Site icon Vistara News

Chanakya Excellence Center : ಮಹಾರಾಷ್ಟ್ರದಲ್ಲಿ ಸ್ಥಾಪನೆಯಾಗಲಿದೆ ಚಾಣಕ್ಯ ಎಕ್ಸಲೆನ್ಸ್‌ ಸೆಂಟರ್‌

ಮುಂಬೈ: ಏಕನಾಥ ಶಿಂಧೆ ಆಡಳಿತವಿರುವ ಮಹಾರಾಷ್ಟ್ರದಲ್ಲಿ ಪ್ರಾಚೀನ ಭಾರತೀಯ ಚಿಂತಕ, ಖ್ಯಾತ ಅರ್ಥ ಶಾಸ್ತ್ರಜ್ಞ ಚಾಣಕ್ಯ ಹೆಸರಿನಲ್ಲಿ ಅತ್ಯುತ್ಕೃಷ್ಟತಾ ಕೇಂದ್ರವೊಂದನ್ನು (Chanakya Excellence Center) ಸ್ಥಾಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಚಾಣಕ್ಯನ ತತ್ವಗಳನ್ನು ಜನರಿಗೆ ತಲುಪಿಸುವ, ಕಲಿಸುವ ನಿಟ್ಟಿನಲ್ಲಿ ಈ ಕೇಂದ್ರ ಸ್ಥಾಪನೆ ಮಾಡುವುದಾಗಿ ಹೇಳಲಾಗಿದೆ.

ಇದನ್ನೂ ಓದಿ: Border Dispute : ಒಂದು ದಿನದ ವಿಚಾರಣೆಗೆ ₹60 ಲಕ್ಷ !: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದಕ್ಕೆ ಲಕ್ಷ ಲಕ್ಷ ಹಣ ವೆಚ್ಚ

ಈ ಬಗ್ಗೆ ಮಹಾರಾಷ್ಟ್ರದ ಪ್ರವಾಸೋದ್ಯಮ ಮತ್ತು ಕೌಶಲಾಭಿವೃದ್ಧಿ ಸಚಿವ ಮಂಗಲ್ ಪ್ರಭಾತ್ ಲೋಧಾ ಅವರು ಮಾಹಿತಿ ಕೊಟ್ಟಿದ್ದು, ರಾಜ್ಯದ ಪ್ರಸಿದ್ಧ ಪ್ರವಾಸಿ ಸ್ಥಳವಾದ ಲೋನಾವಾಲಾದ ಬಳಿಯ ಕಾರ್ಲಾದಲ್ಲಿ ಈ ಕೇಂದ್ರವನ್ನು ಸ್ಥಾಪಿಸುವುದಾಗಿ ತಿಳಿಸಿದ್ದಾರೆ. ಈ ಚಾಣಕ್ಯ ಎಕ್ಸಲೆನ್ಸ್‌ ಸೆಂಟರ್‌ನಲ್ಲಿ ಕಾನೂನು, ರಾಜಕೀಯ, ಅರ್ಥಶಾಸ್ತ್ರ, ಆಡಳಿತ ಮತ್ತು ಅಂತಾರಾಷ್ಟ್ರೀಯ ಸಂಬಂಧಕ್ಕೆ ಸಂಬಂಧಿಸಿದಂತೆ ಚಾಣಕ್ಯ ತನ್ನ ತತ್ವಶಾಸ್ತ್ರ ಮತ್ತು ಅರ್ಥಶಾಸ್ತ್ರದಲ್ಲಿ ಹೇಳಿದ್ದರ ಆಧಾರದಲ್ಲಿ ಪಾಠಗಳನ್ನು ಮಾಡಲಾಗುವುದು.

ಅದಷ್ಟೇ ಅಲ್ಲದೆ ಈ ರೀತಿಯ ಕಲಿಕೆಗಾಗಿಯೇ ಏಳು ದಿನಗಳ ಕಿರು ಕೋರ್ಸ್‌ಗಳನ್ನು ಆರಂಭಿಸಲು ಸರ್ಕಾರ ಯೋಜಿಸುತ್ತಿದೆ. ಅದರಲ್ಲಿ ಚಾಣಕ್ಯನ ತತ್ವಶಾಸ್ತ್ರದ ಬಗ್ಗೆ ಆಸಕ್ತಿ ಹೊಂದಿರುವ ಪ್ರವಾಸಿಗರು, ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳನ್ನು ಸೇರಿಸಿಕೊಳ್ಳುವುದಾಗಿ ತಿಳಿಸಲಾಗಿದೆ.

Exit mobile version