Site icon Vistara News

ಛತ್ತೀಸ್​ಗಢ್​​ನಲ್ಲಿ ಭೀಕರ ಅಪಘಾತ; ಒಂದೇ ಕುಟುಂಬದ 11 ಮಂದಿ ದುರ್ಮರಣ

Road Accident in Kanakagiri taluk

ರಾಯ್ಪುರ: ಪಿಕ್​ಅಪ್​ ವಾಹನವೊಂಕ್ಕೆ ಟ್ರಕ್​ ಡಿಕ್ಕಿಯಾದ ಪರಿಣಾಮ 11ಜನರು ದಾರುಣವಾಗಿ ಮೃತಪಟ್ಟ ಘಟನೆ ಛತ್ತೀಸ್​ಗಢ್​​ನ ಬಾಲೋಡಾ ಬಜಾರ್​ ಜಿಲ್ಲೆಯಲ್ಲಿ ನಡೆದಿದೆ. ಮೃತಪಟ್ಟವರೆಲ್ಲ ಒಂದೇ ಕುಟುಂಬಕ್ಕೆ ಸೇರಿದವರು ಎನ್ನಲಾಗಿದೆ. ಗಾಯಗೊಂಡವರನ್ನು ಸಮೀಪದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಮೃತರೆಲ್ಲ ಖಿಲೋರಾ ಗ್ರಾಮದ ನಿವಾಸಿಗಳಾಗಿದ್ದು, ಅರ್ಜುನಿ ಏರಿಯಾದಲ್ಲಿ ನಡೆದ ಸಮಾರಂಭವೊಂದರಲ್ಲಿ ಪಾಲ್ಗೊಂಡು, ಪಿಕ್​ಅಪ್​ ವಾಹನದಲ್ಲಿ ಗುರುವಾರ ರಾತ್ರಿ ವಾಪಸ್​ ಮನೆಗೆ ತೆರಳುತ್ತಿದ್ದರು. ಈ ವೇಳೆ ಟ್ರಕ್​ ಡಿಕ್ಕಿಯಾಗಿದೆ. ಕೂಡಲೇ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡುವ ಜತೆ, ಗಾಯಗೊಂಡವರ ರಕ್ಷಣೆಗೆ ತಾವೂ ಕೈಜೋಡಿಸಿದ್ದಾರೆ.

ಇದನ್ನೂ ಓದಿ: Road accident : ಧಾರವಾಡ ಬಳಿ ಭೀಕರ ಅಪಘಾತ; ಅಗ್ನಿವೀರ್‌ ಸೇವೆಗೆ ಹೊರಟವನ ರೈಲು ಹತ್ತಿಸಲು ಬಂದ ಐವರು ಸ್ಥಳದಲ್ಲೇ ಮೃತ್ಯು

Exit mobile version