Site icon Vistara News

Sadhguru | ಸ್ಕೂಲ್‌ ಬ್ಯಾಗ್‌ನಲ್ಲಿ ಮದ್ಯ, ಗರ್ಭನಿರೋಧಕ ಮಾತ್ರೆ! ಈ ಬಗ್ಗೆ ಸದ್ಗುರು ಹೇಳೋದೇನು?

Sadhguru Jaggi Vasudev

ನವದೆಹಲಿ: ಶಾಲಾ ಮಕ್ಕಳ ಬ್ಯಾಗುಗಳಲ್ಲಿ ಮದ್ಯ, ಗರ್ಭನಿರೋಧಕ ಮಾತ್ರೆಗಳು ದೊರೆತಿರುವುದು ಪೋಷಕರಿಗೆ ಎಚ್ಚರಿಕೆ ಗಂಟೆಯಾಗಿದೆ ಎಂದು ಇಶಾ ಸಂಸ್ಥಾಪಕ ಸದ್ಗುರು ಜಗ್ಗಿ ವಾಸುದೇವ (Sadhguru) ಅವರು ಹೇಳಿದ್ದಾರೆ. ಇಂಥ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ಶಿಕ್ಷಕರು ಮತ್ತು ಪೋಷಕರು ಎಚ್ಚರಿಕೆ ವಹಿಸಬೇಕು. ಅಲ್ಲದೇ, ಸರಿಯಾದ ಮಾದರಿಯನ್ನು ಹುಟ್ಟಹಾಕಬೇಕಾದ ಅಗತ್ಯವಿರುವ ಮೂಲ ಸಮಸ್ಯೆಯ ಬಗ್ಗೆ ತಿಳಿದುಕೊಳ್ಳಬೇಕಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಒಂದು ವೇಳೆ ನೀವು ಮಕ್ಕಳನ್ನು ಹೊಂದಲು ನಿರ್ಧರಿಸಿದರೆ, ಅದು 20 ವರ್ಷದ ಪ್ರಾಜೆಕ್ಟ್. ಒಂದು ವೇಳೆ ಚೆನ್ನಾಗಿ ಮಾಡದಿದ್ದರೆ, ಅದು ಲೈಫ್ ಟೈಮ್ ಪ್ರಾಜೆಕ್ಟ್ ಆಗಬಹುದು. ಈ ಯೋಜನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ನೀವು ಸಿದ್ಧರಿಲ್ಲದಿದ್ದರೆ, ಮಕ್ಕಳನ್ನು ಮಾಡಿಕೊಳ್ಳಲು ಹೋಗಬೇಡಿ ಎಂದು ಅವರು ಸಲಹೆ ನೀಡಿದ್ದಾರೆ.

ಮಕ್ಕಳು ಹೇಗೆ ಬದುಕುತ್ತಾರೆ ಎಂಬುದು ಪೋಷಕರ ನಡತೆಯ ಮೇಲೆ ಅವಲಂಬನೆಯಾಗಿರುತ್ತದೆ. ಉದಾಹರಣೆಗೆ, ಪೋಷಕರು 20ನೇ ವಯಸ್ಸಿನಲ್ಲಿ ಮದ್ಯಪಾನ ಮಾಡಲು ಪ್ರಾರಂಭಿಸಿದರೆ, ಅವರ ಮಕ್ಕಳು 15 ರ ಆಸುಪಾಸಿನಲ್ಲಿ ಕುಡಿಯಲು ಆರಂಭಿಸುತ್ತಾರೆ. ಒಬ್ಬರ ನೈತಿಕತೆ ಮತ್ತು ಮೌಲ್ಯಗಳು ಏನೇ ಇರಲಿ. ನೀವು ಧೂಮಪಾನ ಮಾಡುತ್ತಿರುವುದನ್ನು ಅಥವಾ ಒಂದು ನಿರ್ದಿಷ್ಟ ರೀತಿಯ ಜೀವನವನ್ನು ಮಕ್ಕಳು ಕಂಡರೆ, ಅವರು ಬೇಗನೆ ಅದರ ಕಡೆಗೆ ವಾಲುತ್ತಾರೆ ಎಂದು ಅವರು ತಿಳಿಸಿದರು.

ಇದನ್ನೂ ಓದಿ | ಅಕ್ರಮವಾಗಿ ಹಾವು ಹಿಡಿದ ಆರೋಪ; ಈಶ ಫೌಂಡೇಷನ್‌ನ ಸದ್ಗುರು ಜಗ್ಗಿ ವಾಸುದೇವ್ ವಿರುದ್ಧ ದೂರು ದಾಖಲು

Exit mobile version