Site icon Vistara News

ಎಂಥ ಬೇಜವಾಬ್ದಾರಿ, ಘನತೆಗೆ ತಕ್ಕುದಾದ ವರ್ತನೆಯಲ್ಲ ನಿಮ್ಮದು; ರಾಹುಲ್ ಗಾಂಧಿಗೆ ನೋಟಿಸ್​ ಕೊಟ್ಟ ದೆಹಲಿ ಯೂನಿವರ್ಸಿಟಿ

Delhi University issues notice to Rahul Gandhi over His Meet to men hostel

#image_title

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi)ಯವರು ಜನರ ಜೊತೆ ಅವರಲ್ಲೇ ಒಬ್ಬನಾಗಿ ಬೆರೆಯುತ್ತಾರೆ. ಅದರಲ್ಲಿ ಎರಡು ಮಾತಿಲ್ಲ. ಅವರು ಸಾರ್ವಜನಿಕ ಸಭೆ ಸಮಾರಂಭ ನಡೆಸುವಾಗಲಾಗಿರಬಹುದು, ಇತ್ತೀಚೆಗೆ ನಡೆಸಿದ ಭಾರತ್ ಜೋಡೋ ಯಾತ್ರೆಯಲ್ಲೇ ಆಗಿರಬಹುದು, ಅವರು ಸಾಮಾನ್ಯ ಜನರನ್ನು ಎಷ್ಟು ಹತ್ತಿರಕ್ಕೆ ಬಿಟ್ಟುಕೊಳ್ಳುತ್ತಾರೆ ಎಂಬುದನ್ನು ನೋಡಿದ್ದೇವೆ. ಅಪ್ಪಿಕೊಳ್ಳುತ್ತಾರೆ, ಜತೆಯಲ್ಲೇ ಕುಳಿತು ಊಟ ಮಾಡುತ್ತಾರೆ. ಮೇ 8ರಂದು ಕರ್ನಾಟಕ ವಿಧಾನಸಭೆ ಚುನಾವಣೆ ಪ್ರಚಾರ (Karnataka Assembly Election 2023)ಕ್ಕಾಗಿ ಕರ್ನಾಟಕಕ್ಕೆ ಬಂದಿದ್ದಾಗಲಂತೂ ಅವರು ಒಬ್ಬ ಡೆಲಿವರಿ ಬಾಯ್​​ನ ಬೈಕ್​​ ಹತ್ತಿ ಸುತ್ತಾಡಿದ್ದರು. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್​ನಲ್ಲಿ ಸಾಮಾನ್ಯ ಪ್ರಯಾಣಿಕನಂತೆ ಪ್ರಯಾಣ ಮಾಡಿದ್ದರು.

ಆದರೆ ಅದಕ್ಕೂ ಮೊದಲು ಮೇ 5ರಂದು ಅವರು ದೆಹಲಿ ಯೂನಿವರ್ಸಿಟಿಗೆ ಭೇಟಿ ಕೊಟ್ಟಿದ್ದರು. ಅಲ್ಲಿನ ಎಬಿವಿಪಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ್ದರು. ಯೂನಿವರ್ಸಿಟಿಯ ಪುರುಷರ ಹಾಸ್ಟೆಲ್​ಗೆ ಭೇಟಿ ಕೊಟ್ಟು, ಅವರೊಂದಿಗೆ ಊಟ ಸವಿವಿದ್ದರು. ರಾಹುಲ್ ಗಾಂಧಿ ಪುರುಷರ ಹಾಸ್ಟೆಲ್​ಗೇ ಹೋಗಿದ್ದರೂ, ಮೂರ್ನಾಲ್ಕು ಜನ ಹೆಣ್ಣುಮಕ್ಕಳೂ ಆ ಸಂವಾದ/ಊಟದಲ್ಲಿ ಪಾಲ್ಗೊಂಡಿದ್ದರು. ಆದರೆ ರಾಹುಲ್ ಗಾಂಧಿ ಇದ್ಯಾವುದನ್ನೂ ಪೂರ್ವಸೂಚನೆಯಿಲ್ಲದೆ ಮಾಡಿದ್ದರು. ಅಂದರೆ ಅವರು ಬರುತ್ತಿರುವ ಬಗ್ಗೆ ಯೂನಿವರ್ಸಿಟಿಗೆ ಮಾಹಿತಿಯೇ ಇರಲಿಲ್ಲ. ಏಕಾಏಕಿ ಭೇಟಿ ಕೊಟ್ಟು, ತಮ್ಮ ಮನಸಿಗೆ ಬಂದಂತೆ ಮಾಡಿದ್ದರು.

