Site icon Vistara News

Same Sex Marriage: ಸಲಿಂಗಿಗಳ ಮದುವೆಗೆ ಕೇಂದ್ರ ವಿರೋಧ, ಕುಟುಂಬ ಕಲ್ಪನೆಗೆ ಧಕ್ಕೆ ಎಂದು ಸುಪ್ರೀಂಗೆ ಸ್ಪಷ್ಟನೆ

Same Sex Marriage

Same Sex Marriage

ನವದೆಹಲಿ: ದೇಶದಲ್ಲಿ ಸಲಿಂಗಿಗಳ ಮದುವೆಯನ್ನು ಕಾನೂನುಬದ್ಧಗೊಳಿಸುವ (Same Sex Marriage:) ಕುರಿತು ಕೇಂದ್ರ ಸರ್ಕಾರ ವಿರೋಧ ವ್ಯಕ್ತಪಡಿಸಿದೆ. ಸಲಿಂಗಿಗಳ ಜೋಡಿಯು ಮದುವೆ ಕಾನೂನುಬದ್ಧಗೊಳಿಸಬೇಕು ಎಂಬುದಾಗಿ ಸಲ್ಲಿಕೆಯಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ವಿಚಾರಣೆ ನಡೆಸುವ ವೇಳೆ ನ್ಯಾಯಾಲಯಕ್ಕೆ ಕೇಂದ್ರ ಸರ್ಕಾರ ಈ ಕುರಿತು ಸ್ಪಷ್ಟಪಡಿಸಿದೆ.

“ದೇಶದಲ್ಲಿ ಕೌಟುಂಬಿಕ ವ್ಯವಸ್ಥೆಯು ಸದೃಢವಾಗಿದ್ದು, ಇದಕ್ಕೆ ಸಲಿಂಗಿಗಳ ಮದುವೆಯು ವಿರುದ್ಧವಾಗಿದೆ. ಒಂದು ಗಂಡು ಹಾಗೂ ಒಂದು ಹೆಣ್ಣು ಒಟ್ಟಿಗೆ ಬಾಳುವುದೇ ಮದುವೆಯಾಗಿದೆ. ಇದರಿಂದ ಮಕ್ಕಳಾಗುತ್ತವೆ. ಕುಟುಂಬ ಬೆಳೆಯುತ್ತದೆ. ಆಗ ಒಂದು ಕುಟುಂಬದ ಕಲ್ಪನೆ ಸಾಕಾರವಾಗುತ್ತದೆ. ಆದರೆ, ಸಲಿಂಗಿಗಳ ಮದುವೆಯಿಂದ ಕುಟುಂಬ ಎಂಬ ಕಲ್ಪನೆ ಸಾಧ್ಯವಾಗುವುದಿಲ್ಲ” ಎಂದು ಕೇಂದ್ರ ಸರ್ಕಾರ ತನ್ನ ನಿಲುವು ತಿಳಿಸಿದೆ.

“ದೇಶದಲ್ಲಿ ಮದುವೆ ಎಂಬುದು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಬೆಸೆದುಕೊಂಡಿದೆ. ಹಾಗೆಯೇ, ಸಲಿಂಗಿಗಳ ಮದುವೆಯು ದೇಶದ ವೈಯಕ್ತಿಕ ಕಾನೂನಿನ ನಿಯಮಗಳ ಉಲ್ಲಂಘನೆಯಾಗುತ್ತದೆ” ಎಂದೂ ತಿಳಿಸಿದೆ. ದೇಶದಲ್ಲಿ ಸಲಿಂಗಿಗಳ ಮದುವೆ ಮಾನ್ಯಗೊಳಿಸಬೇಕು ಎಂಬುದಾಗಿ ನಾಲ್ಕು ಸಲಿಂಗಿಗಳ ಜೋಡಿಯು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ. ಇದರ ಕುರಿತು ಕೋರ್ಟ್‌ ವಿಚಾರಣೆ ನಡೆಸುತ್ತಿದೆ.

ಇದನ್ನೂ ಓದಿ: Same Sex Marriage In US | ಸಲಿಂಗಿಗಳ ಮದುವೆ ಹಕ್ಕುಗಳ ರಕ್ಷಣೆ, ಮಹತ್ವದ ವಿಧೇಯಕಕ್ಕೆ ಜೋ ಬೈಡೆನ್‌ ಸಹಿ

Exit mobile version