ವಿಸ್ತಾರನ್ಯೂಸ್ ನವದೆಹಲಿ: ಇದುವರೆಗೆ ಮುಕ್ತವಾಗಿದ್ದ ಭಾರತ ಹಾಗೂ ಮ್ಯಾನ್ಯಾರ್ ನಡುವಿನ ಗಡಿಯ ಸಂಚಾರವನ್ನು ಶೀಘ್ರ ಕೊನೆಗೊಳಿಸಲಾಗುವುದು ಹಾಗೂ ಎರಡೂ ದೇಶಗಳ ನಡುವೆ ಬೇಲಿ ಹಾಕಲಾಗುವುದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ (Amith Shah) ಹೇಳಿದ್ದಾರೆ. ಈ ಘೋಷಣೆಯೊಂದಿಗೆ ಭಾರತ-ಮ್ಯಾನ್ಮಾರ್ ಗಡಿಗೆ ಹತ್ತಿರದಲ್ಲಿ ವಾಸಿಸುವ ಜನರಿಗೆ ವೀಸಾ ಇಲ್ಲದೆ ಪರಸ್ಪರರ ಭೂಪ್ರದೇಶದೊಳಗೆಇ 16 ಕಿ.ಮೀ ವ್ಯಾಪ್ತಿಯಲ್ಲಿ ಪ್ರಯಾಣಿಸಲು ಅನುವು ಮಾಡಿಕೊಟ್ಟಿದ್ದ ಫ್ರೀ ಮೂವ್ಮೆಂಟ್ ರೆಜಿಮ್ (ಎಫ್ಎಂಆರ್) ಶೀಘ್ರದಲ್ಲೇ ಕೊನೆಗೊಳ್ಳಲಿದೆ.
ಗುವಾಹಟಿಯಲ್ಲಿ ಅಸ್ಸಾಂ ಪೊಲೀಸ್ ಕಮಾಂಡೋಗಳ ಪಾಸಿಂಗ್ ಔಟ್ ಪೆರೇಡ್ನಲ್ಲಿ ಮಾತನಾಡಿದ ಅಮಿತ್ ಶಾ, “ಮ್ಯಾನ್ಮಾರ್ ಜತೆಗಿನ ಭಾರತದ ಗಡಿಯನ್ನು ಶೀಘ್ರದಲ್ಲೇ ಬಾಂಗ್ಲಾದೇಶದ ಗಡಿಯಂತೆ ರಕ್ಷಿಸಲಾಗುವುದು ಎಂದು ಹೇಳಿದ್ದಾರೆ.
ಬಾಂಗ್ಲಾದೇಶದೊಂದಿಗೆ ದೇಶದ ಗಡಿಗೆ ಬೇಲಿ ಹಾಕಿದಂತೆಯೇ ಮ್ಯಾನ್ಮಾರ್- ಭಾರತದ ಮುಕ್ತ ಗಡಿಗೆ ಬೇಲಿ ಹಾಕಲು ನರೇಂದ್ರ ಮೋದಿ ಸರ್ಕಾರ ನಿರ್ಧರಿಸಿದೆ ಎಂದು ಅಸ್ಸಾಂನ ನನ್ನ ಸ್ನೇಹಿತರಿಗೆ ಹೇಳಲು ನಾನು ಬಯಸುತ್ತೇನೆ ಎಮದು ಎಂದು ಶಾ ಹೇಳಿದ್ದಾರೆ..
“ಮ್ಯಾನ್ಮಾರ್ನೊಂದಿಗೆ ಭಾರತದ ಮುಕ್ತ ಚಲನೆ ಆಡಳಿತ (ಎಫ್ಎಂಜಿ) ಒಪ್ಪಂದವನ್ನು ಸರ್ಕಾರ ಮರುಪರಿಶೀಲಿಸುತ್ತಿದೆ. ಶೀಘ್ರದಲ್ಲೇ ಭಾರತಕ್ಕೆ ಮುಕ್ತ ಸಂಚಾರ ಕೊನೆಗೊಳ್ಳಲಿದೆ ಎಂದು ಅವರು ಹೇಳಿದರು.
