Site icon Vistara News

Viral Video: ಗುಜರಾತ್​​ ಮಳೆಯಲ್ಲಿ ಅಪಾಯಕ್ಕೆ ಸಿಲುಕಿದ್ದ ವಿದ್ಯಾರ್ಥಿನಿಯರ ರಕ್ಷಣೆ: ಹ್ಯಾಪಿ ವೀಕೆಂಡ್ ಎಂದ ಮುಂಬಯಿ ಮಂದಿ

Students Rescued In From Bus

#image_title

ಗುಜರಾತ್​​ನಲ್ಲಿ ವಿಪರೀತ ಮಳೆ(Gujarat Rain)ಯಾಗುತ್ತಿದೆ. ಇಡೀ ರಾಜ್ಯಾದ್ಯಂತ ಅನೇಕ ಕಡೆಗಳಲ್ಲಿ ರಸ್ತೆಗಳೆಲ್ಲ ಜಲಾವೃತಗೊಂಡಿವೆ. ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದ್ದು ಟ್ರಾಫಿಕ್​ ಜಾಮ್ ಆಗಿದೆ (Waterlogging and Traffic jams). ಖೇಡಾ ಜಿಲ್ಲೆಯ ನಾಡಿಯಾಡ್​ ಏರಿಯಾದ ಬೈಪಾಸ್​ ಬಳಿ ವಿಪರೀತ ನೀರು ನಿಂತು, ಅಲ್ಲಿ ಕಾಲೇಜು ಬಸ್​ವೊಂದು ಸಿಲುಕಿತ್ತು. ಅದರಲ್ಲಿದ್ದ ವಿದ್ಯಾರ್ಥಿನಿಯರೆಲ್ಲ ಅಪಾಯಕ್ಕೆ ಸಿಲುಕಿದ್ದರು. ಸ್ಥಳೀಯರ ಸಮಯಪ್ರಜ್ಞೆ ಆ ವಿದ್ಯಾರ್ಥಿಗಳ ಜೀವ ಉಳಿಸಿದೆ. ಅಪಘಾತದ ಅಂಚು ತಲುಪಿದ್ದ ಬಸ್​​ನ ಕಿಟಕಿ ಮತ್ತು ತುರ್ತು ನಿರ್ಗಮನ ಬಾಗಿಲಿನ ಮೂಲಕ, ಸ್ಥಳೀಯರು ವಿದ್ಯಾರ್ಥಿನಿಯರನ್ನು ರಕ್ಷಿಸಿದ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ (Viral Video) ಆಗಿದೆ.

ಆ ಬೈಪಾಸ್​​ನಲ್ಲಿ ನೀರು ತುಂಬಿಹೋಗಿತ್ತು. ಬಸ್​ ಒಂದು ಕಡೆ ನಿಂತಿತ್ತು. ಮುಂದೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ವಿದ್ಯಾರ್ಥಿಗಳಿಗೆ ಬಸ್​​ನ ಬಾಗಿಲು ಇಳಿದು, ನೆಲದ ಮೇಲೆ ಕಾಲೂರಲೂ ಸಾಧ್ಯವಾಗುತ್ತಿರಲಿಲ್ಲ. ಮೊಳಕಾಲಿಗಿಂತಲೂ ಜಾಸ್ತಿ ಮಟ್ಟದ ನೀರು ಅಲ್ಲಿತ್ತು. ಆಗ ಸ್ಥಳೀಯರು ಐದಾರು ಜನ ಸೇರಿ, ಅಲ್ಲೇ ಪಕ್ಕದಲ್ಲಿದ್ದ ಕಟ್ಟೆಯ ಮೇಲೆ ನಿಂತು, ವಿದ್ಯಾರ್ಥಿಗಳನ್ನು ಕಿಟಕಿ ಮೂಲಕ ಹೊರಗೆ ಎಳೆದು ರಕ್ಷಿಸಿದ್ದಾರೆ. ಇನ್ನು ಗುಜರಾತ್​​ನಲ್ಲಿ ಜೂನ್​ 25ರವರೆಗೂ ಭರ್ಜರಿ ಮಳೆಯಾಗುವುದಾಗಿ ಹವಾಮಾನ ಇಲಾಖೆ ತಿಳಿಸಿದೆ.

ಇನ್ನೊಂದೆಡೆ ಮಹಾರಾಷ್ಟ್ರದ ಮುಂಬಯಿ ಮತ್ತು ಇನ್ನೂ ಹಲವು ಕಡೆಗಳಲ್ಲಿ ಭರ್ಜರಿ ಮಳೆ (Mumbai Rain)ಯಾಗಿದ್ದು, ಮಾನ್ಸೂನ್​ ಪ್ರವೇಶದ ಲಕ್ಷಣ ಗೋಚರಿಸಿದೆ. ಹವಾಮಾನ ಇಲಾಖೆ ಮುಂಬಯಿಯಲ್ಲಿ ಜೂ.26ರಿಂದ 27ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಿದೆ (Yellow Alert in Mumbai). ಜೂನ್​ 11ರ ಹೊತ್ತಿಗೆ ಮುಂಬಯಿ ಕರಾವಳಿಗೆ ಮಾನ್ಸೂನ್ ಪ್ರವೇಶ ಮಾಡಬಹುದು ಎಂದು ಈ ಹಿಂದೆ ಹವಾಮಾನ ಇಲಾಖೆ ತಿಳಿಸಿತ್ತು. ಆದರೆ ಅಷ್ಟರಲ್ಲಿ ಬಿಪರ್​ಜಾಯ್ ಚಂಡಮಾರುತ ದಾಂಡುಗಿ ಇಟ್ಟಿದ್ದರಿಂದ ಮಾನ್ಸೂನ್ ಆಗಮನದ ಸುಳಿವೇ ಇರಲಿಲ್ಲ. ಆದರೆ ಇಂದಿನ ಮಳೆ ನೋಡಿ ಮುಂಬಯಿ ಮಂದಿ ಫುಲ್ ಖುಷಿಯಾಗಿದ್ದಾರೆ. ‘ಹ್ಯಾಪಿ ವೀಕೆಂಡ್​’ ಎಂದು ಹೇಳುತ್ತಿದ್ದಾರೆ.

Exit mobile version