ನವದೆಹಲಿ: ಚುನಾವಣೆ ಆಯೋಗವು ದೆಹಲಿ ಮಹಾನಗರ ಪಾಲಿಕೆ (MCD Election 2022) ಚುನಾವಣೆ ದಿನಾಂಕವನ್ನು ಘೋಷಿಸಿದೆ. “ಡಿಸೆಂಬರ್ 4ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 7ರಂದು ಫಲಿತಾಂಶ ಪ್ರಕಟವಾಗಲಿದೆ” ಎಂದು ದೆಹಲಿ ಚುನಾವಣೆ ಆಯೋಗದ ಆಯುಕ್ತ ವಿಜಯ್ ದೇವ್ ಮಾಹಿತಿ ನೀಡಿದರು.
“ಚುನಾವಣೆಗೆ ಸಂಬಂಧಿಸಿದಂತೆ ನವೆಂಬರ್ 7ರಂದು ಅಧಿಸೂಚನೆ ಹೊರಡಿಸಲಾಗುತ್ತದೆ. ಶುಕ್ರವಾರ (ನವೆಂಬರ್ 4)ದಿಂದಲೇ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ. ನವೆಂಬರ್ 14 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ. ನ.16ರಂದು ನಾಪತ್ರ ಸಲ್ಲಿಸಲು ಕೊನೆಯ ದಿನವಾದರೆ, ಹಿಂಪಡೆಯಲು ನ.19 ಕಡೆಯ ದಿನವಾಗಿದೆ. ಡಿ.4ರಂದು ಬೆಳಗ್ಗೆ 8.30ರಿಂದ ಸಂಜೆ 5ರವರೆಗೆ ಮತದಾನ ನಡೆಯಲಿದೆ” ಎಂದು ತಿಳಿಸಿದರು.
ದೆಹಲಿ ಮಹಾನಗರ ಪಾಲಿಕೆಯಲ್ಲಿ 2007ರಿಂದಲೂ ಬಿಜೆಪಿ ಅಧಿಕಾರದಲ್ಲಿದೆ. ಹಾಗಾಗಿ, ಡಿ.4ರಂದು 250 ವಾರ್ಡ್‌ಗಳಿಗೆ ನಡೆಯುವ ಚುನಾವಣೆಯು ಜಿದ್ದಾಜಿದ್ದಿನಿಂದ ಕೂಡಿರಲಿದೆ. ಬಿಜೆಪಿ ಹಾಗೂ ಆಪ್ ಮಧ್ಯೆ ತೀವ್ರ ಪೈಪೋಟಿಯಿದ್ದರೂ, ಕಾಂಗ್ರೆಸ್‌ಅನ್ನು ನಿರ್ಲಕ್ಷಿಸುವಂತಿಲ್ಲ. ಹಾಗಾಗಿ, ಇದು ತ್ರಿಕೋನ ಕದನವಾಗಿರಲಿದೆ.
ಇದನ್ನೂ ಓದಿ | Gujarat election | ಗುಜರಾತ್ ವಿಧಾನಸಭೆ ಚುನಾವಣೆ ದಿನಾಂಕ ಇಂದು ಮಧ್ಯಾಹ್ನ 12ಕ್ಕೆ ಘೋಷಣೆ