2018ರಲ್ಲಿ ಜಾರಿಗೆ ತಂದ ನೀತಿ
ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್ ಮತ್ತು ಅರುಣಾಚಲ ಪ್ರದೇಶದಂತಹ ರಾಜ್ಯಗಳ ಮೂಲಕ ಹಾದುಹೋಗುವ ಮ್ಯಾನ್ಮಾರ್ನೊಂದಿಗೆ ಭಾರತವು 1,643 ಕಿ.ಮೀ ಉದ್ದದ ಗಡಿ ಹಂಚಿಕೊಂಡಿದೆ. ಈ ಎಲ್ಲಾ ರಾಜ್ಯಗಳು ಪ್ರಸ್ತುತ ಎಫ್ಎಂಆರ್ ಅನ್ನು ಹೊಂದಿವೆ ಇದನ್ನು ಭಾರತದ ಆಕ್ಟ್ ಈಸ್ಟ್ ನೀತಿಯ ಭಾಗವಾಗಿ 2018 ರಲ್ಲಿ ಜಾರಿಗೆ ತರಲಾಯಿತು.
ಇದನ್ನೂ ಓದಿ : Ram Mandir: ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮಗೌಡ, ತುಳಸಿ ಗೌಡರಿಗೆ ರಾಮಮಂದಿರ ಪ್ರಾಣಪ್ರತಿಷ್ಠೆಗೆ ಆಹ್ವಾನ
ಭಾರತವು ಮ್ಯಾನ್ಮಾರ್ ಜತೆಗಿನ ತನ್ನ ಭದ್ರತಾ ಕಳವಳಗಳನ್ನು ವ್ಯಕ್ತಪಡಿಸಿದ ಒಂದು ತಿಂಗಳ ನಂತರ ಈ ಹೇಳಿಕೆ ಪ್ರಕಟಗೊಂಡಿದೆ. ಭಾರತಕ್ಕೆ ಮ್ಯಾನ್ಮಾರ್ ನಿರಾಶ್ರಿತರ ಆಗಮನ ಹೆಚ್ಚಾದ ಕಾರಣ ಗಡಿಯಲ್ಲಿನ ಸವಾಲುಗಳನ್ನು ನಿರ್ವಹಿಸಲು ಕ್ರಮಕೈಗೊಳ್ಳಲಾಗಿದೆ.
ಮೂರು ವರ್ಷದಲ್ಲಿ ನಕ್ಸಲಿಸಂ ನಿರ್ಮೂಲನೆ ಮಾಡುವ ಪಣತೊಟ್ಟ ಅಮಿತ್ ಶಾ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ದೇಶವು ನೂರಕ್ಕೆ ನೂರರಷ್ಟು ನಕ್ಸಲಿಸಂ ಸಮಸ್ಯೆಯಿಂದ ಮುಕ್ತವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಶನಿವಾರ ಹೇಳಿದ್ದಾರೆ. ಅಸ್ಸಾಂನ ತೇಜ್ಪುರದಲ್ಲಿ ಶನಿವಾರ ನಡೆದ ಸಶಸ್ತ್ರ ಸೀಮಾ ಬಲದ (ಎಸ್ಎಸ್ಬಿ ) 60 ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಶಾ, “ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ಮುಂದಿನ ಮೂರು ವರ್ಷಗಳಲ್ಲಿ ದೇಶವು ನಕ್ಸಲಿಸಂ ಸಮಸ್ಯೆಯನ್ನು ಸಂಪೂರ್ಣವಾಗಿ ತೊಡೆದುಹಾಕುತ್ತದೆ ಎಂದು ನಾನು ನಂಬುತ್ತೇನೆ” ಎಂದು ಭರವಸೆ ನೀಡಿದರು.
