Site icon Vistara News

ಡಬಲ್​ ಮರ್ಡರ್​ ಮಾಡಿ ಓಡಿಹೋಗಿರುವ ಆರೋಪಿಗಳ ಹೊಲದಲ್ಲಿ ಬುಲ್ಡೋಜರ್​ ಸದ್ದು; ಬೆಳೆಗಳೆಲ್ಲ ಧ್ವಂಸ

Bulldozer raze standing crops of double murder accused In Madhya Pradesh

#image_title

ಭೋಪಾಲ್​: ಮಧ್ಯಪ್ರದೇಶದಲ್ಲಿ ಯಾವುದೇ ಪ್ರಕರಣದ ಆರೋಪಿಗಳು ಕಾನೂನು ಶಿಕ್ಷೆ ಪಡೆಯುವ ಜತೆಗೆ, ಬುಲ್ಡೋಜರ್​ ಶಿಕ್ಷೆಯನ್ನೂ ಪಡೆಯುತ್ತಾರೆ. ಆರೋಪಿಗಳ ಮನೆಗಳನ್ನು ಕೆಡವಲು ಸ್ಥಳೀಯ ಆಡಳಿತಾಧಿಕಾರಿಗಳು ಜೆಸಿಬಿಯೊಟ್ಟಿಗೆ ಬಂದೇ ಬಿಡುತ್ತಾರೆ. ಇದೀಗ ಈ ಶಿಕ್ಷೆಗೆ ಗುರಿಯಾಗಿರುವುದು ನಾಲ್ವರು ಕೊಲೆ ಆರೋಪಿಗಳು. ಇಬ್ಬರನ್ನು ಹತ್ಯೆ ಮಾಡಿ, ನಾಪತ್ತೆಯಾಗಿರುವ ಆರೋಪಿಗಳಾದ ಜಾಹರ್​ ಸಿಂಗ್​, ಉಮೇದ್​ ಸಿಂಗ್​, ಮಖನ್​ ಸಿಂಗ್​ ಮತ್ತು ಅರ್ಜುನ್​ ಸಿಂಗ್​ ಎಂಬುವರಿಗೆ ಸೇರಿದ ಬೆಳೆಯನ್ನು ಬುಲ್ಡೋಜರ್​ ನೆಲಸಮ ಮಾಡಿದೆ.

ಎರಡು ವಾರಗಳ ಹಿಂದೆ ಈ ನಾಲ್ವರೂ ಸೇರಿ, ಬದ್ರಿ ಶುಕ್ಲಾ (68) ಮತ್ತು ಅವರ ಸಹೋದರ ರಾಮ್​ಸೇವಕ್​ ಶುಕ್ಲಾ (65)ರನ್ನು ಗುಂಡಿಟ್ಟು ಕೊಂದಿದ್ದರು. ಜಮೀನು ವಿವಾದದ ಕಾರಣಕ್ಕೆ ಈ ಹತ್ಯೆಯಾಗಿತ್ತು. ಫೆ.28ರಂದು ಈ ಆರೋಪಿಗಳೆಲ್ಲ ಸೇರಿ ಶುಕ್ಲಾ ಸಹೋದರರಿಗೆ ಸೇರಿದ ಹೊಲಕ್ಕೆ ಟ್ರ್ಯಾಕ್ಟರ್​ ತಂದು, ಅದನ್ನು ಉಳುಮೆ ಮಾಡಲು ಮುಂದಾಗಿದ್ದರು. ಆಗ ಶುಕ್ಲಾ ಸಹೋದರರು ಅದನ್ನು ತಡೆದಿದ್ದರು. ಅದಾಗಿ ಕೆಲವೇ ಹೊತ್ತಲ್ಲಿ, ನಾಲ್ವರು ಸೇರಿ ಶುಕ್ಲಾ ಸೋದರರ ಮನೆಗೆ ನುಗ್ಗಿ ಅವರನ್ನು ಕೊಂದಿದ್ದರು.

ಇದನ್ನೂ ಓದಿ: ಬುಲ್ಡೋಜರ್​ ಹೆಸರು ಹೇಳಿ ಹೆದರಿಸಿ ಕಾಂಗ್ರೆಸ್​ ನಾಯಕರು, ಕಾರ್ಯಕರ್ತರನ್ನು ಬಿಜೆಪಿಗೆ ಕರೆದ ಮಧ್ಯಪ್ರದೇಶ ಸಚಿವ!

ತನಿಖೆ ಕೈಗೆತ್ತಿಕೊಂಡ ಪೊಲೀಸರು ಈಗ ನಾಲ್ವರು ಸಿಂಗ್​​ಗಳಿಗೆ ಸೇರಿದ ಭೂಮಿಯಲ್ಲಿ ಬೆಳೆಯಲಾಗಿದ್ದ ಬೆಳೆಯನ್ನು ಬುಲ್ಡೋಜರ್​ ಮೂಲಕ ಧ್ವಂಸ ಮಾಡಿಸಿದ್ದಾರೆ. ಅಷ್ಟೇ ಅಲ್ಲ, ಇದು ಸರ್ಕಾರಿ ಭೂಮಿಯಾಗಿದ್ದು ನಾಲ್ವರೂ ಸೇರಿ ಅದನ್ನೆಲ್ಲ ಅತಿಕ್ರಮಣ ಮಾಡಿಕೊಂಡಿದ್ದಾರೆ. ಹಳ್ಳಿಯಲ್ಲಿರುವ ಸರ್ಕಾರಿ ಶಾಲೆಯ ಕಟ್ಟಡ, ಬೋರ್​ವೆಲ್​ಗಳನ್ನೂ ಒತ್ತುವರಿ ಮಾಡಿದ್ದು, ನಾವು ತೆರವು ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ. ಹಾಗೇ, ಆರೋಪಿಗಳಿಗೆ ಸೇರಿದ, ಸುಮಾರು 25 ಲಕ್ಷ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದ್ದಾಗಿ ತಹಸೀಲ್ದಾರ್​ ವಿಕಾಸ್​ ಅಗರ್​ವಾಲ್​ ತಿಳಿಸಿದ್ದಾರೆ.

Exit mobile version