ರಾಂಚಿ: ಆರ್ಜೆಡಿಯ ನಾಲ್ವರು ಪ್ರಮುಖ ನಾಯಕರ ಮನೆಗಳ ಮೇಲೆ ಇಂದು ಬೆಳಗ್ಗೆ ಸಿಬಿಐ ರೇಡ್ (CBI Raids) ಮಾಡಿದೆ. ಅದರ ಮುಂದುವರಿದ ಭಾಗವಾಗಿ ಗುರುಗ್ರಾಮದ ವೈಟ್ಲ್ಯಾಂಡ್ ಅರ್ಬನ್ ಕ್ಯೂಬ್ಸ್ ಮಾಲ್ ಮೇಲೆ ಕೂಡ ಸಿಬಿಐ ದಾಳಿ ಮಾಡಿದೆ. ಇದು ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ಗೆ ಸೇರಿದ ಮಾಲ್ ಎಂದು ಹೇಳಲಾಗಿದೆ.
ಲಾಲು ಪ್ರಸಾದ್ ಯಾದವ್ ಕೇಂದ್ರದಲ್ಲಿ ರೈಲ್ವೆ ಮಂತ್ರಿಯಾಗಿದ್ದಾಗ ನಡೆದಿದೆ ಎನ್ನಲಾದ ‘ಉದ್ಯೋಗಕ್ಕಾಗಿ ಭೂಮಿ’ ಹಗರಣದ ತನಿಖೆ ಭಾಗವಾಗಿ ಇಂದು ಬೆಳಗ್ಗೆ ಆರ್ಜೆಡಿ ವಿಧಾನ ಪರಿಷತ್ ಸದಸ್ಯ ಸುನಿಲ್ ಸಿಂಗ್, ರಾಜ್ಯ ಸಭಾ ಸಂಸದರಾದ ಅಷ್ಫಾಕ್ ಕರೀಮ್, ಫಯಾಜ್ ಅಹ್ಮದ್ ಮತ್ತು ಮಾಜಿ ಎಂಎಲ್ಸಿ ಸುಬೋಧ್ ರಾಯ್ ಮನೆ ಮೇಲೆ ಸಿಬಿಐ ಅಟ್ಯಾಕ್ ಆಗಿತ್ತು. ಈ ಉದ್ಯೋಗ ಹಗರಣಕ್ಕೆ ಸಂಬಂಧಪಟ್ಟಂತೆ ದೆಹಲಿ, ಗುರುಗ್ರಾಮ, ಪಟನಾ, ಕಠಿಹಾರ್, ಮಧುಬಾನಿ ಸೇರಿ ಒಟ್ಟು 25 ಸ್ಥಳಗಳಲ್ಲಿ ಸಿಬಿಐ ಶೋಧ ನಡೆಸಿದೆ.
ಇತ್ತೀಚೆಗೆ ಬಿಹಾರದಲ್ಲಿ ಮಹಾ ಘಟ್ ಬಂಧನ್ ಸರ್ಕಾರ ರಚನೆಯಾಗುತ್ತಿದ್ದಂತೆ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದರು. ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ, ಇಡಿ, ಸಿಬಿಐ, ಐಟಿ ಮತ್ತಿತರ ತಿಖಾ ದಳಗಳ ಮೂಲಕ ಪ್ರತಿಪಕ್ಷಗಳನ್ನು ಬೆದರಿಸುವ ಕೆಲಸ ಮಾಡುತ್ತಿದೆ ಎಂದು ಆರೋಪ ಮಾಡಿದ್ದರು. ಈಗ ಅವರಿಗೆ ಸೇರಿದ ಒಂದು ಮಾಲ್ ಮೇಲೆ ಕೂಡ ಸಿಬಿಐ ದಾಳಿ ಮಾಡಿದೆ.
ಇದನ್ನೂ ಓದಿ: Land For Job Case | ಬಿಹಾರದಲ್ಲಿಂದು ವಿಶ್ವಾಸ ಮತ ಯಾಚನೆ; ಇಂದೇ ಸಿಬಿಐ ರೇಡ್ !