Site icon Vistara News

Delhi Accident Case | ಆರೋಪಿಗಳ ವಿರುದ್ಧ ಕೊಲೆ ಕೇಸ್‌ ಹಾಕುವಂತೆ ಒತ್ತಾಯಿಸಿ ಠಾಣೆ ಎದುರು ಅಂಜಲಿ ಕುಟುಂಬ ಧರಣಿ

ನವದೆಹಲಿ: ಹೊಸ ವರ್ಷದ ದಿನದಂದು ನವದೆಹಲಿಯ ಕಾಂಝಾವರ್‌ನಲ್ಲಿ ನಡೆದಿದ್ದ ಅಪಘಾತ ಪ್ರಕರಣದಲ್ಲಿ (Delhi Accident Case) ಮೃತಳಾದ ಯುವತಿ ಅಂಜಲಿಯ ಕುಟುಂಬ ಮಂಗಳವಾರ ಸುಲ್ತಾನ್‌ಪುರಿ ಪೊಲೀಸ್‌ ಠಾಣೆ ಎದುರು ಧರಣಿ ಮಾಡಿದೆ. ಆರೋಪಿಗಳ ವಿರುದ್ಧ ಕೊಲೆ ಪ್ರಕರಣವನ್ನೂ ದಾಖಲಿಸಿಕೊಳ್ಳಬೇಕು ಎಂದು ಕುಟುಂಬಸ್ಥರು ಪೊಲೀಸರಿಗೆ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Accident In Delhi | ದೆಹಲಿ ಯುವತಿ ಅಂಜಲಿಗೆ ಡಿಕ್ಕಿ ಹೊಡೆದ ಬಳಿಕ ಕಾರಿನಲ್ಲಿದ್ದವರು ಮಾಡಿದ್ದೇನು?-ಮತ್ತೊಂದು ವಿಡಿಯೊ ಲಭ್ಯ!

ನವದೆಹಲಿಯ ಸದ್ಯ ತಾಪಮಾನ ಅತ್ಯಂತ ಕಡಿಮೆಯಾಗಿದ್ದು, ಕೊರೆಯುವ ಚಳಿಯಿದೆ. ಅದನ್ನೂ ಲೆಕ್ಕಿಸದ ಕುಟುಂಬ ಮಂಗಳವಾರ ಬೆಳಗ್ಗೆಯೇ ಪೊಲೀಸ್‌ ಠಾಣೆ ಎದುರು ಧರಣಿ ಕುಳಿತಿದ್ದು, ನ್ಯಾಯ ಬೇಕೆಂದು ಒತ್ತಾಯಿಸಿದೆ.
ಜ.1ರಂದು ಮುಂಜಾನೆ ಅಂಜಲಿ ಸಂಚರಿಸುತ್ತಿದ್ದ ಸ್ಕೂಟಿಗೆ ಕಾರೊಂದು ಡಿಕ್ಕಿ ಹೊಡೆದು, ಯುವತಿಯ ದೇಹವನ್ನು 12 ಕಿ.ಮೀ.ನಷ್ಟು ದೂರ ಎಳೆದೊಯ್ತಿತ್ತು. ಆ ಪ್ರಕರಣ ಸಂಬಂಧ ಪೊಲೀಸರು ದೀಪಕ್‌ ಖನ್ನಾ(26), ಅಮಿತ್‌ ಖನ್ನಾ(25), ಕೃಷನ್‌(27), ಮಿಥುನ್(26) ಮತ್ತು ಮನೋಜ್‌ ಮಿತ್ತಾಲ್‌ ಎನ್ನುವವರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ: Sultanpuri Death Case | ಅಪಘಾತಕ್ಕೆ ಬಲಿಯಾದ ಅಂಜಲಿ ಸಿಂಗ್‌ ಮನೆಯಲ್ಲಿ ಕಳವು, ಪೊಲೀಸರ ಮೇಲೆ ನಂಬಿಕೆ ಇಲ್ಲ ಎಂದ ಕುಟುಂಬಸ್ಥರು

ಅದಾದ ನಂತರ ಆರೋಪಿಗಳನ್ನು ರಕ್ಷಿಸುವುದಕ್ಕೆ ಪ್ರಯತ್ನಿಸಿದ ಆರೋಪದಲ್ಲಿ ಅಶುತೋಷ್‌ ಭಾರದ್ವಾಜ್‌ ಮತ್ತು ಅಂಕುಷ್‌ ಖನ್ನಾ ಹೆಸರಿನವರನ್ನೂ ಬಂಧಿಸಲಾಗಿದೆ. ಅದರಲ್ಲಿ ಅಶುತೋಷ್‌ ನ್ಯಾಯಾಲಯಕ್ಕೆ ಜಾಮೀನು ಅರ್ಜಿ ಸಲ್ಲಿಸಿದ್ದು, ಅದರ ವಿಚಾರಣೆ ಗುರುವಾರ ನಡೆಯಲಿದೆ.

Exit mobile version