ಜನರಲ್ಲಿ ಸಂಚಾರ ಸುರಕ್ಷತೆಯ ಜಾಗೃತಿಯನ್ನು ಮೂಡಿಸುವಲ್ಲಿ ದೆಹಲಿ ಹಾಗೂ ಉತ್ತರ ಪ್ರದೇಶದ ಪೊಲೀಸರು (Delhi and UP Police) ಮತ್ತೊಮ್ಮೆ ತಮ್ಮ ಕ್ರಿಯಾಶೀಲತೆಯನ್ನು ತೋರಿದ್ದಾರೆ. ಅಲ್ಲಿಯ ಪೊಲೀಸರ ಹೊಸ ಐಡಿಯಾ ಹಾಗೂ ಸಂದೇಶಕ್ಕೆ ಸೋಷಿಯಲ್ ಮೀಡಿಯಾದಲ್ಲಿ (Delhi and UP Police road safety advisor) ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ. ಶಾರುಖ್ ಖಾನ್ ಅವರ ‘ಜವಾನ್’ ಸಿನಿಮಾದ (Jawan Movie) ಫೋಟೊ ಬಳಕೆ ಮಾಡಿಕೊಂಡು ಅಲ್ಲಿಯ ಪೊಲೀಸರು ಜಾಗೃತಿಯನ್ನು ಮೂಡಿಸಿದ್ದಾರೆ. ಶಾರುಖ್ ಖಾನ್ ಮುಖಕ್ಕೆ ಬ್ಯಾಂಡೇಜ್ ಸುತ್ತಿಕೊಂಡಿರುವ ಫೋಟೊ ಹಾಗೂ ಹೆಲ್ಮೆಟ್ ಫೋಟೊವನ್ನು ಗ್ರಿಡ್ ಮಾಡಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಫೋಟೊ ಜತೆಗೆ “ಮಕ್ಕಳಾಗಿರಲಿ, ಹಿರಿಯರಾಗಿರಲಿ ಅಥವಾ ಯಾರೇ ಇರಲಿ, ಹೆಲ್ಮೆಟ್ ಒಂದು ಜೀವವನ್ನು ಉಳಿಸುತ್ತದೆ” ಎಂದು ಟ್ವಿಟರ್‌ನಲ್ಲಿ ಅಲ್ಲಿಯ ಪೊಲೀಸರು ಪೋಸ್ಟ್ ಮಾಡಿದ್ದಾರೆ. ರಸ್ತೆ ಸುರಕ್ಷತೆಯನ್ನು ಉತ್ತೇಜಿಸಲು ಈ ಪೋಸ್ಟ್ ಬಳಸಿಕೊಂಡಿದ್ದಾರೆ. ಹಿಂದಿಯಲ್ಲಿ ಬರೆಯಲಾದ ಸಂದೇಶವು ದ್ವಿಚಕ್ರ ವಾಹನವನ್ನು ಓಡಿಸುವ ಮೊದಲು ಯಾವಾಗಲೂ ಹೆಲ್ಮೆಟ್ ಧರಿಸಬೇಕು, ವಯಸ್ಸಿನ ಭೇದವಿಲ್ಲದೆ ಪ್ರತಿಯೊಬ್ಬರಿಗೂ ಇದು ಅನ್ವಯ ಎಂಬ ಸಂದೇಶ ರವಾನಿಸಿದೆ. ‘ಈ ರೀತಿ ಬ್ಯಾಂಡೇಜ್ ಕಟ್ಟಿಕೊಳ್ಳುವುದನ್ನು ತಪ್ಪಿಸಿಕೊಳ್ಳಬೇಕು ಎಂದರೆ ಹೆಲ್ಮೆಟ್ ಧರಿಸಿ’ ಎಂಬರ್ಥದಲ್ಲಿ ಉತ್ತರ ಪ್ರದೇಶ ಹಾಗೂ ದೆಹಲಿ ಪೊಲೀಸರು ಟ್ವೀಟ್ ಮಾಡಿದ್ದಾರೆ. ಈ ಪೋಸ್ಟರ್ ಈಗ ವೈರಲ್ ಆಗುತ್ತಿದೆ.
