ಲಖನೌ: ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ತಮ್ಮ ಚಲನಚಿತ್ರ ಪ್ರಚಾರ ಕಾರ್ಯಕ್ರಮ ಭಾಗವಾಗಿ ಆಯೋಜಿಸಿದ್ದ ಸ್ಟಂಟ್ ವೀಕ್ಷಿಸಲು ಬಂದಿದ್ದ ಜನರು ದೊಂಬಿ ಎಬ್ಬಿಸಿದ ಕಾರಣ ಪೊಲೀಸರು ಲಾಠಿ ಚಾರ್ಜ್ಮಾಡಿದ ಘಟನೆ ನಡೆಸಿದೆ. ಉತ್ತರ ಪ್ರದೇಶದ ಹುಸೈನಾಬಾದ್ನಲ್ಲಿ ಘಟನೆ ನಡೆದಿದ್ದು. ಏಕಾಏಕಿ ನಟರ ಮೇಲೆ ಚಪ್ಪಲಿಗಳನ್ನು ಎಸೆದಿರುವ ಕಾರಣ ಸಾವಿರಾರು ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಬೇಕಾಯಿತು.
ಕ್ಲಾಕ್ ಟವರ್ ಬಳಿ ನಡೆದ ಅವ್ಯವಸ್ಥೆಯನ್ನು ನಿಯಂತ್ರಿಸಲು ಪೊಲೀಸ್ ಸಿಬ್ಬಂದಿ ಲಾಠಿ ಚಾರ್ಜ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಘರ್ಷಣೆಯಲ್ಲಿ ಕೆಲವರು ಗಾಯಗೊಂಡಿದ್ದಾರೆ ಎಂದು ಸ್ಥಳೀಯರು ಮತ್ತು ಹುಸೈನಾಬಾದ್ ನಿವಾಸಿಗಳು ತಿಳಿಸಿದ್ದಾರೆ, ಆದರೆ ಪೊಲೀಸರು ಈ ಹೇಳಿಕೆಯನ್ನು ನಿರಾಕರಿಸಿದ್ದಾರೆ.
ಚಿತ್ರದ ಪ್ರಚಾರ ಚಟುವಟಿಕೆಯ ಭಾಗವಾಗಿ ಬಾಲಿವುಡ್ ಜೋಡಿ ಚಿತ್ರದ ಕೆಲವೊಂದು ವಸ್ತುಗಳನ್ನು ಜನಸಮೂಹದತ್ತ ಎಸೆದಿದ್ದರು. ಈ ವೇಳೆ ನೂಕು ನುಗ್ಗಲು ನಡೆದಿತ್ತು. ಅಭಿಮಾನಿಗಳು ತಮ್ಮ ಕಡೆಗೆ ಎಸೆಯಲಾದ ವಸ್ತುಗಳನ್ನು ಹಿಡಿಯಲು ತಳ್ಳಾಡಿದರು. ಇದರಿಂದ ಅವರನ್ನು ಬ್ಯಾರಿಕೇಡ್ಗಳು ಮುರಿದವು ಎಂದು ಕಾರ್ಯಕ್ರಮವನ್ನು ಆಯೋಜಿಸಿದ್ದ ಪಿಆರ್ ಕಂಪನಿಯ ಪ್ರತಿನಿಧಿ ಆನಂದ್ ಕೃಷ್ಣ ಹೇಳಿದರು.
ಇದನ್ನೂ ಓದಿ : ’ಕಾಶ್ಮೀರ ಸೇಫ್’ ಎಂದು ಬ್ರಿಟನ್‌ನಲ್ಲಿ ಗುಡುಗಿದ್ದ ಪತ್ರಕರ್ತೆಗೆ ದೆಹಲಿಯಲ್ಲಿ ಹೀಗಾ ಮಾಡೋದು!
