Site icon Vistara News

ISRO | ಭಾರಿ ಗಾತ್ರದ ಎಂಜಿನ್‌ ಪರೀಕ್ಷೆ ಯಶಸ್ವಿ, ಮತ್ತೊಂದು ಉಡಾವಣೆಗೆ ಸಜ್ಜಾದ ಇಸ್ರೊ

ISRO Engine

ಚೆನ್ನೈ: ಇತ್ತೀಚೆಗಷ್ಟೇ ಮೊದಲ ಬಾರಿಗೆ ವಾಣಿಜ್ಯಿಕ ಉಡಾವಣೆ ಮಾಡುವ ಮೂಲಕ ಜಾಗತಿಕ ಬಾಹ್ಯಾಕಾಶ ಮಾರುಕಟ್ಟೆಗೆ ಪ್ರವೇಶಿಸಿರುವ ಇಸ್ರೊ (ISRO) ಈಗ ಮತ್ತೊಂದು ವಾಣಿಜ್ಯಿಕ ಉಡಾವಣೆಗೆ ಸಜ್ಜಾಗಿದೆ. ಭಾರಿ ಗಾತ್ರದ ರಾಕೆಟ್‌ನ ಸಿಇ-20 (CE-20) ಎಂಜಿನ್‌ನ ಪರೀಕ್ಷೆ ಯಶಸ್ವಿಯಾಗಿದೆ.

ಇದು ಆಗಸದಲ್ಲಿ ಹೇಗೆ ಉಷ್ಣಾಂಶ ಸ್ವೀಕರಿಸುವ ಸಾಮರ್ಥ್ಯದ ಕುರಿತು (Acceptance Hot test) ತಮಿಳುನಾಡಿನ ಮಹೇಂದ್ರಗಿರಿಯಲ್ಲಿರುವ ಹೈ ಆಲ್ಟಿಟ್ಯೂಡ್‌ ಟೆಸ್ಟ್‌ ಫೆಸಿಲಿಟಿ ಆಫ್‌ ಇಸ್ರೊ ಪ್ರೊಪಲ್ಶನ್‌ ಕಾಂಪ್ಲೆಕ್ಸ್‌ನಲ್ಲಿ ಪರೀಕ್ಷೆ ನಡೆಸಿಲಾಗಿದೆ.

ಕೆಲ ದಿನಗಳ ಹಿಂದಷ್ಟೇ ಒನ್‌ವೆಬ್‌ನ 36 ಉಪಗ್ರಹಗಳನ್ನು ಇಸ್ರೊ ಯಶಸ್ವಿಯಾಗಿ ಉಡಾವಣೆ ಮಾಡಿತ್ತು. ಈಗ ಇದೇ ಒನ್‌ವೆಬ್‌ನ 36 ಉಪಗ್ರಹಗಳನ್ನು ಮುಂದಿನ ವರ್ಷ ಉಡಾವಣೆ ಮಾಡಲಾಗುತ್ತಿದೆ. ಇದಕ್ಕಾಗಿ ಎಲ್‌ವಿಎಂ3-ಎಂ3 (LVM3-M3) ರಾಕೆಟ್‌ಅನ್ನು ನಿಯೋಜಿಸಲಾಗಿದೆ. ಇದೇ ರಾಕೆಟ್‌ನ ಎಂಜಿನ್‌ಅನ್ನು ಇಸ್ರೊ ಪರೀಕ್ಷೆ ಮಾಡಿದೆ.

ಇದನ್ನೂ ಓದಿ | ISRO | ದೇಶದ ಮೊದಲ ವಾಣಿಜ್ಯಿಕ ಉಡಾವಣೆ ಯಶಸ್ವಿ, 36 ಉಪಗ್ರಹ ನಭಕ್ಕೆ ಹಾರಿಸಿ ಇಸ್ರೊ ಇತಿಹಾಸ

Exit mobile version