ರೇವಾ: ಮಧ್ಯಪ್ರದೇಶದ ರೇವಾದಲ್ಲಿ ಶುಕ್ರವಾರ ರಾತ್ರಿ 11.30ರ ಹೊತ್ತಿಗೆ ಬಸ್ ಭೀಕರ ಅಪಘಾತಕ್ಕೀಡಾಗಿದ್ದು 14 ಮಂದಿ ಮೃತಪಟ್ಟಿದ್ದಾರೆ. 50ಕ್ಕೂ ಹೆಚ್ಚು ಜನ ಪ್ರಯಾಣಿಕರಿದ್ದ ಈ ಬಸ್ ರಾಷ್ಟ್ರೀಯ ಹೆದ್ದಾರಿ 30ರಲ್ಲಿ ಸಂಚರಿಸುತ್ತಿತ್ತು. ಈ ವೇಳೆ ಟ್ರಾಲಿಗೆ ಡಿಕ್ಕಿಯಾಗಿದೆ. ಪರಿಣಾಮ ಬಸ್ ಪಲ್ಟಿಯಾಗಿ ಅವಘಡ ನಡೆದಿದೆ. 40 ಪ್ರಯಾಣಿಕರಿಗೆ ಗಂಭೀರ ಗಾಯವಾಗಿದೆ.
ಅದೇ ಮಾರ್ಗದಲ್ಲಿ ಹೋಗುತ್ತಿದ್ದವರು ಬಸ್ ಪಲ್ಟಿಯಾಗಿದ್ದನ್ನು ನೋಡಿ ಪೊಲೀಸರಿಗೆ ತಿಳಿಸಿದ್ದರು. ಸ್ಥಳಕ್ಕೆ ಬಂದ ಪೊಲೀಸ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿ, ಮೃತದೇಹಗಳನ್ನು, ಗಾಯಗೊಂಡವರನ್ನೆಲ್ಲ ಆಂಬುಲೆನ್ಸ್ ಮೂಲಕ ಟೂಂಥರ್ ಸಿವಿಲ್ ಆಸ್ಪತ್ರೆಗೆ ಸಾಗಿಸಿದ್ದಾರೆ. ನಾಲ್ಕೈದು ಜನರಂತೂ ಪಲ್ಟಿಯಾದ ಬಸ್ನ ಕ್ಯಾಬಿನ್ನಲ್ಲಿ ಸಿಕ್ಕಿಬಿದ್ದಿದ್ದರು. ಬಹುತೇಕ ಎಲ್ಲರೂ ರಕ್ತದ ಮಡುವಲ್ಲೇ ಬಿದ್ದಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಸ್ ಮಧ್ಯಪ್ರದೇಶದ ಜಬಲ್ಪುರದಿಂದ ರೇವಾ ಮಾರ್ಗದ ಮೂಲಕ ಉತ್ತರ ಪ್ರದೇಶದ ಪ್ರಯಾಗ್ರಾಜ್ಗೆ ತೆರಳುತ್ತಿತ್ತು. ಸುಹಾಗಿ ಬೆಟ್ಟದ ಬಳಿ ಟ್ರಾಲಿಗೆ ಡಿಕ್ಕಿಯಾಗಿದೆ. ಬಸ್ ಪ್ರಾರಂಭದಲ್ಲಿ ಹೈದರಾಬಾದ್ನಿಂದ ಹೊರಟಿದ್ದಾಗಿದ್ದು, ಅಂತಿಮವಾಗಿ ಗೋರಖ್ಪುರಕ್ಕೆ ತಲುಪಬೇಕಿತ್ತು. ಬಸ್ನಲ್ಲಿದ್ದ ಬಹುತೇಕರು ಉತ್ತರಪ್ರದೇಶದವರೇ ಆಗಿದ್ದರು ಎಂದು ರೇವಾ ಎಸ್ಪಿ ನವನೀತ್ ಭಾಸಿನ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಬರೋಡಾ ಮಹಿಳೆಯರ ಕ್ರಿಕೆಟ್ ತಂಡ ಪ್ರಯಾಣಿಸುತ್ತಿದ್ದ ಬಸ್ ಅಪಘಾತ, ನಾಲ್ವರಿಗೆ ಗಾಯ