Site icon Vistara News

Crime Story | ಮತ್ತೊಬ್ಬಳ ಸಲುವಾಗಿ ಹೆಂಡತಿ ಕಾಲ ಮೇಲೆ ಕಾರ್ ಹತ್ತಿಸಿದ ನಿರ್ಮಾಪಕ ಸೆರೆ

Kamal Kishore Mishra

ಮುಂಬೈ: ತನ್ನ ಹೆಂಡತಿಯ ಮೇಲೆಯೇ ಕಾರ್ ಹರಿಸಿದ್ದ ನಿರ್ಮಾಪಕ ಕಮಲ್ ಕಿಶೋರ್ ಮಿಶ್ರಾ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಗುರುವಾರ ಮುಂಬೈನ ಅಂಬೋಲಿ ಪೊಲೀಸರು ಮಿಶ್ರಾ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದರು. ಹೆಂಡತಿ ಮೇಲೆ ಕಾರ್ ಹತ್ತಿಸಿದ ಆರೋಪದಡಿ ಕಮಲ್ ಕಿಶೋರ್ ಮಿಶ್ರಾ ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ(Crime Story).

ಯಾಸ್ಮಿನ್ ಮಿಶ್ರಾ ಅವರು ತಮ್ಮ ಪತಿ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಕಮಲ್ ಮಿಶ್ರಾ ಅವರು ಮತ್ತೊಬ್ಬ ಹೆಂಗಸಿನ ಜತೆ ಕಾರಿನಲ್ಲಿ ಚಕ್ಕಂದ ಆಡುತ್ತಿದ್ದಾಗ, ಪತ್ನಿ ಯಾಸ್ಮಿನ್ ಕೈಯಲ್ಲಿ ಸಿಕ್ಕಿಬಿದ್ದಿದ್ದರು. ಆಗ ಅವರು ಹೆಂಡತಿಯ ಮೇಲೆ ಕಾರ್ ಹತ್ತಿಸಿ ಓಡಿ ಹೋಗಿದ್ದರು. ಈ ಸಂಬಂಧ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಕೇಸ್ ದಾಖಲಿಸಿದ್ದಾರೆ. ಈ ಘಟನೆ ನಡೆದಿದ್ದು ಅಂಧೇರಿಯಲ್ಲಿರುವ ಅವರ ನಿವಾಸದ ಪಾರ್ಕಿಂಗ್‌ ಲಾಟ್‌ನಲ್ಲಿ.

ಈ ಘಟನೆ ಅಕ್ಟೋಬರ್ 19ರಂದು ಸಂಭವಿಸಿದೆ. ಕಮಲ್ ಮಿಶ್ರಾ ಅವರು ತಮ್ಮ ಪತ್ನಿಯ ಕಾಲು ಮೇಲೆ ಕಾರ್ ಹತ್ತಿಸಿಕೊಂಡು ಹೋಗುವ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದ್ದವು. ದೆಹತಿ ಡಿಸ್ಕೋ ನಿರ್ಮಾಪಕನಾಗಿರುವ ಮಿಶ್ರಾ ವಿರುದ್ಧ ಬೇಜವಾಬ್ದಾರಿ ಡ್ರೈವಿಂಗ್, ಜೀವಕ್ಕೆ ಹಾನಿ ಮಾಡುವ ಉದ್ದೇಶ ಸೇರಿದಂತೆ ಅನೇಕ ದಂಡ ಸಂಹಿತೆಗಳ ಅಡಿಯಲ್ಲಿ ಪೊಲೀಸರು ಕೇಸ್ ದಾಖಲಿಸಿದ್ದಾರೆ.

ಇದನ್ನೂ ಓದಿ | ಸಿನಿಮಾ ಮುಗಿಸದೆ ಇದ್ದರೆ ನೀನೇ ಕಾಣ್ಸಲ್ಲ, ಹಾಗೆ ಮಾಡಿಬಿಡ್ತೀನಿ: ನಿರ್ಮಾಪಕನಿಗೆ ನಟ ದರ್ಶನ್​ ಧಮ್ಕಿ

Exit mobile version