ಘಟನೆ ಬಳಿಕ ನಿಗದಿತ ಸಮಯಕ್ಕಿಂತ ಮೊದಲೇ ನಟರು ಪ್ರದರ್ಶನವನ್ನು ಅರ್ಧದಲ್ಲೇ ನಿಲ್ಲಿಸಿದರು ಎಂದು ಸಂಘಟಕರಲ್ಲಿ ಒಬ್ಬರು ತಿಳಿಸಿದ್ದಾರೆ. ಆದಾಗ್ಯೂ, ಮತ್ತೊಂದು ವೀಡಿಯೊದಲ್ಲಿ ಅನಿಯಂತ್ರಿತ ಜನಸಮೂಹವು ಚಪ್ಪಲಿಗಳನ್ನು ಎಸೆಯುವುದನ್ನು ಕಾಣಬಹುದು. ಅದೇ ರೀತಿ ಅನೇಕರು ಗಾಯಗೊಂಡಿದ್ದಾರೆ. ಆದರೆ ಚೌಕ್ನ ಸಹಾಯಕ ಪೊಲೀಸ್ ಆಯುಕ್ತ ರಾಜ್ ಕುಮಾರ್ ಸಿಂಗ್ “ಕೆಲವೇ ನಿಮಿಷಗಳಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲಾಯಿತು. ಪೊಲೀಸರು ಯಾವುದೇ ಲಾಠಿ ಪ್ರಹಾರ ನಡೆಸಿಲ್ಲ. ಈ ಪ್ರದೇಶದಲ್ಲಿ ಸಂಪೂರ್ಣ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲಾಗುತ್ತಿದೆ ಎಂದು ಹೇಳಿದ್ದಾರೆ.
ಪಾರಂಪರಿಕ ತಾಣಗಳ ನಾಶ
ಚಲನಚಿತ್ರ ತಾರೆಯರ ಲೈವ್ ಸ್ಟಂಟ್ಗಳನ್ನು ಉತ್ತರ ಪ್ರದೇಶದಲ್ಲಿ ನಿಯಂತ್ರಿಸಲು ಯಪಿಯಲ್ಲಿ ಕಷ್ಟವಿದೆ. ವರ್ಷಗಳ ಹಿಂದೆ ಗವಾಸ್ಕರ್ ಮತ್ತು ಇತರರೊಂದಿಗೆ ಭಾರತ ಕ್ರಿಕೆಟ್ ತಂಡವು ಆಡಲು ಅಲಹಾಬಾದ್ ಬಂದಾಗ ಸಾರ್ವಜನಿಕರು ತುಂಬಾ ಕ್ರೀಡಾಂಗಣಕ್ಕೆ ನುಗ್ಗಿದ್ದರು. ಈಗಲೂ ಹೆಚ್ಚು ಬದಲಾಗಿಲ್ಲ ಎಂದು ಪಾರಂಪರಿಕ ತಾಣಗಳ ರಕ್ಷಕಿ ಅದಿತಿ ಚಕ್ರವರ್ತಿ ಬೇಸರ ವ್ಯಕ್ತಪಡಿಸಿದ್ದಾರೆ. ಕಳೆದ ಮಳೆಗಾಲದಲ್ಲಿ ಅವರು ಪಾಲ್ಗೊಂಡಿದ್ದ ಸಿಟಿಜನ್ಸ್ ಫಾರ್ ಲಕ್ನೋದ ಅಭಿಯಾನದಲ್ಲಿ ನೆಟ್ಟ ಅನೇಕ ಸಸಿಗಳು ನಾಶವಾಗಿರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಮತ್ತೊಬ್ಬ ಪಾರಂಪರಿಕ ಪ್ರೇಮಿ ಅರುಣಾ ಪರಾಶರ್ “ಪಾರಂಪರಿಕ ತಾಣಗಳಲ್ಲಿ ಈ ರೀತಿಯ ಸಮಾರಂಭಕ್ಕೆ ಅವಕಾಶ ನೀಡುವ ಜನರೊಂದಿಗೆ ಪರಿಸ್ಥಿತಿಯನ್ನು ನಿಯಂತ್ರಿಸುವುದು ಸಂಘಟಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.