ಇದನ್ನೂ ಓದಿ: Jawan Box Office Collection: ಭಾನುವಾರ 81 ಕೋಟಿ ರೂ. ಗಳಿಕೆ ಕಂಡ ʻಜವಾನ್ʼ; ಸಿನಿಮಾದ ಒಟ್ಟು ಕಲೆಕ್ಷನ್ ಎಷ್ಟು?
ಮೊದಲ ದಿನವೇ ʼಜವಾನ್ʼ 75 ಕೋಟಿ ರೂ. ಬಾಚಿಕೊಂಡಿತು. ವರದಿಯ ಪ್ರಕಾರ ನಾಲ್ಕನೇ ದಿನ 81 ಕೋಟಿ ರೂಪಾಯಿ ಗಳಿಕ ಕಂಡಿದೆ. ಈ ಮೂಲಕ ಸಿನಿಮಾದ ಕಲೆಕ್ಷನ್ 287 ಕೋಟಿ ರೂಪಾಯಿ ಆಗಿದೆ. ಜಾಗತಿಕ ಬಾಕ್ಸ್ ಆಫೀಸ್ನಲ್ಲಿ ಸಿನಿಮಾ ಸುಮಾರು 500 ಕೋಟಿ ರೂಪಾಯಿ ಬಾಚಿಕೊಂಡಿದೆ.
ʼಪಠಾಣ್ʼ ಐತಿಹಾಸಿಕ ಯಶಸ್ಸಿನ ನಂತರ ಈ ವರ್ಷ ಬಿಡುಗಡೆ ಆಗುತ್ತಿರುವ ಶಾರುಖ್ ಖಾನ್ ಅವರ ಎರಡನೇ ಚಲನಚಿತ್ರ ಜವಾನ್. ಮೊದಲ ದಿನವೇ 57 ಕೋಟಿ ರೂ. ಗಳಿಸಿದ ʼಪಠಾಣ್ʼ ಸಿನಿಮಾವನ್ನು ಹಿಂದಿಕ್ಕಿ ʼಜವಾನ್ʼ 75 ಕೋಟಿ ರೂಪಾಯಿ ಗಳಿಸಿ ವರ್ಷದ ಬೆಸ್ಟ್ ಹಿಂದಿ ಓಪನರ್ ಸಿನಿಮಾ ಆಗಿ ಹೊರಹೊಮ್ಮಿದೆ. ಕೇವಲ ಮೂರೇ ದಿನಗಳಲ್ಲಿ 200 ಕೋಟಿ ರೂ. ಗಳಿಸಿದ ದಾಖಲೆ ʼಜವಾನ್ʼ ಸಿನಿಮಾದ್ದು. ʼಪಠಾಣ್ʼ ಈ ದಾಖಲೆ ಮಾಡಲು 4 ದಿನಗಳನ್ನು ತೆಗೆದುಕೊಂಡಿತು. ಅದೇ ರೀತಿ ʼಗದರ್ 2ʼ ಸಿನಿಮಾ 5 ದಿನಗಳಲ್ಲಿ ಇಷ್ಟು ಸಂಪಾದನೆ ಮಾಡಿತ್ತು.
ಶಾರುಖ್ ಮತ್ತು ನಯನತಾರಾ ಇದೇ ಮೊದಲ ಬಾರಿಗೆ ಒಟ್ಟಿಗೆ ತೆರೆ ಹಂಚಿಕೊಂಡಿದ್ದಾರೆ. ಇವರಿಬ್ಬರ ಕ್ಯೂಟ್ ಜೋಡಿಯನ್ನು ಜನ ಹಾಡಿ ಹೊಗಳುತ್ತಿದ್ದಾರೆ. ದೀಪಿಕಾ ಪಡುಕೋಣೆ ಕೂಡ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ವಿಜಯ್ ಸೇತುಪತಿ ವಿಭಿನ್ನ ಅವತಾರಗಳಲ್ಲಿ ಗಮನ ಸೆಳೆದಿದ್ದಾರೆ.