Site icon Vistara News

Independence Day 2023 : ಭಾರತದ ಹೆಮ್ಮೆಯಿದು ತ್ರಿವರ್ಣ; ನಮ್ಮ ಧ್ವಜದ ಕುರಿತ ಈ ಸಂಗತಿಗಳು ತಿಳಿದಿರಲಿ…

flag details

ಬೆಂಗಳೂರು: ಆಗಸ್ಟ್‌ 15 ಹತ್ತಿರ ಬಂದೇ ಬಿಟ್ಟಿತು. ಬ್ರಿಟಿಷರ ವಸಾಹತಿನಿಂದ ನಮ್ಮ ದೇಶ ಸ್ವತಂತ್ರಗೊಂಡು 77 ವಸಂತಗಳು (Independence Day 2023) ತುಂಬುತ್ತಿದ್ದು, ದೇಶವಿಡೀ ಈ ಸಂಭ್ರಮದಲ್ಲಿದೆ. ಹಾಗೆಯೇ ಎಲ್ಲೆಡೆ ರಾಷ್ಟ್ರ ಧ್ವಜವನ್ನು ಮಾರಾಟ ಮಾಡಲಾಗುತ್ತಿದ್ದು, ಅವೆಲ್ಲವೂ ಆಗಸ್ಟ್‌ 15ರಂದು ಮುಗಿಲೆತ್ತರಕ್ಕೆ ಹಾರಿ, ಸ್ವತಂತ್ರ್ಯದ ಮಹತ್ವವನ್ನು ಸಾರಲಿದೆ. ಸ್ವಾತಂತ್ರ್ಯದ ಸಂಭ್ರಮದಲ್ಲಿ ಬಾವುಟ ಹಾರಿಸುವ ನಾವು ಹೆಮ್ಮೆಯ ತ್ರಿವರ್ಣ ಧ್ವಜದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಂಡಿದ್ದರೆ ಉತ್ತಮ. ಅದಕ್ಕಾಗಿಯೇ ಈ ಲೇಖನ ನಿಮಗಾಗಿ.

ತ್ರಿವರ್ಣ ಧ್ವಜದ ಹಿನ್ನೆಲೆ

ಪ್ರಪಂಚದಲ್ಲಿನ ಪ್ರತಿಯೊಂದು ರಾಷ್ಟ್ರವೂ ತಮ್ಮದೇ ಆದ ರಾಷ್ಟ್ರ ಧ್ವಜವನ್ನು ಹೊಂದಿವೆ. ಈ ರಾಷ್ಟ್ರಧ್ವಜವೆನ್ನುವುದು ಸ್ವಾತಂತ್ರ್ಯದ ಸಂಕೇತ. 1947ರ ಆಗಸ್ಟ್‌ 15ರಂದು ಭಾರತವು ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವ ಕೆಲವು ದಿನಗಳ ಮೊದಲು ಅಂದರೆ 1947ರ ಜುಲೈ 22ರಂದು ನಡೆದ ಸಂವಿಧಾನ ಸಭೆಯಲ್ಲಿ ಭಾರತದ ರಾಷ್ಟ್ರೀಯ ಧ್ವಜವು ಅದರ ಪ್ರಸ್ತುತ ರೂಪದಲ್ಲಿ ಅಂಗೀಕಾರ ಮಾಡಲಾಯಿತು. ಸ್ವಾತಂತ್ರ್ಯ ಸಿಕ್ಕ ದಿನದಿಂದ 1950ರ ಜನವರಿ 26ರಂದು ಸಂವಿಧಾನ ರಚನೆ ಆಗುವವರೆಗೆ ತ್ರಿವರ್ಣ ಧ್ವಜವು ಭಾರತದ ಡೊಮಿನಿಯನ್‌ ಧ್ವಜವಾಗಿ ಕಾರ್ಯನಿರ್ವಹಿಸಿತು. ಅದಾದ ನಂತರ ಧ್ವಜವು ಗಣರಾಜ್ಯದ ಸಂಕೇತವಾಗಿ ಗುರುತಿಸಿಕೊಂಡಿತು.

ಇದನ್ನೂ ಓದಿ: Independence Day 2023: ಪ್ರತಿ ಮನೆಯಲ್ಲೂ ತಿರಂಗಾ ಹಾರಿಸಲು ಮೋದಿ ಕರೆ; ನೀವೂ ಫೋಟೊ ಕಳುಹಿಸಿ

ಧ್ವಜ ಹೇಗಿರಬೇಕು?

ಭಾರತೀಯ ಧ್ವಜಕ್ಕೆ ಅದರದ್ದೇ ಆದ ಮಹತ್ವವಿದೆ. ಧ್ವಜವು ಮೇಲ್ಭಾಗದಲ್ಲಿ ಕೇಸರಿ ಬಣ್ಣ, ಮಧ್ಯದಲ್ಲಿ ಬಿಳಿ ಬಣ್ಣ ಮತ್ತು ಕೆಳಭಾಗದಲ್ಲಿ ಕಡು ಹಸಿರು ಬಣ್ಣದಲ್ಲಿರಬೇಕು. ಈ ಮೂರೂ ಬಣ್ಣಗಳು ಸಮಾನ ಪ್ರಮಾಣದಲ್ಲಿರಬೇಕು. ಬಿಳಿ ಬಣ್ಣದ ಮಧ್ಯದಲ್ಲಿ ಕಡು ನೀಲಿ ಬಣ್ಣದಲ್ಲಿ ಅಶೋಕ ಚಕ್ರವಿರಬೇಕು. ಚಕ್ರದಲ್ಲಿ ಸರಿಯಾಗಿ 24 ಕಡ್ಡಿಗಳು ಇರಬೇಕು. ಈ ಎಲ್ಲ ಗೆರೆಗಳ ನಡುವೆಯೂ ಸಮಾನ ಅಂತರವಿರಬೇಕು. ಧ್ವಜವು 2:3 ಅನುಪಾತದ ಅಗಲ, ಉದ್ದದಲ್ಲೇ ಹೊಂದಿರಬೇಕು.

