ಹೊಸದಿಲ್ಲಿ: ಪ್ಯಾಂಗಾಂಗ್ ಸರೋವರಕ್ಕೆ ಅಡ್ಡಲಾಗಿ ಚೀನಾ ನಿರ್ಮಿಸುತ್ತಿರುವ ಎರಡನೇ ಸೇತುವೆ (China building bridges)ಯ ವರದಿಗಳಿಗೆ ಮತ್ತೊಂದು ಪ್ರತಿಕ್ರಿಯೆಯಾಗಿ, ಈ ಎರಡೂ ಸೇತುವೆಗಳು 1960ರ ದಶಕದಿಂದಲೂ ಚೀನಾ ಅಕ್ರಮವಾಗಿ ಸ್ವಾಧೀನಪಡಿಸಿಕೊಂಡಿರುವ ಪ್ರದೇಶಗಳಲ್ಲಿವೆ ಮತ್ತು ಈ ಪ್ರದೇಶಗಳ ಮೇಲೆ ಚೀನಾದ ಹಕ್ಕು ಸ್ಥಾಪನೆಯನ್ನು ಭಾರತ ಎಂದಿಗೂ ಒಪ್ಪಿಕೊಂಡಿಲ್ಲ ಎಂದು ಸರ್ಕಾರ ಶುಕ್ರವಾರ ಪುನರುಚ್ಚರಿಸಿದೆ.
ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಕಾಶ್ಮೀರ ಮತ್ತು ಲಡಾಖ್ ಭಾರತದ ಅವಿಭಾಜ್ಯ ಅಂಗವಾಗಿದೆ ಮತ್ತು ಇತರ ದೇಶಗಳು ಭಾರತದ ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸಬೇಕೆಂದು ನಿರೀಕ್ಷಿಸುತ್ತೇವೆ ಎಂದು ವಿದೇಶಾಂಗ ಸಚಿವಾಲಯ ಹೇಳಿದೆ.
ಇದನ್ನೂ ಓದಿ: Covid Lockdown ಎಫೆಕ್ಟ್: ರಾಷ್ಟ್ರಗೀತೆಯನ್ನೇ ಸೆನ್ಸಾರ್ ಮಾಡಿದ ಚೀನಾ!
ವಿಪರ್ಯಾಸವೆಂದರೆ, ಭಾರತ ಮತ್ತು ಚೀನಾ ಸೇರಿದಂತೆ ದೇಶಗಳು ಜಂಟಿ ಹೇಳಿಕೆಯಲ್ಲಿ ವಿವಿಧ ದೇಶಗಳ ಸಾರ್ವಭೌಮತ್ವ ಮತ್ತು ಪ್ರಾದೇಶಿಕ ಸಮಗ್ರತೆಗೆ ಗೌರವವನ್ನು ಒತ್ತಿಹೇಳುವ ದಿನದಂದೇ ಈ ಹೇಳಿಕೆ ಬಂದಿದೆ. ವರದಿಯಾದ ನಿರ್ಮಾಣವು ಚೀನಾ ಆಕ್ರಮಿತ ಪ್ರದೇಶದಲ್ಲಿ ನಡೆಯುತ್ತಿದೆ ಮತ್ತು ಅಂತಹ ಬೆಳವಣಿಗೆಗಳನ್ನು ಭಾರತವು ಮೇಲ್ವಿಚಾರಣೆ ಮಾಡುತ್ತದೆ ಎಂದು ಸರ್ಕಾರ ಗುರುವಾರವೂ ಹೇಳಿತ್ತು.
“ಪ್ಯಾಂಗಾಂಗ್ ಸರೋವರದ ಮೇಲೆ ಚೀನಾ ತನ್ನ ಮೊದಲನೇ ಸೇತುವೆಯ ಜೊತೆಗೆ ಎರಡನೇ ಸೇತುವೆಯನ್ನು ನಿರ್ಮಿಸುತ್ತಿರುವ ವರದಿಗಳನ್ನು ನಾವು ನೋಡಿದ್ದೇವೆ. ನಮ್ಮ ಭೂಪ್ರದೇಶದ ಇಂತಹ ಅಕ್ರಮ ಆಕ್ರಮಣವನ್ನು ನಾವು ಎಂದಿಗೂ ಒಪ್ಪಿಕೊಂಡಿಲ್ಲ, ಅಥವಾ ಚೀನಾದ ನ್ಯಾಯಸಮ್ಮತವಲ್ಲದ ಹಕ್ಕು ಅಥವಾ ಅಂತಹ ನಿರ್ಮಾಣ ಚಟುವಟಿಕೆಗಳನ್ನು ನಾವು ಸ್ವೀಕರಿಸಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಹೇಳಿದ್ದಾರೆ.
ಇದನ್ನೂ ಓದಿ: ಚೀನಾ ಮತ್ತೆ ಕಿರಿಕ್: ಆಯಕಟ್ಟಿನ ಪ್ಯಾಂಗಾಂಗ್ ಸರೋವರಕ್ಕೆ 2ನೇ ಸೇತುವೆ