Site icon Vistara News

Suraj Meher: ನಿಶ್ಚಿತಾರ್ಥದ ದಿನವೇ ಅಪಘಾತದಲ್ಲಿ ಮೃತಪಟ್ಟ ಖ್ಯಾತ ನಟ

ರಾಯ್‌ಪುರ (ಛತ್ತೀಸ್‌ಗಢ): ಚಿತ್ರೀಕರಣ ಮುಗಿಸಿ ಹಿಂತಿರುಗುತ್ತಿದ್ದಾಗ ರಾಯ್‌ಪುರದಲ್ಲಿ ( Raipur) ಬುಧವಾರ ತಡರಾತ್ರಿ ಪಿಕಪ್ ಟ್ರಕ್‌ಗೆ ಡಿಕ್ಕಿ ಹೊಡೆದು ನಟ ಸೂರಜ್ ಮೆಹರ್ (Chhattisgarh Actor Suraj Meher )ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸೂರಜ್ ಅವರಿಗೆ 40 ವರ್ಷ ವಯಸ್ಸಾಗಿತ್ತು. ನಟ ಸೂರಜ್ ಮೆಹರ್ ಅವರು ಕಾರಿನಲ್ಲಿ ಬರುತ್ತಿದ್ದಾಗ ಈ ದುರಂತ ಸಂಭವಿಸಿದೆ. ಇಂದೇ ಒಡಿಶಾದಲ್ಲಿ ಸೂರಜ್ ಮೆಹರ್ ನಿಶ್ಚಿತಾರ್ಥ ಇತ್ತು. ಇವತ್ತೇ ಈ ಅವಘಡ ಸಂಭವಿಸಿದೆ.

ಪೈಪೆಡುಲಾ ಬಳಿಯ ಸಾರಸಿವಾ ಪ್ರದೇಶದಿಂದ ( Sarasiwa area near Pipedula) ಬರುತ್ತಿದ್ದ ಪಿಕಪ್ ಟ್ರಕ್‌ಗೆ ಸೂರಜ್ ಮೆಹರ್ ಕಾರು ಡಿಕ್ಕಿ ಹೊಡೆದಿದೆ ಎಂದು ವರದಿಯಾಗಿದೆ. ಸೂರಜ್ ಮೆಹರ್ ಅವರನ್ನು ನಾರದ್ ಮೆಹರ್ (Narad Meher) ಎಂದೂ ಕರೆಯುತ್ತಾರೆ. ಸೂರಜ್ ಮೆಹರ್ ಅವರು ತಮ್ಮ “ಆಖ್ರಿ ಫೈಸ್ಲಾ” (Aakhri Faisla) ಚಿತ್ರದ ಶೂಟಿಂಗ್‌ನಿಂದ ಹಿಂತಿರುಗುತ್ತಿದ್ದಾಗ ಈ ಅಪಘಾತ ಸಂಭವಿಸಿದೆ. ಸೂರಜ್ ಮೆಹರ್ ಛತ್ತೀಸ್‌ಗಢದಲ್ಲಿ ಖಳನಾಯಕನಾಗಿ ಗುರುತಿಸಿಕೊಂಡಿದ್ದರು. ಹಲವಾರು ಛತ್ತೀಸ್‌ಗಢ ಚಲನಚಿತ್ರಗಳಲ್ಲಿ ನೆಗೆಟಿವ್‌ ಪಾತ್ರಗಳನ್ನು ನಿರ್ವಹಿಸಿದ್ದರು. ಬಿಲಾಸ್‌ಪುರದ ಸರಸಿವಾ ಪ್ರದೇಶದಿಂದ ಬರುತ್ತಿದ್ದಾಗ ಅವರ ಕಾರು ಪಿಕಪ್ ಟ್ರಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡ ಸೂರಜ್ ಮೆಹರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಕೆಲವು ವರದಿಗಳ ಪ್ರಕಾರ, ಗಂಭೀರ ಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಬಾರದ ಲೋಕಕ್ಕೆ ಹೋಗಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Sumalatha Ambareesh : ಬಿಜೆಪಿಗೆ ಸೇರ್ಪಡೆಗೊಂಡರೂ ಪ್ರಚಾರಕ್ಕೆ ಇಳಿಯದ ಸುಮಲತಾ!

ಅಪಘಾತದಲ್ಲಿ ಸೂರಜ್ ಮೆಹರ್ ಅವರ ಮತ್ತೊಬ್ಬ ಸಹಚರ ಮತ್ತು ವಾಹನದ ಚಾಲಕ ಕೂಡ ಗಂಭೀರವಾಗಿ ಗಾಯಗೊಂಡಿದ್ದಾರೆ ಎನ್ನಲಾಗಿದೆ. ಪ್ರಾಥಮಿಕ ಚಿಕಿತ್ಸೆಯ ನಂತರ, ಇಬ್ಬರನ್ನೂ ಹೆಚ್ಚಿನ ವೈದ್ಯಕೀಯ ಚಿಕಿತ್ಸೆಗಾಗಿ ಬಿಲಾಸ್‌ಪುರಕ್ಕೆ ಕಳುಹಿಸಲಾಗಿದೆ. ಸಂಜೆ 5ಗಂಟೆ ಸುಮಾರಿಗೆ ಅಪಘಾತದ ಬಗ್ಗೆ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಲಾಗಿದೆ. ಕುಟುಂಬ ಸದಸ್ಯರು ಕೂಡಲೇ ಸ್ಥಳಕ್ಕೆ ಧಾವಿಸಿದ್ದರು.

ಸೂರಜ್ ಮೆಹರ್ ಬುಧವಾರ (ಏ.11) ಒಡಿಶಾದ ಬಾತ್ಲಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಬೇಕಿತ್ತು. ಸೂರಜ್ ಮೆಹರ್ ಬಿಲಾಸ್‌ಪುರದ ಸರಿಯಾ ಗ್ರಾಮದ ನಿವಾಸಿ.

Exit mobile version