ನವ ದೆಹಲಿ: ವಾಷಿಂಗ್ ಮಷಿನ್ಗೆ ಬಿದ್ದು 15 ನಿಮಿಷ ಅಲ್ಲೇ ಇದ್ದ ಒಂದೂವರೆ ವರ್ಷದ ಮಗು, ಪವಾಡ ಸದೃಶವಾಗಿ ಬದುಕಿ ಉಳಿದಿದೆ. ಈ ಘಟನೆ ನಡೆದಿದ್ದು ದೆಹಲಿಯಲ್ಲಿ. ಇಲ್ಲಿನ ವಸಂತ್ ಕುಂಜ್ನಲ್ಲಿರುವ ಫೋರ್ಟಿಸ್ ಆಸ್ಪತ್ರೆಯಲ್ಲಿ ಮಗುವಿಗೆ ಚಿಕಿತ್ಸೆ 12 ದಿನ ಚಿಕಿತ್ಸೆ ನೀಡಿ, ಬದುಕಿಸಲಾಗಿದೆ.
ಮನೆಯಲ್ಲಿರುವ ಟಾಪ್ ಲೋಡ್ ವಾಷಿಂಗ್ ಮಷಿನ್ನಲ್ಲಿ ತಾಯಿ, ಬಟ್ಟೆ ತೊಳೆಯುವ ಪೌಡರ್ ಮಿಶ್ರಿತ ನೀರು ತುಂಬಿಸಿಟ್ಟು, ಕೋಣೆಗೆ ಬಟ್ಟೆ ತರಲೆಂದು ಹೋಗಿದ್ದಳು. ಆಗ ಮಗು ಅದರಲ್ಲಿ ಬಿದ್ದಿದೆ. ಸುಮಾರು 15 ನಿಮಿಷದ ನಂತರ ಅಮ್ಮಂಗೆ ಗೊತ್ತಾಗಿದೆ. ಅಷ್ಟರಲ್ಲಿ ಮಗು ನೀರಿನಲ್ಲೇ ಪ್ರಜ್ಞಾಹೀನ ಸ್ಥಿತಿಯಲ್ಲಿತ್ತು. ಚಲನವಲನ ಸ್ತಬ್ಧವಾಗಿತ್ತು ಮತ್ತು ಉಸಿರಾಟ ಕ್ಷೀಣವಾಗಿತ್ತು.
ಇದನ್ನೂ ಓದಿ: India energy week 2023: ಪರಿಸರಕ್ಕೆ ಹಾನಿ ಮಾಡುವ ಪ್ಲಾಸ್ಟಿಕ್ ಬಾಟಲಿಗಳಿಂದ ಬಟ್ಟೆ! ಹೇಗೆ ತಯಾರಿಸುತ್ತಾರೆ?
ಮಗುವಿಗೆ ಚಿಕಿತ್ಸೆ ನೀಡಿದ ಮಕ್ಕಳ ತಜ್ಞೆ ಡಾ. ಹಿಮಾಂಶಿ ಜೋಶಿ ‘ಮಗುವನ್ನು ಆಸ್ಪತ್ರೆಗೆ ತರುವಾಗ ಪ್ರಾಣಕ್ಕೆ ಅಪಾಯ ಆಗುವ ಸ್ಥಿತಿಯಲ್ಲಿಯೇ ಇತ್ತು. ಸೋಪಿನ ನೀರಿನಲ್ಲಿ ಮುಳುಗಿದ್ದರಿಂದ, ಮಗುವಿನ ವಿವಿಧ ಅಂಗಗಳೆಲ್ಲ ನಿಶ್ಚಲವಾಗಿದ್ದವು. ಮಗುವಿಗೆ ಆ್ಯಂಟಿಬಯೋಟಿಕ್ಗಳನ್ನು ಕೊಟ್ಟು, ವೆಂಟಿಲೇಟರ್ನಲ್ಲಿ ಇಟ್ಟು ಚಿಕಿತ್ಸೆ ಕೊಡಲಾಯಿತು. ಬಳಿಕ ನಿಧಾನವಾಗಿ ಅದು ಚೇತರಿಸಿಕೊಂಡಿದೆ’ ಎಂದು ತಿಳಿಸಿದ್ದಾರೆ.