Site icon Vistara News

ಡಬಲ್​ ಆಯ್ತು ದೆಹಲಿ ಶಾಸಕರ ಸಂಬಳ!; 12 ವರ್ಷಗಳ ನಂತರ ಭರ್ಜರಿ ಏರಿಕೆ, ಸಿಎಂ ವೇತನವೆಷ್ಟು ಇನ್ಮುಂದೆ?

Delhi MLAs Salary

#image_title

ನವದೆಹಲಿ: ದೆಹಲಿ ಶಾಸಕರ ಸಂಬಳ (Delhi MLAs Salary) ಮತ್ತು ಭತ್ಯೆಯನ್ನು ಶೇ.66.67ರಷ್ಟು ಹೆಚ್ಚಿಸಬೇಕು ಎಂದು ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್​ ಅವರು ಸಲ್ಲಿಸಿದ್ದ ಪ್ರಸ್ತಾವನೆಗೆ ರಾಷ್ಟ್ರಪತಿಯವರ ಅಂಕಿತ ಸಿಕ್ಕಿದೆ. ಈ ಮೂಲಕ ದೆಹಲಿ ಶಾಸಕರ ಸಂಬಳ ದ್ವಿಗುಣಗೊಂಡಿದೆ. ಇಷ್ಟು ದಿನ ತಿಂಗಳಿಗೆ 54,000 ರೂಪಾಯಿ ವೇತನ ತೆಗೆದುಕೊಳ್ಳುತ್ತಿದ್ದ ಶಾಸಕರು ಇನ್ನು ಮುಂದೆ 90 ಸಾವಿರ ರೂಪಾಯಿ ಪಡೆಯಲಿದ್ದಾರೆ. ಶಾಸಕರ ಬೇಸಿಕ್​ ಸಂಬಳ ಇಷ್ಟು ದಿನ 12 ಸಾವಿರ ಇದ್ದಿದ್ದು, 30 ಸಾವಿರಕ್ಕೆ ಹೆಚ್ಚಳವಾಗಿದೆ. ಹಾಗೇ, ದಿನಭತ್ಯೆಯನ್ನು 1,000 ರೂ.ನಿಂದ 1,500 ರೂ.ಗೆ ಹೆಚ್ಚಳ ಮಾಡಲಾಗಿದೆ. ದೆಹಲಿಯಲ್ಲಿ ಆಮ್​ ಆದ್ಮಿ ಪಕ್ಷದ ಶಾಸಕರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಸಹಜವಾಗಿಯೇ ಅವರಿಗೆ ಅನುಕೂಲವಾಗಲಿದೆ. ಹಾಗೇ, ದೆಹಲಿಯಲ್ಲಿ ಇನ್ಮುಂದೆ ಮುಖ್ಯಮಂತ್ರಿ ವೇತನ ತಿಂಗಳಿಗೆ 1.70 ಲಕ್ಷ ರೂಪಾಯಿ. ಇಷ್ಟು ದಿನ ಅದು ತಿಂಗಳಿಗೆ 72 ಸಾವಿರ ರೂಪಾಯಿ ಇತ್ತು.

ದೆಹಲಿಯಲ್ಲಿ 12 ವರ್ಷಗಳ ನಂತರ ಶಾಸಕರ ವೇತನ ಹೆಚ್ಚಳವಾಗುತ್ತಿದೆ. 2023ರ ಫೆಬ್ರವರಿ 14ರಿಂದ ಅನ್ವಯ ಆಗುವಂತೆ ಈ ಯೋಜನೆ ಜಾರಿಯಾಗಲಿದೆ. ಶಾಸಕರ ವೇತನವನ್ನು ಶೇ. 66.67ರಷ್ಟು ಏರಿಸುವ ಪ್ರಸ್ತಾವನೆಯನ್ನು ದೆಹಲಿ ಶಾಸಕಾಂಗ ಸಭೆಯಲ್ಲಿ ಅನುಮೋದಿಸಿ, ಬಳಿಕ ಕೇಂದ್ರ ಗೃಹ ಇಲಾಖೆಗೆ ಕಳಿಸಲಾಗಿತ್ತು. ದೆಹಲಿ ಒಂದು ರಾಜ್ಯವಲ್ಲ. ಅದೊಂದು ಕೇಂದ್ರಾಡಳಿತ ಪ್ರದೇಶವಾಗಿದ್ದರಿಂದ, ಈ ಶಾಸಕರ ಸಂಬಳದ ವಿಚಾರವನ್ನೆಲ್ಲ ರಾಷ್ಟ್ರಪತಿಯವರೇ ನಿರ್ಧರಿಸುತ್ತಾರೆ. ಬರೀ ಇಷ್ಟೇ ಅಲ್ಲ, ಇತ್ತೀಚೆಗೆ ಕೆಲವು ಹಗರಣಗಳಿಗೆ ಒಳಪಟ್ಟು ಸಚಿವ ಹುದ್ದೆ ಕಳೆದುಕೊಂಡ ಮನೀಶ್​ ಸಿಸೋಡಿಯಾ, ಸತ್ಯೇಂದ್ರ ಜೈನ್​ ಅವರ ರಾಜೀನಾಮೆಯನ್ನೂ ರಾಷ್ಟ್ರಪತಿಯವರೇ ಸ್ವೀಕರಿಸಿದ್ದಾರೆ. ಸದ್ಯ ಇವರಿಬ್ಬರೂ ಅರೆಸ್ಟ್ ಆಗಿದ್ದಾರೆ.

ಇದನ್ನೂ ಓದಿ: 2 AAP MLAs | ಪೊಲೀಸರ ಮೇಲೆ ದಾಳಿ, ಆಪ್‌ನ ಇಬ್ಬರು ಶಾಸಕರು ದೋಷಿ ಎಂದು ಕೋರ್ಟ್‌ ತೀರ್ಪು

Exit mobile version