Site icon Vistara News

ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್​ ಪ್ರತಿಭಟನೆ ಇಂದು; ರಾಮಲೀಲಾ ಮೈದಾನದಲ್ಲಿ ರಾಹುಲ್ ಗಾಂಧಿ ಕಟೌಟ್​

Congress Rally

ನವ ದೆಹಲಿ: ಕಾಂಗ್ರೆಸ್​​ನ Mehngai par halla bol (ಬೆಲೆ ಏರಿಕೆ ಬಗ್ಗೆ ಧ್ವನಿಯೇರಿಸಿ) ಱಲಿ ಇಂದು ದೆಹಲಿಯಲ್ಲಿ ಬೃಹತ್​ ಮಟ್ಟದಲ್ಲಿ ನ​​ಡೆಯಲಿದೆ. ಹಣ ದುಬ್ಬರ, ನಿರುದ್ಯೋಗ ಮತ್ತು ಜಿಎಸ್​ಟಿ ಏರಿಕೆ ವಿರೋಧಿಸಿ ಕಾಂಗ್ರೆಸ್​ ನಡೆಸುತ್ತಿರುವ ದೊಡ್ಡ ಮಟ್ಟದ ಪ್ರತಿಭಟನೆ ಇದ್ದಾಗಿದ್ದು, ದೆಹಲಿಯ ರಾಮಲೀಲಾ ಮೈದಾನದಲ್ಲಿ ಭರ್ಜರಿ ಸಿದ್ಧತೆ ನಡೆದಿದೆ. ರಾಹುಲ್​ ಗಾಂಧಿಯ ದೊಡ್ಡದೊಡ್ಡ ಕಟೌಟ್, ಬ್ಯಾನರ್​​ಗಳನ್ನು​ ಹಾಕಲಾಗಿದೆ. ಅಪಾರ ಸಂಖ್ಯೆಯಲ್ಲಿ ಕಾಂಗ್ರೆಸ್​​ ಕಾರ್ಯಕರ್ತರು, ಪ್ರಮುಖರು ಇಲ್ಲಿಗೆ ಬಂದು ಸೇರುತ್ತಿದ್ದಾರೆ.

ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದಾರೆ. ಬಿಜೆಪಿ ವಿರುದ್ಧ ಪ್ರತಿಭಟನೆ ನಡೆಸುವುದು ಒಂದೆಡೆಯಾದರೆ, ಬಲ ಪ್ರದರ್ಶನ ಮಾಡುವುದು ಕಾಂಗ್ರೆಸ್​​ನ ಇನ್ನೊಂದು ಉದ್ದೇಶ ಎಂದು ಹೇಳಲಾಗಿದೆ. ಇಂದು ಬೆಳಗ್ಗೆ ಕಾಂಗ್ರೆಸ್​ ನಾಯಕರೆಲ್ಲ ಎಐಸಿಸಿ ಪ್ರಧಾನ ಕಚೇರಿಯಲ್ಲಿ ಸೇರಿದ್ದು, 11 ಗಂಟೆ ಬಳಿಕ ಒಟ್ಟಾಗಿ ಬಸ್​​ನಲ್ಲಿ ರಾಮಲೀಲಾ ಮೈದಾನಕ್ಕೆ ತೆರಳಲಿದ್ದಾರೆ. ಮಧ್ಯಾಹ್ನ 1 ಗಂಟೆ ಹೊತ್ತಿಗೆ ರಾಹುಲ್ ಗಾಂಧಿ ಭಾಷಣ ಮಾಡಲಿದ್ದಾರೆ.

ಬಿಜೆಪಿ ಕೇಂದ್ರ ಸರ್ಕಾರದ ವಿರುದ್ಧ ಒಂದಲ್ಲ ಒಂದು ಪ್ರತಿಭಟನೆ ನಡೆಸುತ್ತಿರುವ ಕಾಂಗ್ರೆಸ್​ ಇಂದು ರಾಮಲೀಲಾ ಮೈದಾನದಲ್ಲಿ ಮೆಹಂಗಾಯ್​​ ಪರ್​ ಹಲ್ಲಾ ಬೋಲ್​ ಱಲಿ ನಡೆಸುವ ಜತೆ, ಸೆಪ್ಟೆಂಬರ್​ 7ರಿಂದ ಭಾರತ್​ ಜೋಡೋ ಯಾತ್ರೆ ಹಮ್ಮಿಕೊಳ್ಳಲಿದೆ. ಇದು 3500 ಕಿಮೀ ದೂರದ ಯಾತ್ರೆಯಾಗಿದ್ದು, ರಾಹುಲ್ ಗಾಂಧಿ ದೇಶದ ವಿವಿಧೆಡೆ ಸಂಚಾರ ಮಾಡಲಿದ್ದಾರೆ. ಅವರೊಂದಿಗೆ ಹಲವು ನಾಯಕರೂ ಪಾಲ್ಗೊಳ್ಳಲಿದ್ದಾರೆ. ಬೆಲೆ ಏರಿಕೆ, ಕೋಮು ಗಲಭೆ ಹೆಚ್ಚುತ್ತಿರುವುದರ ಬಗ್ಗೆ ರಾಹುಲ್​ ಗಾಂಧಿ ದೇಶದ ಹಲವೆಡೆ ಮಾತನಾಡಲಿದ್ದಾರೆ.

ಇದನ್ನೂ ಓದಿ: ಸಂಸತ್‌ ಅಧಿವೇಶನದಲ್ಲಿ ಕಾಂಗ್ರೆಸ್ ಪ್ರತಿಭಟನೆ; ಉಭಯ ಸದನಗಳ ಕಲಾಪ ಮುಂದೂಡಿಕೆ

Exit mobile version