ನವ ದೆಹಲಿ: ಭಾರತ್ ಜೋಡೋ ಯಾತ್ರೆಯಲ್ಲಿ ತೊಡಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ವ್ಯಂಗ್ಯ ಮಾಡಿದ್ದಾರೆ. ರಾಹುಲ್ ಗಾಂಧಿಯವರ ಮುಖ, ಥೇಟ್ ಸದ್ದಾಂ ಹುಸೇನ್ (ಇರಾಕ್ ಮಾಜಿ ಅಧ್ಯಕ್ಷ) ಮುಖದಂತೆ ಕಾಣುತ್ತಿದೆ ಎಂದು ಅಣಕಿಸಿದ್ದಾರೆ. ಹಿಮಂತ ಬಿಸ್ವಾ ಶರ್ಮಾ ಮಾತಿಗೆ ಬಿಜೆಪಿ ತಿರುಗೇಟು ಕೊಟ್ಟಿದ್ದರು. ‘ರಾಹುಲ್ ಗಾಂಧಿ ಗಡ್ಡದ ಬಗ್ಗೆ ಯಾಕೆ ಮಾತನಾಡುತ್ತೀರಿ? ನಿಮ್ಮ ಪ್ರಧಾನಮಂತ್ರಿ ಗಡ್ಡ ಬಿಟ್ಟಾಗ ನಾವ್ಯಾರೂ ಆ ಬಗ್ಗೆ ಏನೂ ಹೇಳಲಿಲ್ಲ. ನಾವು ಏನು ಸಮಸ್ಯೆ ಇದೆಯೋ ಅದರ ಬಗ್ಗೆ ಮಾತ್ರ ಮಾತನಾಡುತ್ತೇವೆ’ ಎಂದು ಹೇಳಿದೆ.
ಚುನಾವಣೆ ಸಮೀಪಿಸುತ್ತಿರುವ ಗುಜರಾತ್ನಲ್ಲಿ ಸಾರ್ವಜನಿಕ ಪ್ರಚಾರ ಸಭೆ ನಡೆಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, ‘ರಾಹುಲ್ ಗಾಂಧಿಯವರ ಮುಖ ಬದಲಾಗಿದೆ. ಅವರ ಹೊಸ ಲುಕ್ ಬಗ್ಗೆ ನಮಗೇನೂ ಸಮಸ್ಯೆ ಇಲ್ಲ. ಆದರೆ ಅವರಿಗೆ ಅವರ ಮುಖದ ರೂಪವನ್ನು ಬದಲಿಸಿಕೊಳ್ಳಲು ಆಸೆಯಿದ್ದರೆ, ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಥರನೋ, ಜವಾಹರ್ ಲಾಲ್ ನೆಹರೂ ಅವರಂತೆಯೋ ಬದಲಿಸಿಕೊಳ್ಳಬಹುದಿತ್ತು. ಅದೂ ಬೇಡವೆಂದರೆ ಗಾಂಧಿಜಿಯವರಂತೆಯೇ ಅವರ ರೂಪ ಬದಲಿಸಿಕೊಂಡಿದ್ದರೆ ಇನ್ನೂ ಚೆನ್ನಾಗಿತ್ತು. ಅದೆಲ್ಲ ಬಿಟ್ಟು, ಈಗ ನೋಡಿದರೆ, ರಾಹುಲ್ ಗಾಂಧಿಯವರು ಸದ್ದಾಂ ಹುಸೇನ್ರಂತೆ ಕಾಣಿಸುತ್ತಿದ್ದಾರೆ’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ ‘ಯಾವತ್ತೂ ಕಾಂಗ್ರೆಸ್ ನಾಯಕರ ಆಚರಣೆಗಳು ಭಾರತೀಯ ಸಂಸ್ಕೃತಿಗೆ ಹತ್ತಿರ ಆಗದೆ ಇರಲು ಇದೇ ಕಾರಣ. ಅವರೆಂದಿಗೂ ಬೇರೆ ದೇಶಗಳ ಸಂಸ್ಕೃತಿಯನ್ನೇ ಅಳವಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ’ ಎಂದೂ ಹೇಳಿದ್ದಾರೆ.
