ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ಗೆ ಭಾರಿ ಹಿನ್ನಡೆಯಾಗಿದೆ. ಕಾಂಗ್ರೆಸ್ನ ಏಕೈಕ ಶಾಸಕ, ಬೀಡಿ ವ್ಯಾಪಾರಕ್ಕೆ ಹೆಸರಾದ ಬೈರೋನ್ ವಿಶ್ವಾಸ ಅವರು ಸೋಮವಾರ ತೃಣಮೂಲ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದರಿಂದಾಗಿ ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ನ ಒಬ್ಬ ಶಾಸಕರೂ ಇಲ್ಲದಂತಾಗಿದೆ.
ಬೈರೋನ್ ವಿಶ್ವಾಸ್ ಅವರು ಟಿಎಂಸಿ ಸೇರ್ಪಡೆಯಾದ ಬಳಿಕ ಟಿಎಂಸಿ ಪ್ರಧಾನ ಕಾರ್ಯದರ್ಶಿ ಅಭಿಷೇಕ್ ಬ್ಯಾನರ್ಜಿ ಈ ಕುರಿತು ಮಾಹಿತಿ ನೀಡಿದರು. “ಬೈರೋನ್ ವಿಶ್ವಾಸ್ ಅವರು ಟಿಎಂಸಿ ಸೇರ್ಪಡೆಯಾಗಿದ್ದಾರೆ. ಅವರ ಬೆಂಬಲದೊಂದಿಗೆ ಮುಂದಿನ ದಿನಗಳಲ್ಲಿ ಬಿಜೆಪಿ ವಿರುದ್ಧ ಹೋರಾಟ ನಡೆಸಲಾಗುವುದು” ಎಂದು ತಿಳಿಸಿದರು.
ಬೈರೋನ್ ವಿಶ್ವಾಸ್ ಸೇರ್ಪಡೆ ಕುರಿತು ಟಿಎಂಸಿ ಟ್ವೀಟ್
Today, during the ongoing #JonoSanjogYatra in the presence of Shri @abhishekaitc, INC MLA from Sagardighi Bayron Biswas joined us. We wholeheartedly welcome him to the Trinamool Congress family!
— All India Trinamool Congress (@AITCofficial) May 29, 2023
To strengthen your resolve to fight against the divisive and discriminatory… pic.twitter.com/CyCaUKTyRs
ಬೈರೋನ್ ವಿಶ್ವಾಸ್ ಅವರು ಇತ್ತೀಚೆಗೆ ಸಗರ್ದಿಘಿ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಟಿಎಂಸಿ ದೇಬಶಿಶ್ ಬ್ಯಾನರ್ಜಿ ವಿರುದ್ಧ 22 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2019ರ ವಿಧಾನಸಭೆ ಚುನಾವಣೆಯಲ್ಲಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ 213 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿತ್ತು.
ಇನ್ನು ಬಿಜೆಪಿ 77 ಕ್ಷೇತ್ರಗಳಲ್ಲಿ ಗೆದ್ದರೆ, ಕಾಂಗ್ರೆಸ್ ಸೊನ್ನೆ ಸುತ್ತಿತ್ತು. 2016ರಲ್ಲಿ 44 ಕ್ಷೇತ್ರ ಗೆದ್ದಿದ್ದ ಕಾಂಗ್ರೆಸ್ 2021ರಲ್ಲಿ ಹೀನಾಯವಾಗಿ ಸೋಲನುಭವಿಸಿತ್ತು. ಆದರೆ, ಉಪ ಚುನಾವಣೆಯಲ್ಲಿ ಬೈರೋನ್ ವಿಶ್ವಾಸ್ ಅವರು ಗೆಲುವು ಸಾಧಿಸುವ ಮೂಲಕ ಬಂಗಾಳದಲ್ಲಿ ಕಾಂಗ್ರೆಸ್ ಖಾತೆ ತೆರೆದಿದ್ದರು.
ಇದನ್ನೂ ಓದಿ: ಮುಕುಲ್ ರಾಯ್ ಬಿಜೆಪಿ ಸೇರ್ಪಡೆ ಖಚಿತ; ಅಮಿತ್ ಶಾ ಭೇಟಿಗಾಗಿ ಕಾಯ್ತಿದ್ದೇನೆ, ಆರೋಗ್ಯವಾಗಿದ್ದೇನೆ ಎಂದ ಟಿಎಂಸಿ ನಾಯಕ
ಈಗ ಅವರೂ ಟಿಎಂಸಿ ಸೇರಿದ ಕಾರಣ ಕಾಂಗ್ರೆಸ್ನ ಒಬ್ಬರೂ ಶಾಸಕ ಬಂಗಾಳದಲ್ಲಿ ಇಲ್ಲದಂತಾಗಿದೆ. ಆದಾಗ್ಯೂ, ಟಿಎಂಸಿ ಸೇರ್ಪಡೆಯಾದ ಬೈರೋನ್ ವಿಶ್ವಾಸ್ ಅವರಿಗೆ ಉನ್ನತ ಜವಾಬ್ದಾರಿ ಅಥವಾ ಸಚಿವ ಸ್ಥಾನ ನೀಡುವ ಕುರಿತು ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.