ನವ ದೆಹಲಿ: ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) 10ನೇ ತರಗತಿ ಫಲಿತಾಂಶ ಕೂಡ ಪ್ರಕಟಗೊಂಡಿದೆ (CBSE Class 10 Results). ಸಿಬಿಎಸ್ಇ 10ನೇ ತರಗತಿ ಫಲಿತಾಂಶವನ್ನು http://cbseresults.nic.in ಮತ್ತು http://cbse.gov.in ವೆಬ್ಸೈಟ್ಗಳಲ್ಲಿ ವೀಕ್ಷಿಸಬಹುದಾಗಿದೆ. ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಈ ವೆಬ್ಸೈಟ್ಗಳಲ್ಲಿ ಒಟ್ಟು ಮೂರು ಲಿಂಕ್ಗಳನ್ನು ಕೊಡಲಾಗಿದ್ದು, ಅವುಗಳ ಮೂಲಕ ಫಲಿತಾಂಶ ವೀಕ್ಷಣೆ ಮಾಡಬಹುದು. ಈ ಬಾರಿಯ ಸಿಬಿಎಸ್ಇ ಪರೀಕ್ಷೆಯಲ್ಲಿ ಶೇ.93.12ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಸಿಬಿಎಸ್ಇ 12ನೇ ತರಗತಿ ವಿದ್ಯಾರ್ಥಿಗಳಿಂದ 10ನೇ ತರಗತಿ ವಿದ್ಯಾರ್ಥಿಗಳಿಗೂ ಕೂಡ ಯಾವುದೇ ಮೆರಿಟ್ ಲಿಸ್ಟ್ ಬಿಡುಗಡೆ ಮಾಡದೆ ಇರಲು ಸಿಬಿಎಸ್ಇ ನಿರ್ಧಾರ ಮಾಡಿದೆ. ಹಾಗೇ, ಬಹುತೇಕ ವಿಷಯಗಳಲ್ಲಿ ಹೆಚ್ಚಿನ ಅಂಕ ಪಡೆದ ಶೇ.0.1 ವಿದ್ಯಾರ್ಥಿಗಳಿಗೆ ಅರ್ಹತಾ ಸರ್ಟಿಫಿಕೇಟ್ ನೀಡಲು ನಿರ್ಧಾರ ಮಾಡಿದೆ.
ಫಲಿತಾಂಶ ವೀಕ್ಷಣೆ ಹೇಗೆ?
1. ರಿಸಲ್ಟ್ ನೋಡುವ ವಿದ್ಯಾರ್ಥಿಗಳು ಮೊದಲು cbseresults.nic.in ಅಥವಾ cbse.gov.in ವೆಬ್ಸೈಟ್ಗೆ ಹೋಗಬೇಕು
2. ಆಗ ಅವರಿಗೆ ಒಂದು ಬಾಕ್ಸ್ ಕಾಣಿಸುತ್ತದೆ. ಅಲ್ಲಿ ವಿದ್ಯಾರ್ಥಿಗಳು ತಮ್ಮ ರೋಲ್ ನಂಬರ್, ಅಡ್ಮಿಟ್ ಕಾರ್ಡ್ ಐಡಿ, ಶಾಲೆಯ ನಂಬರ್ ಮತ್ತು ಡೇಟ್ ಆಫ್ ಬರ್ತ್ ನಮೂದಿಸಬೇಕು.
3. ಇವೆಲ್ಲ ಮಾಹಿತಿಗಳನ್ನು ತುಂಬಿ ಸಬ್ಮಿಟ್ ಬಟನ್ ಕ್ಲಿಕ್ ಮಾಡಿದಾಗ ರಿಸಲ್ಟ್ ಕಾಣಿಸುತ್ತದೆ. ವಿದ್ಯಾರ್ಥಿಗಳು ಅದನ್ನು ಡೌನ್ಲೋಡ್ ಮಾಡಿಟ್ಟುಕೊಳ್ಳಬಹುದು.
ಇದು ಹೊರತುಪಡಿಸಿ ಡಿಜಿ ಲಾಕರ್ ಮತ್ತು UMANG (ಉಮಂಗ್) ಆ್ಯಪ್ನಲ್ಲೂ ಕೂಡ ಫಲಿತಾಂಶ ನೋಡಬಹುದಾಗಿದೆ.
ಇದನ್ನೂ ಓದಿ: CBSE Class 12 Results: ಸಿಬಿಎಸ್ಇ 12ನೇ ತರಗತಿ ಫಲಿತಾಂಶ ಪ್ರಕಟ; ಯಾವ ವೆಬ್ಸೈಟ್ನಲ್ಲಿ ಸಿಗಲಿದೆ ರಿಸಲ್ಟ್?