Site icon Vistara News

Cognizant: ವಾರ್ಷಿಕ ಕೇವಲ 2.5 ಲಕ್ಷ ರೂ . ಸಂಬಳ ಪ್ಯಾಕೇಜ್ ಘೋಷಿಸಿ ಟೀಕೆಗೆ ಗುರಿಯಾದ ಕಾಗ್ನಿಜೆಂಟ್!

Cognizant

ಕಂಪನಿಗೆ ಹೊಸದಾಗಿ ಸೇರಬಯಸುವವರಿಗೆ ವಾರ್ಷಿಕವಾಗಿ 2.5 ಲಕ್ಷ ರೂ. ವೇತನ ನೀಡುವ ಖಾಲಿ ಹುದ್ದೆಗಳ (vacancy offer) ಬಗ್ಗೆ ಘೋಷಣೆ ಮಾಡಿ ಭಾರೀ ಟೀಕೆಗೆ ಗುರಿಯಾದ ಸಾಫ್ಟ್ ವೇರ್ ಕಂಪನಿ ಕಾಗ್ನಿಜೆಂಟ್ (Cognizant) ಈಗ ಪ್ರತಿಕ್ರಿಯೆಯನ್ನು ನೀಡಿದೆ, ನೇಮಕಾತಿ ಕುರಿತ ಪ್ರಕಟಣೆಯನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಹೇಳಿಕೊಂಡಿದೆ.

ಕಾಗ್ನಿಜೆಂಟ್ ಇತ್ತೀಚೆಗೆ ಹೊಸ ನೇಮಕಾತಿಗಳ (New recruitment) ಬಗ್ಗೆ ಸೂಚನೆ ಹೊರಡಿಸಿತ್ತು. ಫ್ರೆಶರ್ ಗಳಿಗೆ ವಾರ್ಷಿಕ 2.5 ಲಕ್ಷ ರೂ.ಗಳನ್ನು ನೀಡುವ ಖಾಲಿ ಹುದ್ದೆಯನ್ನು ಪಟ್ಟಿ ಮಾಡಿ ಬಿಡುಗಡೆ ಮಾಡಿ ಬಳಿಕ ಭಾರೀ ಟೀಕೆಗೆ ಗುರಿಯಾಯಿತು.

ಮೆಟ್ರೋ ನಗರದಲ್ಲಿ ಇಂತಹ ಸಂಬಳದಲ್ಲಿ ಹೇಗೆ ಬದುಕಲು ಸಾಧ್ಯ ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದರು.
ಕಳೆದ ವರ್ಷ ಕಂಪೆನಿಯ ಸಿಇಒ 186 ಕೋಟಿ ರೂ. ಗಳನ್ನು ಗಳಿಸಿದ್ದಾರೆ. ಹೀಗಿರುವಾಗ 20 ವರ್ಷಗಳಿಂದ ಪ್ರವೇಶ ಹಂತದವರಿಗೆ ವೇತನಗಳು ಏಕೆ ಇನ್ನೂ ಕೆಳ ಮಟ್ಟದಲ್ಲಿಯೇ ಇದೆ ಎಂದು ಅನೇಕ ಪ್ರಶ್ನಿಸಿದ್ದರು. ಇದೀಗ ಕಾಗ್ನಿಜೆಂಟ್ ಅಂತಿಮವಾಗಿ ತನ್ನ ಮೌನವನ್ನು ಮುರಿದಿದೆ.

ಕಾಗ್ನಿಜೆಂಟ್ ತನ್ನ ವಾರ್ಷಿಕ 2.5 ಲಕ್ಷ ರೂ. ಸಂಬಳದ ಕೊಡುಗೆಯ ಕುರಿತಾದ ವಿವಾದದಕ್ಕೆ ಪ್ರತಿಕ್ರಿಯಿಸಿದ್ದು, ಮಾಹಿತಿಯನ್ನು ತಪ್ಪಾಗಿ ನಿರೂಪಿಸಲಾಗಿದೆ ಎಂದು ಹೇಳಿದೆ.

ಮೂರು ವರ್ಷಗಳ ಪದವಿಪೂರ್ವ, ಪದವಿ ಹೊಂದಿರುವ ಎಂಜಿನಿಯರಿಂಗ್ ಅಲ್ಲದ ಹಿನ್ನೆಲೆ ಹೊಂದಿರುವ ಅಭ್ಯರ್ಥಿಗಳಿಗೆ ಈ ಕಡಿಮೆ ವೇತನ ಪ್ಯಾಕೇಜ್ ಅನ್ನು ನೀಡಲಾಗುತ್ತದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.

ಭಾನುವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಕಾಗ್ನಿಜೆಂಟ್ ಈ ಬಗ್ಗೆ ತಿಳಿಸಿದ್ದು, 3 ವರ್ಷಗಳ ಪದವಿಪೂರ್ವ, ಪದವಿಯೊಂದಿಗೆ ಎಂಜಿನಿಯರಿಂಗ್ ಅಲ್ಲದ ಹಿನ್ನೆಲೆಯ ಪ್ರತಿಭೆಗಳಿಗೆ ನಮ್ಮ ಇತ್ತೀಚಿನ ಉದ್ಯೋಗ ಪೋಸ್ಟ್ ಅನ್ನು ಸಂಪೂರ್ಣವಾಗಿ ತಪ್ಪಾಗಿ ನಿರೂಪಿಸಲಾಗಿದೆ. ವಾರ್ಷಿಕ 2.52 ಲಕ್ಷ ರೂ. ವೇತನ ನೀಡುವ ಈ ಉದ್ಯೋಗ ಜಾಹೀರಾತು 3 ವರ್ಷಗಳ ಎಂಜಿನಿಯರಿಂಗ್ ಪದವಿ ಮಾಡದ ಅಭ್ಯರ್ಥಿಗಳಿಗಾಗಿ ಎಂದು ತಿಳಿಸಿದೆ.


ಎಂಜಿನಿಯರಿಂಗ್ ಪದವೀಧರರಿಗೆ ವೇತನವು ಐಟಿ ಉದ್ಯಮದಲ್ಲಿ ಹೆಚ್ಚು ಸ್ಪರ್ಧಾತ್ಮಕವಾಗಿದೆ: ಎಂಜಿನಿಯರಿಂಗ್ ಪದವೀಧರರಿಗೆ ನಾವು ನೀಡುವ ವೇತನವು ಐಟಿ ಸೇವೆಗಳ ಇತರ ಗುಂಪಿನೊಳಗೆ ಹೆಚ್ಚು ಸ್ಪರ್ಧಾತ್ಮಕವಾಗಿದೆ ಎಂದು ಇವಿಪಿ ಮತ್ತು ಕಾಗ್ನಿಜೆಂಟ್ ಅಮೆರಿಕದ ಅಧ್ಯಕ್ಷ ಸೂರ್ಯ ಗುಮ್ಮಡಿ ತಿಳಿಸಿದ್ದಾರೆ.

ಕಾಗ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್ ತನ್ನ ಕೆಲವು ಉದ್ಯೋಗಿಗಳಿಗೆ ವಾರ್ಷಿಕ ವೇತನ ಹೆಚ್ಚಳವನ್ನು ಶೇ. 1 ರಷ್ಟು ಕಡಿಮೆಗೊಳಿಸಿದೆ ಮತ್ತು ಅತ್ಯಧಿಕ ಹೆಚ್ಚಳವು ಕೇವಲ ಶೇ. 5 ಆಗಿದೆ ಎಂಬ ವರದಿಗಳು ವಿವಾದವನ್ನು ಹೆಚ್ಚಿಸಿವೆ.
ಕಂಪೆನಿಯು ಈ ಇನ್‌ಕ್ರಿಮೆಂಟ್‌ಗಳನ್ನು ಅಂತಿಮವಾಗಿ ಹೊರತರುವ ಮೊದಲು ನಾಲ್ಕು ತಿಂಗಳವರೆಗೆ ಮುಂದೂಡಿದ ಹಿನ್ನೆಲೆಯಲ್ಲಿ ಈ ಸುದ್ದಿ ಬಂದಿದೆ.

ಇದನ್ನೂ ಓದಿ: Job Alert: ಗ್ಯಾಸ್‌ ಅಥಾರಟಿ ಆಫ್‌ ಇಂಡಿಯಾ ಲಿಮಿಟೆಡ್‌ನಲ್ಲಿದೆ ಉದ್ಯೋಗಾವಕಾಶ; 391 ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

ಕಳಪೆ ಸಂಬಳ ಹೆಚ್ಚಳದ ಬಗ್ಗೆ ಪ್ರತಿಕ್ರಿಯಿಸಿದ ಗುಮ್ಮಡಿ, ವೇತನ ಹೆಚ್ಚಳವು ವೈಯಕ್ತಿಕ ಕಾರ್ಯಕ್ಷಮತೆ ಮತ್ತು ಮ್ಯಾಕ್ರೋ ಉದ್ಯಮದ ಡೈನಾಮಿಕ್ಸ್ ಎರಡಕ್ಕೂ ಸಂಬಂಧ ಹೊಂದಿದೆ. ಈ ವರ್ಷ, ಉದ್ಯೋಗಿಗಳಿಗೆ ಇನ್ಕ್ರಿಮೆಂಟ್ ಮತ್ತು ಬೋನಸ್ ಗಳನ್ನು ವಿತರಿಸಿದ ಕೆಲವು ಐಟಿ ಕಂಪೆನಿಗಳಲ್ಲಿ ನಾವು ಒಂದಾಗಿದ್ದೇವೆ. ಕಳೆದ 3 ವರ್ಷಗಳಲ್ಲಿ ಹೆಚ್ಚಿನ ಕಾಗ್ನಿಜೆಂಟ್‌ನ ಉದ್ಯೋಗಿಗಳು 4ನೇ ಬಾರಿಯಾಗಿ ಈ ಬಾರಿಯೂ ವೇತನ ಹೆಚ್ಚಳದ ಪ್ರಯೋಜನವನ್ನು ಪಡೆದಿದ್ದಾರೆ ಎಂದು ಅವರು ಹೇಳಿದ್ದಾರೆ.

Exit mobile version