Site icon Vistara News

CBI Raid | ರೈಲ್ವೆ ಇಲಾಖೆಯ ನಿವೃತ್ತ ಅಧಿಕಾರಿ ಮನೆಯಲ್ಲಿ 17 ಕೆ.ಜಿ. ಬಂಗಾರ, 1.5 ಕೋಟಿ ರೂ. ನಗದು!

ಭುವನೇಶ್ವರ: ಒಡಿಶಾದ ಭುವನೇಶ್ವರದಲ್ಲಿ ಕೇಂದ್ರೀಯ ತನಿಖಾ ದಳವು ರೈಲ್ವೆ ಇಲಾಖೆಯ ನಿವೃತ್ತ ಅಧಿಕಾರಿಯೊಬ್ಬರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ (CBI Raid) ನಡೆಸಿದೆ. ಆ ಸ್ಥಳಗಳಿಂದ 17 ಕೆ.ಜಿ. ಚಿನ್ನಾಭರಣ, 1.5 ಕೋಟಿ ರೂ. ನಗದು ಸೇರಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿರುವುದಾಗಿ ಸಿಬಿಐ ಅಧಿಕಾರಿಗಳು ಮಂಗಳವಾರ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: CBI Enquiry : ಗುರುರಾಘವೇಂದ್ರ, ವಸಿಷ್ಠ ಸೌಹಾರ್ದ ಬ್ಯಾಂಕ್ ಹಗರಣ ಸಿಬಿಐಗೆ : ಸಹಕಾರ ಸಚಿವ ಎಸ್.ಟಿ. ಸೋಮಶೇಖರ್

1987ರ ಬ್ಯಾಚಿನ ರೈಲ್ವೆ ಸಂಚಾರ ಸೇವಾ ಅಧಿಕಾರಿ ಪ್ರಮೋದ್‌ ಕುಮಾರ್‌ ಜೇನಾ ಅವರು ಕಳೆದ ನವೆಂಬರ್‌ನಲ್ಲಿ ರೈಲ್ವೆಯ ಪ್ರಧಾನ ಮುಖ್ಯ ವ್ಯವಸ್ಥಾಪಕರಾಗಿ ನಿವೃತ್ತರಾಗಿದ್ದಾರೆ. ಆದರೆ ಅವರು ಆದಾಯಕ್ಕೂ ಮೀರಿದ ಆಸ್ತಿ ಸಂಪಾದಿಸಿರುವ ಆರೋಪವಿತ್ತು. ಈ ಸಂಬಂಧ ಸಿಬಿಐ ಅಧಿಕಾರಿಗಳು ಜ.3ರಂದು ಪ್ರಕರಣ ದಾಖಲಿಸಿಕೊಂಡಿದ್ದರು. ಆ ಹಿನ್ನೆಲೆಯಲ್ಲಿ ಪ್ರಮೋದ್‌ ಹಾಗೂ ಅವರ ಕುಟುಂಬಸ್ಥರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಲಾಗಿದೆ. ಒಡಿಸ್ಸಾದ ಭುವನೇಶ್ವರ ಮತ್ತು ಜಗತ್‌ಸಿಂಗ್‌ಪುರ ಹಾಗೂ ಪಶ್ಚಿಮ ಬಂಗಾಳದ ಕೋಲ್ಕೊತಾದಲ್ಲಿ ಶೋಧ ನಡೆಸಲಾಗಿದೆ.

ISRO Spying Case | ನಂಬಿ ನಾರಾಯಣನ್‌ ವಿರುದ್ಧದ ಆರೋಪ ಸುಳ್ಳು, ಇದು ಜಾಗತಿಕ ಪಿತೂರಿ, ಕೇರಳ ಹೈಕೋರ್ಟ್‌ಗೆ ಸಿಬಿಐ ಮಾಹಿತಿ

1.57 ಕೋಟಿ ರೂ. ನಗದು, 3.33 ಕೋಟಿ ನಿಶ್ಚಿತ ಠೇವಣಿ, ಬ್ಯಾಂಕ್‌ ಖಾತೆಗಳಲ್ಲಿ 1.51 ಕೋಟಿ ರೂ. ಉಳಿತಾಯ, 47.75 ಲಕ್ಷ ರೂ. ಮ್ಯುಚುಯಲ್‌ ಫಂಡ್‌, 17 ಕೆ.ಜಿ ತೂಕದ ಚಿನ್ನಾಭರಣ(9.5 ಕೋಟಿ ರೂ. ಮೌಲ್ಯ) ಹಾಗೂ ಆಸ್ತಿಗಳಿಗೆ ಸಂಬಂಧಪಟ್ಟಂತಹ ದಾಖಲೆಗಳು ಸಿಬಿಐ ಅಧಿಕಾರಿಗಳಿಗೆ ಸಿಕ್ಕಿದೆ. ಈ ಎಲ್ಲವನ್ನು ಅಧಿಕಾರಿಗಳು ವಶ ಪಡಿಸಿಕೊಂಡಿರುವುದಾಗಿ ತಿಳಿಸಲಾಗಿದೆ.

Exit mobile version