ಭೋಪಾಲ್: ಇತ್ತೀಚೆಗೆ ಮಧ್ಯಪ್ರದೇಶದ ಛತ್ತರ್‌ಪುರದ ಭಾಗೇಶ್ವರ ಧಾಮ ದೇಗುಲದ ಮುಖ್ಯಸ್ಥ ಧೀರೇಂದ್ರ ಕೃಷ್ಣ ಶಾಸ್ತ್ರಿ (Dhirendra Shastri) ಅಲಿಯಾಸ್ ಬಾಗೇಶ್ವರ್ ಬಾಬಾ ಅವರು ಸುದ್ದಿಯಲ್ಲಿದ್ದಾರೆ. ರಾಜ್ಯಾದ್ಯಂತ ಅಪಾರ ಭಕ್ತವೃಂದವನ್ನು ಹೊಂದಿರುವ ಇವರು ಪವಾಡ ಪುರುಷ ಎನ್ನುವ ವದಂತಿ ಇದೆ. ಬಾಗೇಶ್ವರ ಬಾಬಾ ಎಂದೇ ಪ್ರಸಿದ್ಧಿ ಪಡೆದುಕೊಂಡಿರುವ ಇವರು ಪವಾಡ ಪುರುಷನಾ ಎನ್ನುವ ಬಗ್ಗೆ ಜನರೇ ಉತ್ತರಿಸಿದ್ದಾರೆ.
ಇದನ್ನೂ ಓದಿ: Bageshwar Dham: ಬಾಗೇಶ್ವರ ಬಾಬಾ ಮಾಡುವ ಪವಾಡಗಳೇನು? ಜನರೇಕೆ ಮರುಳಾಗುತ್ತಿದ್ದಾರೆ?
ಈಗಿನ್ನೂ 26 ವರ್ಷದವರಾಗಿರುವ ಧೀರೇಂದ್ರ ಶಾಸ್ತ್ರಿ ಪವಾಡ ಪುರುಷ ಹೌದೇ? ಅಲ್ಲವೇ ಎನ್ನುವ ಬಗ್ಗೆ ʼಇಂಡಿಯಾ ಟಿವಿʼ ಸಂಸ್ಥೆ ಟ್ವಿಟರ್‌ನಲ್ಲಿ ಸಮೀಕ್ಷೆ ಮಾಡಿದೆ. ಸಂಸ್ಥೆ ಕೇಳಿರುವ ಪ್ರಶ್ನೆಗೆ ಶೇ. 68 ಮಂದಿ ʼಹೌದು, ಅವರೊಬ್ಬ ಪವಾಡ ಪುರುಷʼ ಎಂದು ಉತ್ತರಿಸಿದ್ದಾರೆ. ಇನ್ನು ಶೇ. 22.9 ಮಂದಿ ಅವರನ್ನು ಪವಾಡ ಪುರುಷರಲ್ಲ ಎಂದು ಹೇಳಿದ್ದಾರೆ. ಉಳಿದ ಮಂದಿ ತಮಗೆ ಅದರ ಬಗ್ಗೆ ಅರಿವಿಲ್ಲ ಎಂದಿದ್ದಾರೆ.
ಇದನ್ನೂ ಓದಿ: Bageshwar Dham: ಯಾರು ಈ ಬಾಗೇಶ್ವರ್ ಬಾಬಾ? ಯಾಕೆ ಸುದ್ದಿಯಲ್ಲಿದ್ದಾರೆ ಈ ವ್ಯಕ್ತಿ?
ಇತ್ತೀಚೆಗೆ ಧೀರೇಂದ್ರ ಅವರಿಗೆ ಮಧ್ಯಪ್ರದೇಶದ ವಿಚಾರವಾದಿ ಆಗಿರುವ ಶ್ಯಾಮ್ ಮನವ್ ಅವರು ಸವಾಲು ಹಾಕಿದ್ದರು. ನಿಮ್ಮ ಪವಾಡವನ್ನು ಸಾಬೀತುಪಡಿಸಿ ಎಂದಿದ್ದರು. ಅದಕ್ಕೆ ಪ್ರತಿಯಾಗಿ ಮಾತನಾಡಿದ್ದ ಧೀರೇಂದ್ರ ಅವರು, “ನಾನೇನು ಪವಾಡ ಪುರುಷನಲ್ಲ. ಬಾಗೇಶ್ವರ ಬಾಲಾಜಿ ಸೂಚಿಸಿದಂತೆ ನಡೆದುಕೊಳ್ಳುತ್ತೇನೆಷ್ಟೇ” ಎಂದು ಹೇಳಿದ್ದರು. ಈ ವಿಚಾರಗಳು ಸುದ್ದಿಯಾಗಿದ್ದವು. ಹಾಗೆಯೇ ಧೀರೇಂದ್ರ ಅವರಿಗೆ ಕೊಲೆ ಬೆದರಿಕೆಯೂ ಬಂದು, ಅದರ ಬಗ್ಗೆ ಪ್ರಕರಣದ ದಾಖಲಾಗಿರುವುದಾಗಿಯೂ ಸುದ್ದಿಯಾಗಿದೆ.