ಛತ್ತೀಸ್ಗಢ್ನಲ್ಲಿ ಎಸ್ಯುವಿ (Sports Utility Vehicle)ಕಾರಿಗೆ ಟ್ರಕ್ ಡಿಕ್ಕಿ ಹೊಡೆದು 11 ಜನ ದಾರುಣವಾಗಿ ಮೃತಪಟ್ಟಿದ್ದಾರೆ (Chhattisgarh Accident). ಇಲ್ಲಿನ ಬಾಲೋಡ್ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದೆ. ಟ್ರಕ್ ಡಿಕ್ಕಿ ಹೊಡೆದ ರಭಸಕ್ಕೆ ಎಸ್ಯುವಿ ಕಾರಿನಲ್ಲಿ ಇದ್ದ ಎಲ್ಲರೂ ಮೃತಪಟ್ಟಿದ್ದಾರೆ. ಅದರಲ್ಲಿ 10 ಮಂದಿ ಸ್ಥಳದಲ್ಲೇ ಸತ್ತಿದ್ದು, ಮಗುವೊಂದು ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅದರ ಜೀವವೂ ಹೋಗಿದೆ.
ಎಸ್ಯುವಿ ಕಾರಿನಲ್ಲಿ ಇದ್ದವರೆಲ್ಲ ಧಮ್ತರಿ ಜಿಲ್ಲೆಯ ಸೋರಮ್-ಭಟ್ಗಾಂವ್ ಹಳ್ಳಿಯವರು. ಇವರು ಕಂಕೇರ್ ಜಿಲ್ಲೆಯ ಮರ್ಕ್ಟೋಲಾ ಎಂಬ ಊರಿಗೆ, ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲೆಂದು ತೆರಳುತ್ತಿದ್ದರು. ಜಾಗ್ತಾರಾ ಎಂಬ ಗ್ರಾಮದ ಬಳಿ ಅವರ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದೆ ಎಂದು ಪೂರೂರ್ ಪೊಲೀಸ್ ಠಾಣೆ ಅಧಿಕಾರಿ ಅರುಣ್ ಕುಮಾರ್ ಸಹು ತಿಳಿಸಿದ್ದಾರೆ. ಮೃತರ ಶವಗಳನ್ನು ಪೋಸ್ಟ್ಮಾರ್ಟಮ್ಗೆ ಕಳಿಸಲಾಗಿದೆ. ಅಪಘಾತವಾಗುತ್ತಿದ್ದಂತೆ ಟ್ರಕ್ ಡ್ರೈವರ್ ನಾಪತ್ತೆಯಾಗಿದ್ದಾನೆ. ಅವನನ್ನು ಪತ್ತೆ ಮಾಡಲು ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಹಾಗೇ ಛತ್ತೀಸ್ಗಢ್ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಟ್ವೀಟ್ ಮಾಡಿ ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದಿದ್ದಾರೆ.
ಇದನ್ನೂ ಓದಿ: Road Accident: ಕಾರು-ಬೈಕ್ ನಡುವೆ ಭೀಕರ ಅಪಘಾತ: ಮದುವೆಗೆಂದು ಹೋಗುತ್ತಿದ್ದ ಸಹೋದರರಿಬ್ಬರ ದುರ್ಮರಣ