Site icon Vistara News

ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದವನನ್ನು ಹುಡುಕಿ ಬೆಂಗಳೂರಿಗೆ ಬಂದ ದೆಹಲಿ ಪೊಲೀಸ್​; ಇನ್ನೊಂದು ತಂಡ ಮುಂಬಯಿಗೆ

Shankar Mishra 1

ನವ ದೆಹಲಿ: ನ್ಯೂಯಾರ್ಕ್​​ನಿಂದ ದೆಹಲಿಗೆ ಬರುತ್ತಿದ್ದ ಏರ್​ ಇಂಡಿಯಾ ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದ ಶಂಕರ್ ಮಿಶ್ರಾ ವಿರುದ್ಧ ಕೇಸ್ ದಾಖಲಾಗಿದೆ. ಈತ ಮುಂಬಯಿ ಮೂಲದವನಾಗಿದ್ದು, ನವೆಂಬರ್​ 26ರಂದು ವಿಮಾನದಲ್ಲಿ, ಕುಡಿದ ಮತ್ತಿನಲ್ಲಿ ತನ್ನ ಸಹ ಪ್ರಯಾಣಿಕಳ ಮೇಲೆ ಮೂತ್ರ ವಿಸರ್ಜಿಸಿದ್ದ. ಅಷ್ಟೇ ಅಲ್ಲ, ಕೆಲ ಕಾಲ ಖಾಸಗಿ ಅಂಗವನ್ನೂ ಪ್ರದರ್ಶಿಸಿದ್ದ.

ಆ ಮಹಿಳೆ ತನಗಾದ ಕೆಟ್ಟ ಅನುಭವವನ್ನು ಏರ್​ ಇಂಡಿಯಾ ಅಧ್ಯಕ್ಷ ಎನ್.ಚಂದ್ರಶೇಖರನ್​ ಅವರಿಗೆ ಪತ್ರ ಬರೆದು ತಿಳಿಸಿದಾಗಲೇ, ಈ ವಿಷಯ ಬೆಳಕಿಗೆ ಬಂದಿತ್ತು. ಈಗ ಶಂಕರ್​ ಮಿಶ್ರಾನನ್ನು ಆತ ಕೆಲಸ ಮಾಡುತ್ತಿದ್ದ ಅಮೆರಿಕ ಮೂಲದ ಕಂಪನಿ ವೆಲ್ಸ್​ ಫಾರ್ಗೋ ವಜಾಗೊಳಿಸಿದೆ. ಆತನ ಫೋಟೋ ಕೂಡ ವೈರಲ್ ಆಗಿದೆ. ಈ ಮಧ್ಯೆ ಅವನು ನಾಪತ್ತೆಯಾಗಿದ್ದಾನೆ.

ಶಂಕರ್​ ಮಿಶ್ರಾ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ಸಿಕ್ಕ ಹಿನ್ನೆಲೆಯಲ್ಲಿ ದೆಹಲಿ ಪೊಲೀಸರು ಎರಡು ತಂಡಗಳನ್ನು ರಚಿಸಿದ್ದಾರೆ. ಅದರಲ್ಲಿ ಒಂದು ತಂಡ ಶುಕ್ರವಾರ ಬೆಂಗಳೂರಿಗೆ ಆಗಮಿಸಿದೆ. ಬೆಂಗಳೂರಿನಲ್ಲಿ ಶಂಕರ್​ ಮಿಶ್ರಾ ಸಂಬಂಧಿಕರೂ ಇದ್ದಾರೆ. ಅವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಹಾಗೇ, ಇನ್ನೊಂದು ತಂಡ ಮುಂಬಯಿಗೆ ತೆರಳಿ, ಶಂಕರ್ ಮಿಶ್ರಾನ ತಂದೆ ಶ್ಯಾಮ್​ ಮಿಶ್ರಾನನ್ನು ಸಂಪರ್ಕಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಇನ್ನು ಶಂಕರ್ ಮಿಶ್ರಾ ಮೊಬೈಲ್​​ನಲ್ಲೆ ಸ್ವಿಚ್​ ಆಫ್​ ಮಾಡಿಕೊಂಡಿದ್ದಾನೆ. ಆತ ದೇಶ ಬಿಟ್ಟು ಹೋಗದಂತೆ ಲುಕ್​ ಔಟ್​ ನೋಟಿಸ್ ಜಾರಿ ಮಾಡಲಾಗಿದೆ.

ಇದನ್ನೂ ಓದಿ: Urination Case | ವಿಮಾನದಲ್ಲಿ ಮಹಿಳೆ ಮೇಲೆ ಮೂತ್ರ ವಿಸರ್ಜನೆ ಮಾಡಿದವನನ್ನು ವಜಾಗೊಳಿಸಿದ ಅಮೆರಿಕ ಕಂಪನಿ

Exit mobile version