ಮುಂಬೈ: ಚಂಡೀಗಢ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರ ಸ್ನಾನದ ವಿಡಿಯೊ ಲೀಕ್ ಆದ (MMS Scandal) ಬೆನ್ನಲ್ಲೇ ಐಐಟಿ-ಬಾಂಬೆಯ ಹಾಸ್ಟೆಲ್‌ನ ಬಾತ್‌ರೂಮ್‌ನಲ್ಲಿದ್ದ ವಿದ್ಯಾರ್ಥಿನಿಯ ವಿಡಿಯೊ ರೆಕಾರ್ಡ್ ಮಾಡುತ್ತಿದ್ದ ಕಾರಣ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ವ್ಯಕ್ತಿಯು ಹಾಸ್ಟೆಲ್‌ನ ಕ್ಯಾಂಟೀನ್ ಕೆಲಸಗಾರ ಎಂದು ತಿಳಿದುಬಂದಿದೆ.
ವಿದ್ಯಾರ್ಥಿನಿಯು ಬಾತ್‌ರೂಮ್‌ಗೆ ಹೋಗುವುದನ್ನೇ ಕಾಯುತ್ತಿದ್ದ ವ್ಯಕ್ತಿಯು, ಆಕೆ ಬಾತ್‌ರೂಮ್ ಪ್ರವೇಶಿಸಿದ ಕೂಡಲೇ ಕಿಟಕಿಯಲ್ಲಿ ಇಣುಕಿ, ವಿಡಿಯೊ ಮಾಡುತ್ತಿದ್ದ. ಇದನ್ನು ತಿಳಿದ ಕೂಡಲೇ ವಿದ್ಯಾರ್ಥಿನಿಯು ಗೆಳೆತಿಯರು ಹಾಗೂ ಸಂಸ್ಥೆಯ ಅಧಿಕಾರಿಗಳಿಗೆ ಈ ಕುರಿತು ಮಾಹಿತಿ ನೀಡಿದ್ದಾಳೆ. ಸ್ಥಳಕ್ಕೆ ಬಂದ ಸಿಬ್ಬಂದಿಯು ವ್ಯಕ್ತಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆ ಕುರಿತು ತಿಳಿಯುತ್ತಲೇ ಸ್ಥಳಕ್ಕೆ ಡೀನ್‌ಗಳು ಸೇರಿ ಹಲವರು ಆಗಮಿಸಿ ಪರಿಶೀಲಿಸಿದ್ದಾರೆ. ಆದಾಗ್ಯೂ, ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿಲ್ಲ ಎಂದು ತಿಳಿದುಬಂದಿದೆ. ಇತ್ತೀಚೆಗೆ ಪಂಜಾಬ್‌ನ ಚಂಡೀಗಢ ವಿವಿಯಲ್ಲಿ ವಿದ್ಯಾರ್ಥಿನಿಯರು ಸ್ನಾನ ಮಾಡುತ್ತಿರುವ ವಿಡಿಯೊ ಜಾಲತಾಣಗಳಲ್ಲಿ ಲೀಕ್ ಆಗಿದ್ದು ದೇಶಾದ್ಯಂತ ಸುದ್ದಿಯಾಗಿದೆ. ಈ ಕುರಿತು ಉನ್ನತ ತನಿಖೆಗೆ ಆದೇಶಿಸಲಾಗಿದೆ.
ಇದನ್ನೂ ಓದಿ | ಟ್ವಿಟರ್ನಲ್ಲಿ 20 ರೂ.ಗೆ ಮಾರಾಟಕ್ಕಿವೆ ಮಕ್ಕಳ ಅಶ್ಲೀಲ ವಿಡಿಯೊಗಳು; ದೆಹಲಿ ಮಹಿಳಾ ಆಯೋಗದ ಅಧ್ಯಕ್ಷೆ ಆರೋಪ