ರೈಲ್ವೆ ಸ್ಟೇಶನ್​​ನಲ್ಲಿ ಬಾಂಬ್​ ಇಡಲಾಗಿದೆ ಎಂಬುದೊಂದು ಮಾಹಿತಿ ಅಲ್ಲಿನ ಪೊಲೀಸ್​ ಠಾಣೆಗೆ ಬಂತು.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ರೈಲ್ವೆ ಸ್ಟೇಷನ್​​ಗೆ ಬಂದರು. ಅಲ್ಲಿನ ಪ್ರಯಾಣಿಕರಿಗೆ ಧೈರ್ಯವನ್ನೂ ತುಂಬಿದ್ದರು. ಬಾಂಬ್​ ನಿಷ್ಕ್ರಿಯ ದಳದ ಸಿಬ್ಬಂದಿ ಕೂಡ ಆಗಮಿಸಿದ್ದರು. ಆದರೆ ಅದೆಷ್ಟೇ ಹುಡುಕಿದರೂ ಬಾಂಬ್​ ಮಾತ್ರ ಸಿಗಲೇ ಇಲ್ಲ. ಕೊನೆಗೆ ಅದೊಂದು ಹುಸಿ ಬಾಂಬ್​ ಕರೆ ಎಂಬುದು ಖಚಿತವಾಗಿದೆ. ಪ್ರಯಾಣಿಕರೂ ನಿರಾಳರಾಗಿದ್ದಾರೆ.

‘ಬಾಂಬ್​ ಇದೆ ಎಂಬ ಮಾಹಿತಿ ಬಂತು. ಹೋಗಿ ಹುಡುಕಿದರೆ ಏನೂ ಸಿಕ್ಕಿಲ್ಲ. ಹೀಗೆ ಹುಸಿ ಕರೆ ಮಾಡಿದ್ಯಾರು? ಆ ಮಾಹಿತಿ ಬಂದಿದ್ದು ಎಲ್ಲಿಂದ ಎಂಬ ಬಗ್ಗೆ ನಾವು ವಿಶೇಷ ತನಿಖೆ ನಡೆಸುತ್ತಿದ್ದೇವೆ ಎಂದು ಪಾಟ್ನಾ ರೈಲ್ವೆ ಸ್ಟೇಷನ್​​ ಪೊಲೀಸ್​ ಉಸ್ತುವಾರಿ ರಂಜಿತ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: ದೆಹಲಿಯಲ್ಲಿ ಲ್ಯಾಂಡ್​​ ಆಗಲಿರುವ ವಿಮಾನದಲ್ಲಿ ಬಾಂಬ್​ ಇದೆಯೆಂಬ ಕರೆ; ಮಧ್ಯರಾತ್ರಿ ಭದ್ರತೆ ಹೆಚ್ಚಳ

Exit mobile version