ಕಾಂಗ್ರೆಸ್ ತಿರುಗೇಟು
ಹಿಮಂತ ಬಿಸ್ವಾ ಶರ್ಮಾ ಮಾತುಗಳಿಗೆ ಕಾಂಗ್ರೆಸ್ ವಕ್ತಾರರಾದ ಅಲ್ಕಾ ಲಂಬಾ ತಿರುಗೇಟು ಕೊಟ್ಟಿದ್ದಾರೆ. ‘ರಾಹುಲ್ ಗಾಂಧಿಯವರು ಹಿಮಂತ ಬಿಸ್ವಾ ಶರ್ಮಾರಿಗಿಂತಲೂ ತಾವು ಸಾಕಿದ್ದ ನಾಯಿಗೆ ಯಾಕೆ ಮಹತ್ವ ಕೊಟ್ಟಿದ್ದಾರೆ ಎಂಬುದು ಈಗ ಗೊತ್ತಾಯಿತು. ಅವರು ಒಳ್ಳೆಯ ಕೆಲಸವನ್ನೇ ಮಾಡಿದ್ದಾರೆ’ ಎಂದಿದ್ದಾರೆ. ಈ ಹಿಂದೆ ಹಿಮಂತ್ ಬಿಸ್ವಾ ಶರ್ಮಾ ಕಾಂಗ್ರೆಸ್ನಲ್ಲಿದ್ದಾಗ ಒಮ್ಮೆ ರಾಹುಲ್ ಗಾಂಧಿಯವರನ್ನು ಭೇಟಿಯಾಗಲು ಹೋದಾಗ ರಾಹುಲ್ ಗಾಂಧಿ ಇವರಿಗೆ ಸ್ಪಂದಿಸದೆ, ತಮ್ಮ ಶ್ವಾನದೊಂದಿಗೆ ಆಟ ಆಡುತ್ತಿದ್ದರು ಎಂದು ಹೇಳಲಾಗಿತ್ತು. ಈ ಬಗ್ಗೆ ಹಿಮಂತ ಬಿಸ್ವಾ ಶರ್ಮಾರೇ ಆರೋಪ ಮಾಡಿದ್ದರು. ಅದನ್ನೇ ಈಗ ಅಲ್ಕಾ ಉಲ್ಲೇಖಿಸಿದ್ದಾರೆ.
ಇನ್ನು ಭಾರತ್ ಜೋಡೋ ಯಾತ್ರೆ ಇಂದಿಗೆ 77ನೇ ದಿನಕ್ಕೆ ಕಾಲಿಟ್ಟಿದೆ. ಸೆಪ್ಟೆಂಬರ್ 7ರಂದು ತಮಿಳುನಾಡಿನಿಂದ ಕನ್ಯಾಕುಮಾರಿಯಿಂದ ಪ್ರಾರಂಭವಾದ ಈ ಯಾತ್ರೆ ಈಗಾಗಲೇ ತಮಿಳುನಾಡು, ಕೇರಳ, ಕರ್ನಾಟಕ, ತೆಲಂಗಾಣ ಮತ್ತು ಮಹಾರಾಷ್ಟ್ರ ರಾಜ್ಯಗಳಲ್ಲಿ ಕ್ರಮಿಸಿ, ಇದೀಗ ಮಧ್ಯಪ್ರದೇಶಕ್ಕೆ ಆಗಮಿಸಿದೆ. ಈ ಮಧ್ಯೆ ಗುಜರಾತ್ ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಎರಡು ದಿನ ಭಾರತ್ ಜೋಡೋ ಯಾತ್ರೆಯಿಂದ ವಿರಾಮ ತೆಗೆದುಕೊಂಡು ಗುಜರಾತ್ಗೆ ಹೋಗಿ, ಅಲ್ಲಿ ಎರಡು ಪ್ರಚಾರ ಸಭೆಗಳನ್ನು ನಡೆಸಿದ್ದರು.
ಇದನ್ನೂ ಓದಿ: Assam CM Himanta Biswa Sarma | ಅಸ್ಸಾಮ್ ಸಿಎಂ ಹಿಮಂತ್ ಬಿಸ್ವಾ ಶರ್ಮಾಗೆ ಜೆಡ್ ಪ್ಲಸ್ ಸೆಕ್ಯುರಿಟಿ!