ಪಾಕಿಸ್ತಾನದಿಂದ ಭಾರತದತ್ತ ಹಾರಿ ಬಂದಿದ್ದ ಡ್ರೋನ್ನ್ನು ಭಾರತೀಯ ಗಡಿ ಭದ್ರತಾ ಪಡೆ ಸಿಬ್ಬಂದಿ ಪಂಜಾಬ್ಗಡಿಯಲ್ಲಿ ಹೊಡೆದುರುಳಿಸಿದ್ದಾರೆ. ಈ ಡ್ರೋನ್ ಭಾನುವಾರ ಮಧ್ಯರಾತ್ರಿ 2.11ರ ಹೊತ್ತಿಗೆ ಭಾರತದತ್ತ ಹಾರಿ ಬರುತ್ತಿತ್ತು. ಅಮೃತ್ಸರ ಜಿಲ್ಲೆಯ ಶಾಹಜಾದಾ ಗ್ರಾಮದ ಬಳಿ ಡ್ರೋನ್ ಹಾರುತ್ತಿದ್ದ ಶಬ್ದ ಕೇಳಿ ಅಲರ್ಟ್ ಆದ ಬಿಎಸ್ಎಫ್ ಸಿಬ್ಬಂದಿ ತಕ್ಷಣವೇ ಅದರತ್ತ ಗುಂಡು ಹಾರಿಸಿದ್ದಾರೆ.
ಇದೊಂದು ಕಪ್ಪು ಬಣ್ಣದ ಡ್ರೋನ್ ಆಗಿತ್ತು. ಶಹಜಾದ್ ಗ್ರಾಮದ ದುಸ್ಸಿ ಬಂದ್ ಬಳಿ ಪತ್ತೆಯಾದ ಅದರ ಅವಶೇಷಗಳನ್ನು ಬಿಎಸ್ಎಫ್ ಸಿಬ್ಬಂದಿ ವಶಪಡಿಸಿಕೊಂಡಿದ್ದಾರೆ. ಇದೊಂದು ಮೇಡ್ ಇನ್ ಚೀನಾ ಡ್ರೋನ್ ಎನ್ನಲಾಗಿದೆ. ಸದ್ಯ ಆ ಪ್ರದೇಶದಲ್ಲಿ ಬಿಗಿ ಭದ್ರತೆ ಕಲ್ಪಿಸಲಾಗಿದೆ.
ಇದನ್ನೂ ಓದಿ: Drone terror | ಕಾಶ್ಮೀರ ಗಡಿ ಭಾಗದಲ್ಲಿ ಪಾಕಿಸ್ತಾನಿ ಡ್ರೋನ್ ಹಾರಾಟ, ಭದ್ರತಾ ಪಡೆಗಳ ದೌಡು
2022ರ ಡಿಸೆಂಬರ್ನಲ್ಲಿ ಕೂಡ ಪಂಜಾಬ್ನ ಅಮೃತಸರ್ಗೆ ಪಾಕಿಸ್ತಾನದಿಂದ ಡ್ರೊನ್ವೊಂದು ಪ್ರವೇಶ ಮಾಡಿತ್ತು. ಆಗಲೂ ಗಡಿ ಭದ್ರತಾ ಪಡೆ ಸಿಬ್ಬಂದಿ ಅದನ್ನು ಹೊಡೆದುರುಳಿಸಿದ್ದರು. ಪಾಕಿಸ್ತಾನದಿಂದ ಭಾರತದತ್ತ ಡ್ರೋನ್ ಬರುವ ಪ್ರಮಾಣ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಭಾರತದಲ್ಲಿರುವ ಉಗ್ರರಿಗೆ ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್ಐನಿಂದ ಡ್ರೋನ್ ಮೂಲಕ ಶಸ್ತ್ರಗಳನ್ನು ಮತ್ತು ಮಾದಕ ವಸ್ತುಗಳನ್ನು ಕಳಿಸುತ್ತಿದೆ. ಗುಜರಾತ್, ಜಮ್ಮು, ಪಂಜಾಬ್ ಮತ್ತು ರಾಜಸ್ಥಾನ ಗಡಿಗಳಲ್ಲಿ ಈ ಡ್ರೋನ್ ಪದೇಪದೆ ಹಾರಾಡುತ್ತಿದ್ದು, ಬಹುತೇಕ ಸಲ ನಮ್ಮ ಬಿಎಸ್ಎಫ್ ಸಿಬ್ಬಂದಿ ಅದನ್ನು ಯಶಸ್ವಿಯಾಗಿ ಹೊಡೆದುರುಳಿಸುತ್ತಿದ್ದಾರೆ.