ನವ ದೆಹಲಿ: ದೆಹಲಿಯ ಮಥುರಾ ರಸ್ತೆಯಲ್ಲಿರುವ ಪಬ್ಲಿಕ್ ಶಾಲೆಯನ್ನು ಬಾಂಬ್ನಿಂದ ಸ್ಫೋಟಿಸುವುದಾಗಿ (Bomb Threat) ಇಂದು ಮುಂಜಾನೆ ಹೊತ್ತಿಗೆ ಬೆದರಿಕೆ ಸಂದೇಶ ಬಂದಿದೆ. ಇಮೇಲ್ ಮೂಲಕ ಬಾಂಬ್ ದಾಳಿ ಬೆದರಿಕೆಯೊಡ್ಡಲಾಗಿದ್ದು, ಸ್ಥಳಕ್ಕೆ ಪೊಲೀಸರು, ಅಗ್ನಿಶಾಮಕ ದಳ, ಬಾಂಬ್ ನಿಷ್ಕ್ರಿಯ ದಳದ ಸಿಬ್ಬಂದಿ ಆಗಮಿಸಿ, ಪರಿಶೀಲನೆ ನಡೆಸುತ್ತಿದ್ದಾರೆ. ಶಾಲೆಗೆ ಬೆದರಿಕೆ ಬಂದಿದ್ದರಿಂದ ಸಹಜವಾಗಿಯೇ ಪಾಲಕರಿಗೂ ಆತಂಕ ಉಂಟಾಗಿ, ಅವರೂ ಕೆಲವರು ಆಗಮಿಸಿ ಶಾಲೆ ಬಳಿ ಜಮಾಯಿಸಿದ್ದಾರೆ.
ಏಪ್ರಿಲ್ 12ರಂದು ಸಾದಿಕ್ ನಗರದಲ್ಲಿರುವ ಇಂಡಿಯನ್ ಸ್ಕೂಲ್ಗೆ ಇದೇ ರೀತಿ ಕರೆ ಬಂದಿತ್ತು. ಬಾಂಬ್ ಇಟ್ಟಿದ್ದೇವೆ, ಶಾಲೆ ಸ್ಫೋಟವಾಗುತ್ತದೆ ಎಂಬ ಸಂದೇಶ ಅದಾಗಿತ್ತು. ಪೊಲೀಸರು, ಬಾಂಬ್ ನಿಷ್ಕ್ರಿಯ ದಳದವರೆಲ್ಲ ತನಿಖೆ ನಡೆಸಿದ ಬಳಿಕ ಅದೊಂದು ಹುಸಿ ಕರೆ ಎಂಬುದು ಸ್ಪಷ್ಟವಾಗಿತ್ತು. ಇಡೀ ಶಾಲೆಯ ಎಲ್ಲೆಡೆ ಹುಡುಕಾಟ ನಡೆಸಿದರೂ, ಸ್ಫೋಟಕವಾಗಲೀ, ಯಾವುದೇ ಅನುಮಾನಾಸ್ಪದ ವಸ್ತುವಾಗಲೀ ಸಿಕ್ಕಿರಲಿಲ್ಲ.