Site icon Vistara News

Breast Milk : ತಾಯಿಯ ಎದೆ ಹಾಲಿನಲ್ಲೂ ಕೀಟನಾಶಕ! ಹತ್ತೇ ತಿಂಗಳುಗಳಲ್ಲಿ 111 ನವಜಾತ ಶಿಶುಗಳ ಸಾವು

#image_title

ಲಕ್ನೋ: ತಾಯಿಯ ಎದೆ ಹಾಲನ್ನು (Breast Milk) ಅಮೃತಕ್ಕೆ ಹೋಲಿಸಲಾಗುತ್ತದೆ. ಆದರೆ ಅದೇ ಅಮೃತ ಇದೀಗ ವಿಷವಾಗಿರುವ ಅನುಮಾನಗಳು ವ್ಯಕ್ತವಾಗುತ್ತಿವೆ. ಉತ್ತರ ಪ್ರದೇಶದ ಮಹಾರಾಜಗಂಜ್ ಜಿಲ್ಲೆಯೊಂದರಲ್ಲೇ ಕಳೆದ ಹತ್ತೇ ತಿಂಗಳುಗಳಲ್ಲಿ 111 ನವಜಾತ ಶಿಶುಗಳು ನಿಗೂಢವಾಗಿ ಸಾವನ್ನಪ್ಪಿವೆ. ಅದಕ್ಕೆ ಕಾರಣ ತಾಯಿಯ ಎದೆ ಹಾಲಿನಲ್ಲಿ ಕಂಡುಬರುತ್ತಿರುವ ಕೀಟನಾಶಕ ಎಂಬ ಸಂಶಯ ವ್ಯಕ್ತವಾಗಿದೆ.

ಇದನ್ನೂ ಓದಿ: ಎದೆಹಾಲು ಉಂಡು ಬೆಳೆದ ಮಗನ ಕೃತಘ್ನತೆ; 80 ವರ್ಷ ವಯಸ್ಸಿನ ಹೆತ್ತಮ್ಮನ ಎದೆಗೇ ಒದ್ದು ಪ್ರಾಣ ತೆಗೆದ

ಲಕ್ನೋದಲ್ಲಿರುವ ಕ್ವೀನ್‌ ಮೇರಿ ಆಸ್ಪತ್ರೆಯು ನವಜಾತ ಶಿಶುಗಳ ಸಾವಿಗೆ ಕಾರಣವನ್ನು ಹುಡುಕಲೆಂದು ಸಂಶೋಧನೆಯನ್ನು ನಡೆಸಿದೆ. ಅದರಲ್ಲಿ ಗರ್ಭಿಣಿಯರ ಹಾಲನ್ನು ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲಾಗಿದೆ. ಆಗ ತಾಯಂದಿರ ಎದೆ ಹಾಲಿನಲ್ಲಿ ಕೀಟನಾಶಕದ ಅಂಶ ಇರುವುದು ಪತ್ತೆಯಾಗಿದೆ. ಮಾಂಸಾಹಾರ ಮತ್ತು ಸಸ್ಯಾಹಾರ ಸೇವಿಸುವ ಒಟ್ಟು 130 ಗರ್ಭಿಣಿಯರ ಹಾಲನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು.

ಈ ಸಂಶೋಧನೆಯನ್ನು ಪ್ರೊಫೆಸರ್ ಸುಜಾತಾ ದೇವ್, ಡಾ. ಅಬ್ಬಾಸ್ ಅಲಿ ಮೆಹಂದಿ ಮತ್ತು ಡಾ. ನೈನಾ ದ್ವಿವೇದಿ ಅವರು ನಡೆಸಿದ್ದಾರೆ. ಸಸ್ಯಾಹಾರಿ ಮಹಿಳೆಯರ ಹಾಲಿನಲ್ಲಿ ಮಾಂಸಾಹಾರಿ ಮಹಿಳೆಯರಿಗಿಂತ ಕಡಿಮೆ ಕೀಟನಾಶಕಗಳು ಕಂಡುಬಂದಿವೆ. ಆದರೆ ಕೇವಲ ಸಸ್ಯಾಹಾರವನ್ನೇ ಸೇವಿಸುವ ಮಹಿಳೆಯರ ಎದೆಹಾಲಿನಲ್ಲೂ ಕೀಟನಾಶಕಗಳು ಪತ್ತೆಯಾಗಿವೆ.

ಇದನ್ನೂ ಓದಿ: Flipkart | ಉತ್ತರಪ್ರದೇಶದ ಉನ್ನಾವೊದಲ್ಲಿ ಫ್ಲಿಪ್‌ಕಾರ್ಟ್‌ನ ಅತಿ ದೊಡ್ಡ ದಿನಸಿ ದಾಸ್ತಾನು ಕೇಂದ್ರ

ಹಸಿರು ತರಕಾರಿಗಳು ಮತ್ತು ಬೆಳೆಗಳಲ್ಲಿ ವಿವಿಧ ರೀತಿಯ ಕೀಟನಾಶಕಗಳು ಮತ್ತು ರಾಸಾಯನಿಕಗಳನ್ನು ಹಾಕಲಾಗುತ್ತದೆ. ಹಾಗೆಯೇ ಪ್ರಾಣಿಗಳಿಗೂ ಸಹ ವಿವಿಧ ರೀತಿಯ ರಾಸಾಯನಿಕಗಳನ್ನು ಇಂಜೆಕ್ಷನ್‌ ರೂಪದಲ್ಲಿ ನೀಡಲಾಗುತ್ತದೆ. ಈ ಕಾರಣಗಳಿಂದ ಮಹಿಳೆಯರ ಎದೆ ಹಾಲಿನಲ್ಲಿ ಕೀಟನಾಶಕಗಳು ಮತ್ತು ರಾಸಾಯನಿಕಗಳ ಮಿಶ್ರಣವಾಗಿದೆ ಎಂದು ಹೇಳಲಾಗಿದೆ. ಮಾಂಸಾಹಾರ ತಿನ್ನುವ ಮಹಿಳೆಯ ಎದೆ ಹಾಲಿನಲ್ಲಿ ಇರುವ ಕೀಟನಾಶಕಗಳು ಸಸ್ಯಾಹಾರಿ ಮಹಿಳೆಯರಿಗಿಂತ ಮೂರು ಪಟ್ಟು ಹೆಚ್ಚಿದೆ.

ತಾಯಂದಿರ ಎದೆ ಹಾಲು ನೇರವಾಗಿ ಶಿಶುಗಳಿಗೆ ಸೇರುವುದರಿಂದಾಗಿ ಅವರ ಆರೋಗ್ಯದಲ್ಲಿ ಏರುಪೇರಾಗಿ ಸಾವಿಗೀಡಾಗುತ್ತಿರಬಹುದು ಎಂದು ಅಂದಾಜಿಸಲಾಗಿದೆ. ಶಿಶುಗಳ ಸಾವಿನ ಬಗ್ಗೆ ತನಿಖೆ ನಡೆಸುವುದಕ್ಕೆಂದು ಮಹಾರಾಜಗಂಜ್ ಜಿಲ್ಲಾ ಆಡಳಿತವು ಮೂರು ಸದಸ್ಯರ ಸಮಿತಿಯನ್ನು ರಚಿಸಿದೆ.

Exit mobile version