ರಾಹುಲ್ ಗಾಂಧಿಯವರ ಈ ವರ್ತನೆ ಬಗ್ಗೆ ದೆಹಲಿ ಯೂನಿವರ್ಸಿಟಿಯ ಪುರುಷರ ಹಾಸ್ಟೆಲ್​​ನ ಮೇಲ್ವಿಚಾರಕರಾದ ಕೆ.ಪಿ.ಸಿಂಗ್​ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲ, ರಾಹುಲ್ ಗಾಂಧಿಗೆ ನೋಟಿಸ್​ ಕೊಟ್ಟಿದ್ದಾರೆ. ‘ಝಡ್​ ಪ್ಲಸ್​ ಭದ್ರತೆ ಹೊಂದಿರುವ ರಾಷ್ಟ್ರೀಯ ನಾಯಕರಾದ ನೀವು ಹೀಗೆ ಹೇಳದೆ, ಕೇಳದೆ ಯೂನಿವರ್ಸಿಟಿಯ ಹಾಸ್ಟೆಲ್​​ಗೆ ಬರುವುದು ನಿಮ್ಮ ಘನತೆಗೆ ತಕ್ಕದಾದ ನಡವಳಿಕೆಯಲ್ಲ’ ಎಂದು ನೋಟಿಸ್​ನಲ್ಲಿ ಉಲ್ಲೇಖಿಸಲಾಗಿದೆ. ‘ರಾಹುಲ್ ಗಾಂಧಿಯವರೇ ನಿಮ್ಮದು ಎಲ್ಲೆ ಮೀರಿದ ಮತ್ತು ಬೇಜವಾಬ್ದಾರಿಯುತ ನಡವಳಿಕೆ’ ಎಂದೂ ಹೇಳಿದ್ದಾರೆ. ‘ದೆಹಲಿ ಯೂನಿವರ್ಸಿಟಿಯ ಹಾಸ್ಟೆಲ್​ ನಿಯಮವನ್ನು ನೀವು ಉಲ್ಲಂಘಿಸಿದ್ದೀರಿ. ಭವಿಷ್ಯದಲ್ಲಿ ಇಂಥ ಘಟನೆ ಮರುಕಳಿಸದಂತೆ ಎಚ್ಚರ ವಹಿಸಿ’ ಎಂದು ನೋಟಿಸ್​ನಲ್ಲಿ ಉಲ್ಲೇಖ ಮಾಡಿದ್ದಾರೆ.

ಇದನ್ನೂ ಓದಿ: ರಾಹುಲ್ ಗಾಂಧಿಗೆ ಶಿಕ್ಷೆ ವಿಧಿಸಿದ ಜಿಲ್ಲಾ ಮ್ಯಾಜಿಸ್ಟ್ರೇಟ್​​ಗೆ ಬಡ್ತಿ ನೀಡಿದ್ದಕ್ಕೆ ವಿರೋಧ; ವಿಚಾರಣೆಗೆ ಒಪ್ಪಿದ ಸುಪ್ರೀಂಕೋರ್ಟ್​​

ರಾಹುಲ್ ಗಾಂಧಿಯವರು ದೆಹಲಿ ಯೂನಿವರ್ಸಿಟಿಗೆ ಭೇಟಿ ನೀಡಿದ ಕ್ಷಣ

Exit mobile version