ನವ ದೆಹಲಿ: ದೇಶದಲ್ಲಿ ಕೊರೊನಾ ಮಿತಿಮೀರುತ್ತಿದೆ (Covid 19 in India). 24 ಗಂಟೆಯಲ್ಲಿ 8084 ಕೇಸ್‌ಗಳು ದಾಖಲಾಗಿವೆ. 10 ಮಂದಿ ಸಾವನ್ನಪ್ಪಿದ್ದಾರೆ. ಹಾಗೇ, ಒಂದು ದಿನದಲ್ಲಿ 4,592 ಮಂದಿ ಕೊರೊನಾದಿಂದ ಚೇತರಿಸಿಕೊಂಡು ಆಸ್ಪತ್ರೆಗಳಿಂದ ಡಿಸ್‌ಚಾರ್ಜ್ ಆಗಿದ್ದಾರೆ. ಅಂದರೆ ಈಗ ಮತ್ತೆ ದೇಶದಲ್ಲಿ ಒಂದು ದಿನದಲ್ಲಿ ದಾಖಲಾಗುವ ಕೊರೊನಾ ಸೋಂಕಿತರ ಸಂಖ್ಯೆಗಿಂತ ಡಿಸ್‌ಚಾರ್ಜ್ ಆಗುವವರ ಸಂಖ್ಯೆ ಕಡಿಮೆ ಇರುತ್ತಿದೆ. ಇಂದು ಅರ್ಧದಷ್ಟೇ ಕಡಿಮೆಯಾಗಿದೆ. ಇದರಿಂದಾಗಿ ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 47,995ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.
ದೇಶದಲ್ಲಿ ಇಲ್ಲಿನವರೆಗೆ ಒಟ್ಟಾರೆ ಕೊರೊನಾ ಕೇಸ್ ಸಂಖ್ಯೆ 4,32,30,101ಕ್ಕೆ ತಲುಪಿದೆ. ಸಾವಿನ ಸಂಖ್ಯೆ 5,24,771ಕ್ಕೆ ಮುಟ್ಟಿದೆ. ನಾಲ್ಕು ತಿಂಗಳ ನಂತರ ದೇಶದ ಪಾಸಿಟಿವಿಟಿ ರೇಟ್ ಶೇ.3ಕ್ಕೆ ಏರಿದ್ದು ಸ್ವಲ್ಪ ಆತಂಕ ತಂದಿದೆ. ಇಂದು ದೈನಂದಿನ ಪಾಸಿಟಿವಿಟಿ ರೇಟ್ ಶೇ. 3.24 ದಾಖಲಾಗಿದ್ದು, ವಾರದ ಪಾಸಿಟಿವಿಟಿ ದರ ಶೇ. 2.21ಕ್ಕೆ ತಲುಪಿದೆ. ಸಾವಿನ ರೇಟ್ ಶೇ. 1.21ಕ್ಕೆ ತಲುಪಿದೆ.
ಹೀಗೆ ದೈನಂದಿನವಾಗಿ ದಾಖಲಾಗುತ್ತಿರುವ ಕೊರೊನಾ ಕೇಸ್ ಸಂಖ್ಯೆ ಹೆಚ್ಚುತ್ತಿರುವ ಬೆನ್ನಲ್ಲೇ ದೇಶದಲ್ಲಿ ನಾಲ್ಕನೇ ಅಲೆಯ ಆತಂಕ ಎದುರಾಗಿದೆ. ಹಾಗಿದ್ದಾಗ್ಯೂ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಇದನ್ನು ಅಲ್ಲಗಳೆದಿದೆ. ದೇಶದಲ್ಲಿ ಕೊರೊನಾ ವೈರಸ್ ಪ್ರಮಾಣ ಏರುತ್ತಿರಬಹುದು. ಆದರೆ ಇದು 4ನೇ ಅಲೆ ಅಲ್ಲ ಎಂದು ICMR ಆರೋಗ್ಯ ತಜ್ಞರು ಹೇಳಿದ್ದಾರೆ. ಆದರೂ ಕೊರೊನಾ ನಿರ್ಬಂಧ ನಿಯಮಗಳನ್ನು ಮತ್ತೆ ಕಟ್ಟುನಿಟ್ಟಾಗಿ ಪಾಲಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್‌ನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ದೇಶದಲ್ಲಿ ಮತ್ತೆ ಹೆಚ್ಚುತ್ತಿದೆ ಕೊರೊನಾ ವೈರಸ್; ಇಂದು 7 ಸಾವಿರಕ್ಕೂ ಅಧಿಕ ಕೇಸ್ ದಾಖಲು