ನವದೆಹಲಿ: ದಿಲ್ಲಿ ಅಬಕಾರಿ ನೀತಿ (Delhi liquor case) ಹಗರಣದಲ್ಲಿ ಜೈಲು ಪಾಲಾಗಿರುವ ದಿಲ್ಲಿ ಮಾಜಿ ಡಿಸಿಎಂ ಮನೀಶ್ ಸಿಸೋಡಿಯಾ ಅವರ ಜಾರಿ ನಿರ್ದೇಶನಾಲಯ(ಇ.ಡಿ) ಕಸ್ಟಡಿ ಅವಧಿಯನ್ನು ಕೋರ್ಟ್ 5 ದಿನಗಳ ಕಾಲ ಮತ್ತೆ ವಿಸ್ತರಿಸಿದೆ. ಸಿಸೋಡಿಯಾ ಅವರನ್ನು ಒಂದು ವಾರ ತಮ್ಮ ಕಸ್ಟಡಿಗೆ ನೀಡುವಂತೆ ಇ.ಡಿ, ನ್ಯಾಯಾಲಯವನ್ನು ಕೇಳಿಕೊಂಡಿತ್ತು. ಆದರೆ, ಕೋರ್ಟ್ 5 ದಿನಗಳವರೆಗೆ ಮಾತ್ರ ವಿಸ್ತರಣೆ ಮಾಡಿದೆ.
ಕೋರ್ಟ್‌ನಲ್ಲಿ ಮನೀಶ್ ಸಿಸೋಡಿಯಾ ಅವರ ಪರ ವಕೀಲರು ವಾದ ಮಾಡಿ, ಸಿಸೋಡಿಯಾ ಅವರನ್ನು ಇ.ಡಿ. ನಿತ್ಯ ಅರ್ಧ ಗಂಟೆಯಿಂದ ಒಂದು ಗಂಟೆ ಮಾತ್ರ ವಿಚಾರಣೆ ನಡೆಸುತ್ತಿದೆ. ಹಾಗಾಗಿ, ಬಹಳ ದಿನಗಳವರೆಗೆ ಅವರನ್ನು ಜೈಲಿನಲ್ಲಿ ಉಳಿಸುವುದು ಅಗತ್ಯವಿಲ್ಲ ಎಂದು ಹೇಳಿದರು. ಈ ಹಿಂದೆ ಸಿಬಿಐ ವಶದಲ್ಲಿದ್ದಾಗ, ಸಿಬಿಐ ಕೇಳಿದ ಪ್ರಶ್ನೆಗಳನ್ನು ಪುನಃ ಪುನಃ ಕೇಳುತ್ತಿದೆ ಎಂದು ಸಿಬಿಐ ಕೋರ್ಟ್‌ನಲ್ಲಿ ಆರೋಪಿಸಿದ್ದರು. ಆಗ ನ್ಯಾಯಾಲಯವು, ಪ್ರಶ್ನೆಗಳನ್ನು ರಿಪೀಟ್ ಮಾಡದಂತೆ ತನಿಖಾ ಸಂಸ್ಥೆಗೆಸೂಚಿಸಿತ್ತು.
ಇದನ್ನೂ ಓದಿ: Manish Sisodia: ಮನೀಶ್ ಸಿಸೋಡಿಯಾಗೆ ಮತ್ತೊಂದು ಸಂಕಷ್ಟ, ಹವಾಲ ಕೇಸ್‌ನಲ್ಲಿ ಬಂಧಿಸಿದ ಇ.ಡಿ
ಇದೇ ವೇಳೆ, ತಮ್ಮ ಮನೆಯ ವೆಚ್ಚಗಳಿಗಾಗಿ ಚೆಕ್‌ಗೆ ಸಹಿ ಮಾಡಲು ಮನೀಶ್ ಸಿಸೋಡಿಯಾ ಅವರಿಗೆ ಅನುಮತಿ ನೀಡಿದೆ. ಫೆಬ್ರವರಿ 26ರಿಂದ ಸಿಸೋಡಿಯಾ ಜೈಲಿನಲ್ಲಿದ್ದಾರೆ. ಈ ಮೊದಲು, ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಬಂಧಿಸಿತ್ತು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ಕೇಸಿನಲ್ಲಿ ಇ.ಡಿ ಕೂಡಾ ಅವರನ್ನು ಬಂಧಿಸಿತ್ತು.