ನವದೆಹಲಿ: ದೇಶೀಯ ಮಾರುಕಟ್ಟೆಯಲ್ಲಿ ಲಭ್ಯತೆ ಹಾಗೂ ಬೆಲೆ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವು ಸಕ್ಕರೆ ರಫ್ತು ಮೇಲಿನ ನಿರ್ಬಂಧಗಳನ್ನು (Sugar Export Ban) ಒಂದು ವರ್ಷ ವಿಸ್ತರಣೆ ಮಾಡಿದೆ. ದೇಶದಲ್ಲಿ ಹಣದುಬ್ಬರದಿಂದಾಗಿ ಅಗತ್ಯ ವಸ್ತುಗಳ ಬೆಲೆಯೇರಿಕೆಯುಂಟಾಗಿದ್ದು, ಇದನ್ನು ತಡೆಯುವ ದಿಸೆಯಲ್ಲಿ 2023ರ ಅಕ್ಟೋಬರ್ 31ರವರೆಗೆ ಸಕ್ಕರೆ ರಫ್ತು ನಿರ್ಬಂಧಿಸಿದೆ.
“ಸಕ್ಕರೆ (ಕಚ್ಚಾ, ಸಂಸ್ಕರಿತ ಹಾಗೂ ಬಿಳಿ ಸಕ್ಕರೆ) ರಫ್ತು ಮಾಡುವುದರ ಮೇಲಿನ ನಿರ್ಬಂಧವನ್ನು 2023ರ ಅಕ್ಟೋಬರ್ 31 ಅಥವಾ ಮುಂದಿನ ಆದೇಶದವರೆಗೆ ವಿಸ್ತರಿಸಲಾಗಿದೆ. ಉಳಿದಂತೆ ಎಲ್ಲ ನಿಯಮಗಳು ಮೊದಲಿನಂತೆಯೇ ಇರಲಿವೆ” ಎಂದು ವಿದೇಶ ವ್ಯಾಪಾರದ ಮಹಾ ನಿರ್ದೇಶನಾಲಯ (DGFT)ದ ಅಧಿಸೂಚನೆ ತಿಳಿಸಿದೆ.
ಭಾರತವು ಪ್ರಸಕ್ತ ವರ್ಷದಲ್ಲಿ ಜಗತ್ತಿನಲ್ಲಿಯೇ ಅತಿ ಹೆಚ್ಚು ಸಕ್ಕರೆ ಉತ್ಪಾದಿಸಿದ ಎರಡನೇ ರಾಷ್ಟ್ರ ಹಾಗೂ ಜಗತ್ತಿನಲ್ಲೇ ಅತಿ ಹೆಚ್ಚು ಸಕ್ಕರೆ ರಫ್ತು ಮಾಡಿದ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ರಫ್ತು ಮೇಲಿನ ನಿರ್ಬಂಧ ಎಂದರೆ ಸಂಪೂರ್ಣ ನಿಷೇಧವಲ್ಲ. ಟಾರಿಫ್ ರೇಟ್ ಕೋಟಾ ಅಡಿಯಲ್ಲಿ ನಿಗದಿತ ಪ್ರಮಾಣದ ಸಕ್ಕರೆಯನ್ನು ಐರೋಪ್ಯ ಒಕ್ಕೂಟದ ಕೆಲ ರಾಷ್ಟ್ರಗಳು, ಅಮೆರಿಕ ಸೇರಿ ಹಲವು ರಾಷ್ಟ್ರಗಳಿಗೆ ರಫ್ತು ಮಾಡಲಿದೆ.
ಇದನ್ನೂ ಓದಿ | Raghuram Rajan | ಭಾರತಕ್ಕೆ ಚೀನಾ ಮಾದರಿಯ ಉತ್ಪಾದನೆಗಿಂತ ಸೇವಾ ರಫ್ತು ಸೂಕ್ತ: ರಘುರಾಮ್ ರಾಜನ್