ಬಣ್ಣಗಳ ಮಹತ್ವವೇನು?


ನಮ್ಮ ಧ್ವಜದಲ್ಲಿ ಕೇಸರಿ ಬಣ್ಣವು ದೇಶದ ಶಕ್ತಿ ಮತ್ತು ಧೈರ್ಯವನ್ನು ಸೂಚಿಸುತ್ತದೆ. ಬಿಳಿ ಬಣ್ಣವು ಶಾಂತಿ ಮತ್ತು ಸತ್ಯವನ್ನು ಸೂಚಿಸುತ್ತದೆ. ಹಾಗೆಯೇ ಹಸಿರು ಬಣ್ಣವು ಭೂಮಿಯ ಫಲವತ್ತತೆ, ಬೆಳವಣಿಗೆ ಮತ್ತು ಮಂಗಳಕರತೆಯನ್ನು ಸೂಚಿಸುತ್ತದೆ. ಮಧ್ಯದಲ್ಲಿರುವ ಚಕ್ರವು 3ನೇ ಶತಮಾನದ ಮೌರ್ಯ ಚಕ್ರವರ್ತಿ ಅಶೋಕ ಮಾಡಿದ ಸಾರನಾಥ ಸಿಂಹದಲ್ಲಿನ ಕಾನೂನಿನ ಚಕ್ರವನ್ನು ಸಂಕೇತಿಸುತ್ತದೆ.

ಇದನ್ನೂ ಓದಿ : Independence Day 2023 : ಆರೋಗ್ಯ – ಜೀವನೋಪಾಯ ನಡುವಿನ ಸಮತೋಲನವೇ ಸ್ವತಂತ್ರ ಬದುಕಿನ ಸೂತ್ರ

ಧ್ವಜ ಸಂಹಿತೆ ಹೇಗಿರಬೇಕು?

ಆಗಸ್ಟ್‌ 15 ಎಂದಾಕ್ಷಣ ಮನಸೋಇಚ್ಛೆ ಧ್ವಜ ಹಾರಿಸುವಂತಿಲ್ಲ. ಧ್ವಜ ಹಾರಿಸುವುದಕ್ಕೆಂದೇ ಧ್ವಜ ಸಂಹಿತೆಯನ್ನು ರಚಿಸಲಾಗಿದೆ. ಅದರ ಪ್ರಕಾರವೇ ಧ್ವಜವನ್ನು ಹಾರಿಸಬೇಕು. ಧ್ವಜ ಸಂಹಿತೆಯಲ್ಲಿರುವ ನಿಯಮಗಳು ಈ ಕೆಳಗಿನಂತಿವೆ.

ಧಾರವಾಡದಲ್ಲಿದೆ ಧ್ವಜ ತಯಾರಿ ಕೇಂದ್ರ


ವಿಶೇಷವೆಂದರೆ ದೇಶದಲ್ಲಿ ಹಾರಿಸಲಾಗುವ ಖಾದಿ ತ್ರಿವರ್ಣ ಧ್ವಜಗಳನ್ನು ತಯಾರಿಸುವ ಹಕ್ಕು ನಮ್ಮ ಕರ್ನಾಟಕದ ಧಾರವಾಡ ಜಿಲ್ಲೆಯ ಗರಗ ಗ್ರಾಮಕ್ಕಿದೆ. ಇದೇ ರೀತಿಯಲ್ಲಿ ಉತ್ತರ ಕರ್ನಾಟಕದಾದ್ಯಂತ ಒಟ್ಟು 52 ಘಟಕಗಳನ್ನು ಮಾಡಿಕೊಂಡು ರಾಷ್ಟ್ರಧ್ವಜವನ್ನು ನಿರ್ಮಾಣ ಮಾಡಲಾಗುತ್ತಿದೆ. ಭಾರತದ ಸಂವಿಧಾನದಲ್ಲಿ ಉಲ್ಲೇಖದಂತೆ ಮತ್ತು ಭಾರತೀಯ ಸ್ಟಾಂಡರ್ಡ್ಸ್ ಬ್ಯೂರೋದ ನಿಯಮಗಳಿಗೆ ತಕ್ಕಂತೆ ರಾಷ್ಟ್ರಧ್ವಜವನ್ನು ಉತ್ಪಾದಿಸಬೇಕು. ಬ್ಯೂರೋದ ಮಾನದಂಡಕ್ಕೆ ತಕ್ಕಂತೆ ಇಲ್ಲದಿದ್ದರೆ ಉತ್ಪನ್ನವೇ ತಿರಸ್ಕೃತವಾಗುತ್ತದೆ.

Exit mobile version