Site icon Vistara News

Delhi Mayor Polls: ದಿಲ್ಲಿ ಮಹಾನಗರ ಪಾಲಿಕೆ ಸಭೆ ಮುಂದೂಡಿಕೆ, ಮತ್ತೆ ಆಯ್ಕೆಯಾಗಲಿಲ್ಲ ಮೇಯರ್! ಆಪ್ ಕೋರ್ಟ್ ಮೊರೆ?

Delhi Mayor Election

ನವದೆಹಲಿ: ದಿಲ್ಲಿ ಮಹಾನಗರ ಪಾಲಿಕೆ(Delhi Mayor Polls) ಮೇಯರ್ ಆಯ್ಕೆ ಕಗ್ಗಂಟಾಗಿ ಪರಿಣಮಿಸಿದೆ. ಚುನಾವಣೆ ಮುಗಿದ ಬಳಿಕ ಈ ವರೆಗೆ ಮೂರು ಬಾರಿ ಮೇಯರ್ ಆಯ್ಕೆ ಪ್ರಯತ್ನಗಳು ವಿಫಲವಾಗಿವೆ. ಮೇಯರ್ ಆಯ್ಕೆಗೆ ಸೋಮವಾರ ಪಾಲಿಕೆ ಸಭೆ ಸೇರಿತು. ಆದರೆ, ಈ ಹಿಂದಿನಂತೆಯೇ, ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ಅವರು, ನಾಮಕರಣ ಸದಸ್ಯರಿಗೆ ಮತ ಚಲಾವಣೆ ನೀಡಲು ಅವಕಾಶ ನೀಡಿದ್ದು, ಆಪ್ (AAP) ಆಕ್ರೋಶಕ್ಕೆ ಕಾರಣವಾಯಿತು. ಇದರಿಂದ ರೊಚ್ಚಿಗೆದ್ದ ಆಪ್ ಸದಸ್ಯರು ಪಾಲಿಕೆ ಸಭಾಂಗಣದಲ್ಲಿ ಗಲಾಟೆ ನಡೆಸಿದರು. ಅಂತಿಮವಾಗಿ ಸಭೆಯನ್ನು ಮುಂದಕ್ಕೆ ಹಾಕಲಾಯಿತು. ಏತನ್ಮಧ್ಯೆ, ಮೇಯರ್ ಚುನಾವಣೆಯನ್ನು ನ್ಯಾಯಾಲಯದ ಕಣ್ಗಾವಲಿನಲ್ಲಿ ನಡೆಸಲು ಕೋರಿ ಆಪ್ ಕೋರ್ಟ್ ಮೊರೆ ಹೋಗಲಿದೆ ಎಂದು ಆಪ್ ಲೀಡರ್ ಆತಿಶಿ ಹೇಳಿದ್ದಾರೆ.

ಈ ಹಿಂದೆಯೂ ಇದೇ ಕಾರಣಕ್ಕೆ ಎರಡು ಬಾರಿ ಮೇಯರ್ ಆಯ್ಕೆ ವಿಫಲವಾಯಿತು. ನಾಮಕರಣ ಸದಸ್ಯರಿಗೆ ಮತ ಅಧಿಕಾರ ನೀಡಿರುವುದನ್ನು ಆಪ್ ಪ್ರಶ್ನಿಸುತ್ತಲೇ ಬಂದಿದೆ. ಇದೇ ಕಾರಣಕ್ಕೆ ಪಾಲಿಕೆಯ ಪ್ರತಿಬಾರಿಯ ಸಭೆಯೂ ಗಲಾಟೆಗೆ ಕಾರಣವಾಗುತ್ತಿದೆ.

ಮೇಯರ್ ಆಯ್ಕೆ ಸಭೆ ಶುರುವಾಗುತ್ತಿದ್ದಂತೆ ಚುನಾವಣಾಧಿಕಾರಿಯಾಗಿರುವ ಸತ್ಯ ಶರ್ಮಾ ಅವರು, ನಾಮನಿರ್ದೇಶನಗೊಂಡ ಸದಸ್ಯರಿಗ ಮತ ಚಲಾಯಿಸಲು ಅವಕಾಶ ಕಲ್ಪಿಸಲಾಗುವುದು ಎಂದು ಘೋಷಿಸಿದರು. ಇದು ಆಪ್ ಸದಸ್ಯರ ಪ್ರತಿಭಟನೆಗೆ ಕಾರಣವಾಯಿತು. ಇದೇ ಕಾರಣಕ್ಕಾಗಿ ಈ ಹಿಂದೆ ಎರಡು ಬಾರಿ ಮೇಯರ್ ಆಯ್ಕೆ ಸಾಧ್ಯವಾಗಿರಲಿಲ್ಲ.

ಇದನ್ನೂ ಓದಿ: Delhi Mayor Polls | ದಿಲ್ಲಿ ಮೇಯರ್ ಎಲೆಕ್ಷನ್, ಆಪ್-ಬಿಜೆಪಿ ಗಲಾಟೆ, ಪಾಲಿಕೆ ಸಭೆಯಲ್ಲಿ ಕೋಲಾಹಲ

ಪಾಲಿಕೆಯಲ್ಲಿ ಆಪ್ ಪಕ್ಷದ ನಾಯಕರಾಗಿರುವ ಮುಕೇಶ್ ಗೋಯೆಲ್ ಅವರು ನಾಮನಿರ್ದೇಶನಗೊಂಡ ಸದಸ್ಯರು ಮತ ಹಾಕುವಂತಿಲ್ಲ. ಆದರೆ, ಇದಕ್ಕೆ ಚುನಾವಣಾ ಅಧಿಕಾರಿ ಒಪ್ಪದಿದ್ದಾಗ, ಮತ್ತೆ ಗಲಾಟೆ ಜೋರಾಯಿತು ಅಂತಿಮವಾಗಿ, ಮೇಯರ್, ಡೆಪ್ಯುಟಿ ಮೇಯರ್ ಹಾಗೂ ಸ್ಥಾಯಿ ಸಮಿತಿ ಸದಸ್ಯರ ನೇಮಕವನ್ನು ಮುಂದಕ್ಕೆ ಹಾಕಲಾಯಿತು.

Exit mobile version