ಕೇಂದ್ರ ಪ್ರೌಢ ಶಿಕ್ಷಣ ಮಂಡಳಿ (CBSE) 12ನೇ ತರಗತಿ ಪರೀಕ್ಷೆಯ ಫಲಿತಾಂಶ (CBSE Class 12 Results) ಪ್ರಕಟವಾಗಿದೆ. cbse.nic.in ಮತ್ತು cbse.gov.in ವೆಬ್ಸೈಟ್ಗಳಲ್ಲಿ ರಿಸಲ್ಟ್ ವೀಕ್ಷಣೆ ಮಾಡಬಹುದಾಗಿದೆ. ಪ್ರಸಕ್ತ ಸಾಲಿನಲ್ಲಿ ಶೇ.87.33ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷ ಸಿಬಿಎಸ್ಸಿ ಪಾಸ್ ಪರ್ಸಂಟೇಜ್ ಶೇ.92.71ರಷ್ಟಿತ್ತು. ಅದಕ್ಕೆ ಹೋಲಿಸಿದರೆ ಈ ಸಲ ಕಡಿಮೆಯಾಗಿದೆ. ಅಂದಹಾಗೇ, ಈ ಸಲ ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ ಫೆ.15ರಿಂದ ಶುರುವಾಗಿ ಏಪ್ರಿಲ್ 5ರವರೆಗೆ ನಡೆದಿತ್ತು. ಸುಮಾರು 17 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಅದಕ್ಕೂ ಮೊದಲು ಜನವರಿ 2ರಿಂದ 14ರವರೆಗೆ ಸಿಬಿಎಸ್‌ಇ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಾಕ್ಟಿಕಲ್ ಪರೀಕ್ಷೆಗಳು ನಡೆದಿದ್ದವು.
ಫಲಿತಾಂಶ ವೀಕ್ಷಣೆ ಹೇಗೆ?
1. ಪರೀಕ್ಷೆ ಬರೆದ ವಿದ್ಯಾರ್ಥಿಗಳು http://cbse.nic.in ಮತ್ತು http://cbse.gov.in ವೆಬ್ಸೈಟ್ಗಳಿಗೆ ಭೇಟಿ ಕೊಡಿ
2. ಅಲ್ಲಿ ಪರೀಕ್ಷಾ ಫಲಿತಾಂಶ ವಿಭಾಗಕ್ಕೆ ಹೋದರೆ ನಿಮ್ಮ ರೋಲ್ ನಂಬರ್, ಪ್ರವೇಶ ಪತ್ರದ ಐಡಿ ಮತ್ತು ಶಾಲೆಯ ನಂಬರ್ ಕೇಳುತ್ತದೆ. ನೀವು ಈ ಮಾಹಿತಿಯನ್ನೆಲ್ಲ ನೀಡಿ ಸಬ್ಮಿಟ್ ಬಟನ್ ಒತ್ತಿದರೆ ನಿಮ್ಮ ಫಲಿತಾಂಶ ಕಾಣಿಸುತ್ತದೆ.
3. ನೀವು ಆ ಫಲಿತಾಂಶ ಕಾರ್ಡ್ನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಪ್ರಿಂಟ್ ಕೂಡ ತೆಗೆದಿಟ್ಟುಕೊಳ್ಳಬಹುದು.
ಡಿಜಿ ಲಾಕರ್ನಲ್ಲಿ ಫಲಿತಾಂಶ ವೀಕ್ಷಣೆ ಹೇಗೆ?
ಸಿಬಿಎಸ್‌ಇ ಫಲಿತಾಂಶವನ್ನು ಡಿಜಿಲಾಕರ್ನಲ್ಲಿ ಕೂಡ ವೀಕ್ಷಿಸಬಹುದಾಗಿದೆ. https://cbseservices.digilocker.gov.in/activatecbse ಲಿಂಕ್ ಕ್ಲಿಕ್ ಮಾಡಿದರೆ ಒಂದು ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ. ಅದರಲ್ಲಿ ಕೆಳಗೆ ಕಾಣಿಸುವ Get started with Account Confirmation ಎಂಬ ಹಸಿರು ಬಣ್ಣದ ಬಟನ್ ಮೇಲೆ ಕ್ಲಿಕ್ ಮಾಡಬೇಕು. ಬಳಿಕ ಅಲ್ಲಿ ರೋಮನ್ ಅಂಕಿ X11 (12)ನ್ನು ಮಾರ್ಕ್ ಮಾಡಿಕೊಂಡು, ನಿಮ್ಮ ಶಾಲೆ ನಂಬರ್, ರೋಲ್ ನಂಬರ್, ಪಿನ್, ಮೊಬೈಲ್ ನಂಬರ್ ಮತ್ತಿತರ ವಿವರಗಳನ್ನು ತುಂಬಿದರೆ, ಫಲಿತಾಂಶ ನೋಡಬಹುದು.
ಇದನ್ನೂ ಓದಿ: CBSE Board Exam 2023: ಸಿಬಿಎಸ್‌ಇ 10 ಮತ್ತು 12ನೇ ತರಗತಿ ಪರೀಕ್ಷೆ ಇಂದಿನಿಂದ ಆರಂಭ
ಈ ವರ್ಷದ ಸಿಬಿಎಸ್‌ಇ ಫಲಿತಾಂಶದಲ್ಲಿ ಕೇರಳದ ತಿರುವನಂತಪುರಂ ಶೇ.99.91ಪಾಸ್ ಪರ್ಸಂಟೇಜ್ನೊಂದಿಗೆ ಅಗ್ರಸ್ಥಾನದಲ್ಲಿ ಇದೆ. ಈ ಸಲ ವಿದ್ಯಾರ್ಥಿಗಳಿಗೆ ಅವರ ಅಂಕಗಳ ಆಧಾರದ ಮೇಲೆ ಪ್ರಥಮ-ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಕೊಡುವುದಿಲ್ಲ. ಮೆರಿಟ್ ಲಿಸ್ಟ್ ಬಿಡುಗಡೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಸಿಬಿಎಸ್‌ಇ, ಹಲವು ವಿಷಯಗಳಲ್ಲಿ ಅತ್ಯಂತ ಹೆಚ್ಚು ಅಂಕ ಪಡೆದ ಶೇ.0.1ವಿದ್ಯಾರ್ಥಿಗಳಿಗೆ ಅರ್ಹತಾ ಪ್ರಮಾಣ ಪತ್ರ ನೀಡುವುದಾಗಿ ಬೋರ್ಡ್ ತಿಳಿಸಿದೆ.