Site icon Vistara News

Parents Teacher Meeting | ಶಾಲೆಯಲ್ಲಿ ಪಾಲಕರ ಸಭೆಗೆ ಹೆದರಿ ರೈಲಿಗೆ ಅಡ್ಡ ನಿಂತ ಬಾಲಕ, ಮುಂದೇನಾಯ್ತು?

Parents Teacher Meeting

ಭೋಪಾಲ್‌: ಶಾಲೆಗಳಲ್ಲಿ ನಡೆಯುವ ಪಾಲಕರ ಸಭೆಗಳು (Parents Teacher Meeting) ಎಂದರೆ ವಿದ್ಯಾರ್ಥಿಗಳಿಗೆ ಇನ್ನಿಲ್ಲದ ಸಂಕಷ್ಟ ತಂದೊಡತ್ತವೆ. ಎಲ್ಲಿ ಪಾಲಕರ ಎದುರು ಟೀಚರ್‌ಗಳು ತಮ್ಮ ಬಗ್ಗೆ ನಕಾರಾತ್ಮಕ ಅಂಶಗಳನ್ನು ಹೇಳುತ್ತಾರೋ ಎಂಬ ಭಯವು ಬಹುತೇಕ ವಿದ್ಯಾರ್ಥಿಗಳಿಗೆ ಕಾಡುತ್ತದೆ. ಇದೇ ರೀತಿ, ಪಾಲಕರ ಸಭೆಗೆ ಹೆದರಿ ಉತ್ತರ ಪ್ರದೇಶದಲ್ಲಿ ಬಾಲಕನೊಬ್ಬ ಆತ್ಮಹತ್ಯೆಗೆ ಯತ್ನಿಸಿದ್ದಾನೆ.

ಲಖನೌನಲ್ಲಿ ಒಂಬತ್ತನೇ ತರಗತಿ ಓದುತ್ತಿರುವ ಆದಿತ್ಯ ತಿವಾರಿಯು ಓದಿನಲ್ಲಿ ಮುಂದಿದ್ದರೂ ಇತ್ತೀಚೆಗೆ ನಡೆದ ಪರೀಕ್ಷೆಯಲ್ಲಿ ಕಡಿಮೆ ಅಂಕ ಗಳಿಸಿದ್ದ. ಇದರಿಂದಾಗಿ ಶಿಕ್ಷಕರು ಪಾಲಕರ ಸಭೆ ಕರೆದಿದ್ದರು. ಇದಕ್ಕೂ ಮೊದಲು ಕೂಡ ಸಭೆ ಕರೆದ ಕಾರಣದಿಂದಲೇ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿರಲಿಲ್ಲ. ಈಗ ಮತ್ತೆ ಸಭೆ ಕರೆದ ಕಾರಣ ಹೆದರಿದ ಬಾಲಕ ರೈಲು ಹಳಿ ಮೇಲೆ ನಿಂತಿದ್ದಾನೆ. ಅದೃಷ್ಟವಶಾತ್‌ ಆತನ ಪ್ರಾಣಕ್ಕೆ ಕುತ್ತು ಬಂದಿಲ್ಲ. ಗಾಯಗೊಂಡಿರುವ ಬಾಲಕನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಟೀಚರ್‌ಗೆ ಪತ್ರ ಬರೆದ ತಿವಾರಿ

ರೈಲಿಗೆ ಅಡ್ಡ ನಿಲ್ಲುವ ಮೊದಲು ಆದಿತ್ಯ ತಿವಾರಿಯು ತನ್ನ ಟೀಚರ್‌ಗೆ ಪತ್ರ ಬರೆದಿದ್ದಾನೆ. “ರೆಸ್ಪೆಕ್ಟೆಡ್ ಮೇಡಂ, ನಾನು ಒಂಬತ್ತನೇ ತರಗತಿಯ ಸಿ ಘಟಕದ ವಿದ್ಯಾರ್ಥಿ ಆದಿತ್ಯ ತಿವಾರಿ. ನಾನು ಮಾಡಿರುವ ಘೋರ ತಪ್ಪಿಗೆ ನಿಮ್ಮಲ್ಲಿ ಕ್ಷಮೆಯಾಚಿಸುತ್ತೇನೆ. ಇಂತಹ ತಪ್ಪನ್ನು ಮತ್ತೆ ಮಾಡುವುದಿಲ್ಲ ಎಂಬುದಾಗಿ ಪ್ರಮಾಣ ಮಾಡುತ್ತೇನೆ” ಎಂದು ಬರೆದಿದ್ದಾನೆ.

ರೈಲಿಗೆ ಅಡ್ಡ ನಿಲ್ಲುವ ಮೊದಲು ಟೀಚರ್‌ಗೆ ಆದಿತ್ಯ ತಿವಾರಿ ಬರೆದ ಪತ್ರ.

ಪರೀಕ್ಷೆಯಲ್ಲಿ ಅಂಕ ಕಡಿಮೆ ಬಂತು ಎಂದು, ಪೋಷಕರ ಸಭೆಗೆ ಹೆದರಿಯೋ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಅಪಾಯಕಾರಿ ಸಂಗತಿಯಾಗಿದೆ. ಈ ದಿಸೆಯಲ್ಲಿ ಪಾಲಕರು ಹಾಗೂ ಶಿಕ್ಷಕರು ಹೆಚ್ಚು ಜಾಗೃತರಾಗಿರುವ ಅವಶ್ಯಕತೆ ಇದೆ.

ಇದನ್ನೂ ಓದಿ | ಪ್ರೀತಿಸುತ್ತೇನೆಂದು ಹೇಳಿ ಜತೆಗಿದ್ದು, ನಿಶ್ಚಿತಾರ್ಥ ಆಗುತ್ತಿದ್ದಂತೆ ಬಿಟ್ಟು ಹೋದ ಶಿಕ್ಷಕಿ; 17 ವರ್ಷದ ವಿದ್ಯಾರ್ಥಿ ಆತ್ಮಹತ್ಯೆ

Exit mobile version