ನಕ್ಸಲಿಸಂ ವಿರುದ್ಧದ ಹೋರಾಟದಲ್ಲಿ ಎಸ್ಎಸ್ಬಿಯ ಶೌರ್ಯವನ್ನು ಶ್ಲಾಘಿಸಿದ ಅಮಿತ್ ಶಾ, ಸಿಆರ್ಪಿಎಫ್ ಮತ್ತು ಬಿಎಸ್ಎಫ್ ಜೊತೆಗೆ ಎಸ್ಎಸ್ಬಿ ನಕ್ಸಲ್ ಚಳವಳಿಯನ್ನು ಅಂಚಿಗೆ ತಂದಿದೆ ಎಂದು ಹೇಳಿದರು.
ನೇಪಾಳ ಮತ್ತು ಭೂತಾನ್ ಜತೆ ಹಂಚಿಕೊಂಡಿರುವ ಗಡಿಗಳನ್ನು ರಕ್ಷಿಸುವುದರ ಜೊತೆಗೆ ಎಸ್ ಎಸ್ ಬಿ ಛತ್ತೀಸ್ ಗಢ, ಜಾರ್ಖಂಡ್ ಮತ್ತು ಬಿಹಾರದಲ್ಲಿ ನಕ್ಸಲರ ವಿರುದ್ಧ ಹೋರಾಡಿದೆ. ನಾನು ಈ ಪ್ರದೇಶಗಳಲ್ಲಿನ ನಕ್ಸಲ್ ಕಾರ್ಯಾಚರಣೆಗಳ ಪರಿಶೀಲನೆಗೆ ಹೋದಾಗಲೆಲ್ಲಾ ಎಸ್ಎಸ್ಬಿ ಧೈರ್ಯದ ಬಗ್ಗೆ ಕೇಳಿದ್ದೇನೆ ಎಂದು ಶಾ ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ನಿರ್ಮೂಲನೆ ಮಾಡುವಲ್ಲಿ ಎಸ್ಎಸ್ಬಿ ಪಾತ್ರದ ಬಗ್ಗೆ ಮಾತನಾಡಿದ ಕೇಂದ್ರ ಗೃಹ ಸಚಿವರು “ಜಮ್ಮು ಮತ್ತು ಕಾಶ್ಮೀರದಲ್ಲಿ, ಭಯೋತ್ಪಾದಕರ ವಿರುದ್ಧ ಸಿಆಆರ್ಪಿಎಫ್, ಬಿಎಸ್ಎಫ್, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಭಾರತೀಯ ಸೇನೆ ಜತೆಗೆ ಎಸ್ಎಸ್ಬಿ ಸಿಬ್ಬಂದಿ ತಮ್ಮ ಪ್ರಾಣವನ್ನು ತ್ಯಾಗ ಮಾಡಿದ್ದಾರೆ ಎಂದು ಹೇಳಿದರು.
ಎಸ್ಎಸ್ಬಿಯ 60 ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ ಸರ್ಕಾರ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿದೆ ಎಂದು ಅಮಿತ್ ಶಾ ಇದೇ ಮಾಹಿತಿ ನೀಡಿದರು. ಇಂದು ಸಶಸ್ತ್ರ ಸೀಮಾ ಬಲದ 60ನೇ ಸಂಸ್ಥಾಪನಾ ದಿನದ ಸಂದರ್ಭದಲ್ಲಿ, ಭಾರತ ಸರ್ಕಾರವು ಅಂಚೆ ಚೀಟಿ ಬಿಡುಗಡೆ ಮಾಡಿದೆ. ಇದು ಈ ಪಡೆಯ ಕರ್ತವ್ಯ ನಿಷ್ಠೆಯನ್ನು ದೇಶದ ಜನರ ಮುಂದೆ ಶಾಶ್ವತವಾಗಿ ಜೀವಂತವಾಗಿರಿಸುತ್ತದೆ ಎಂದು ಅವರು ಹೇಳಿದ್ದಾರೆ.