ಮಾದಕವಸ್ತು ನಿಯಂತ್ರಣ ಬ್ಯುರೋ (ಎನ್‌ಸಿಬಿ) ಮಾಜಿ ವಲಯ ನಿರ್ದೇಶಕ, ಮುಂಬೈನಲ್ಲಿ ಕಳೆದ ವರ್ಷ ಐಷಾರಾಮಿ ಹಡಗಿನಲ್ಲಿ ರೇವು ಪಾರ್ಟಿ ನಡೆಯುವ ವೇಳೆ ದಾಳಿ ನಡೆಸಿ, ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದ ಸಮೀರ್ ವಾಂಖೆಡೆ ವಿರುದ್ಧ ಇದೀಗ ಸಿಬಿಐ ಅಧಿಕಾರಿಗಳು ಭ್ರಷ್ಟಾಚಾರ ಕೇಸ್ ದಾಖಲು ಮಾಡಿದ್ದಾರೆ.
ಆರ್ಯನ್ ಖಾನ್ರನ್ನು ಬಂಧಿಸುವ ವೇಳೆ ಎನ್‌ಸಿಬಿ ವಲಯ ನಿರ್ದೇಶಕರಾಗಿದ್ದ ಸಮೀರ್ ವಾಂಖೆಡೆ ವಿರುದ್ಧ ಮಹಾರಾಷ್ಟ್ರದ ಅಂದಿನ ಮಾಜಿ ಸಚಿವ ನವಾಬ್ ಮಲಿಕ್ ಹಲವು ಆರೋಪಗಳನ್ನು ಮಾಡಿದ್ದರು. ಅದರಲ್ಲಿ ಒಂದು ಸಮೀರ್ ವಾಂಖೆಡೆ ಅವರು ನಕಲಿ ಜಾತಿ ಪ್ರಮಾಣ ಪತ್ರ ನೀಡಿ, ಸರ್ಕಾರಿ ಹುದ್ದೆ ಪಡೆದಿದ್ದಾರೆ ಎಂಬುದೂ ಆಗಿತ್ತು. ಆ ಕೇಸ್ನಲ್ಲಿ ಬಳಿಕ ಅವರಿಗೆ ಮಹಾರಾಷ್ಟ್ರದ ಜಾತಿ ಪರಿಶೀಲನಾ ಸಮಿತಿ ಕ್ಲೀನ್ ಚಿಟ್ ನೀಡಿತ್ತು. 2021ರಲ್ಲಿ ಎನ್‌ಸಿಬಿ ವಲಯ ನಿರ್ದೇಶಕರಾಗಿ ಅವರ ಅವಧಿ ಮುಗಿದಿತ್ತು. ಬಳಿಕ ಕಂದಾಯ ಇಲಾಖೆಗೆ ವರ್ಗಾವಣೆಗೊಂಡಿದ್ದರು.
ಇದನ್ನೂ ಓದಿ: Sameer Wankhede | ಹುಟ್ಟಿನಿಂದಲೇ ಮುಸ್ಲಿಮನಲ್ಲ; ಸಮೀರ್ ವಾಂಖೆಡೆಗೆ ಕ್ಲೀನ್ ಚಿಟ್
ಇದೀಗ ಸಮೀರ್ ವಾಂಖೆಡೆ ಅವರು ಭ್ರಷ್ಟಾಚಾರದ ಮೂಲಕ ಆಸ್ತಿ ಗಳಿಕೆ ಮಾಡಿರುವ ಆರೋಪದಡಿ ಅವರ ವಿರುದ್ಧ ಸಿಬಿಐ ಭ್ರಷ್ಟಾಚಾರ ಕೇಸ್ ದಾಖಲು ಮಾಡಿಕೊಂಡಿದ್ದು, ಅದರ ತನಿಖೆಯ ಭಾಗವಾಗಿ ಅಂಧೇರಿ, ಮುಂಬಯಿಯಲ್ಲಿರುವ ಅವರ ನಿವಾಸ, ಸಮೀರ್ ವಾಂಖೆಡೆಗೆ ಸೇರಿ 29 ಪ್ರದೇಶಗಳ ಮೇಲೆ ರೇಡ್ ಮಾಡಿದೆ.