Site icon Vistara News

Dhruva Sarja: ಜ್ಯೋತಿ ಬೆಳಗಿಸಿ, ರಾಮನ ಕೃಪೆಗೆ ಪಾತ್ರರಾಗೋಣ ಎಂದ ಧ್ರುವ ಸರ್ಜಾ!

Dhruva Sarja ram mandir inauguration

ಬೆಂಗಳೂರು: 2024ರ ಜನವರಿ 22ರಂದು ಅಯೋಧ್ಯೆಯ ರಾಮಮಂದಿರದಲ್ಲಿ (Ram Mandir) ರಾಮಲಲ್ಲಾ ಮೂರ್ತಿಯನ್ನು ಪ್ರತಿಷ್ಠಾಪನೆ ಬಳಿಕ, ಪೂಜಾ ವಿಧಿವಿಧಾನಗಳು ಪೂರ್ಣಗೊಂಡ ಮೇಲೆ ದೇಶದ ಪ್ರತಿಯೊಂದು ಮನೆಯಲ್ಲಿ ರಾಮಜ್ಯೋತಿ ಬೆಳಗಲಿ ಎಂದು ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಕರೆ ನೀಡಿದ್ದಾಗಿದೆ. ಈ ಬಗ್ಗೆ ಸ್ಯಾಂಡಲ್‌ವುಡ್‌ ನಟ ಧ್ರುವ ಸರ್ಜಾ ಸಾಥ್‌ ಕೊಟ್ಟಿದ್ದಾರೆ.

ʻʻಮರ್ಯಾದ ಪುರೋಷೋತ್ತಮ ರಾಮ‌, ನಮ್ಮೆಲ್ಲರಿಗೂ ಆದರ್ಶಪುರುಷ; ಕೋಟ್ಯಾಂತರ ಭಕ್ತರು ಕಾತರದಿಂದ ಎದುರು ನೋಡುತ್ತಿರೋ ಅಯೋಧ್ಯೆಯ ರಾಮಮಂದಿರದ ಉದ್ಘಾಟನೆ ಇದೇ ಜನವರಿ 22 ರಂದು ನಡೆಯಲಿದೆ. ಈ ಸುಸಂದರ್ಭದಲ್ಲಿ ಪ್ರತಿಯೊಬ್ಬರು ತಮ್ಮ ಮನೆಮನಗಳಲ್ಲಿ ಜ್ಯೋತಿ ಬೆಳಗಿಸೋ ಮೂಲಕ ರಾಮನ ಕೃಪೆಗೆ ಪಾತ್ರರಾಗೋಣ. ಜೈ ಆಂಜನೇಯʼʼಎಂದು ಟ್ವೀಟ್‌ ಹಂಚಿಕೊಂಡಿದ್ದಾರೆ.

‘ರಾಮಜ್ಯೋತಿ’ ಬೆಳಗಿಸಿ; ಮೋದಿ ಕರೆ

ಅಯೋಧ್ಯೆ ವಿಮಾನ ನಿಲ್ದಾಣ ಲೋಕಾರ್ಪಣೆ ಬಳಿಕ ಮಾತನಾಡಿದ ಅವರು, ಜನವರಿ 22ರಂದು ದೇಶಕ್ಕೆ ದೇಶವೇ ರಾಮಮಯವಾಗಲಿ, ರಾಮನ ಜಪವೇ ಎಲ್ಲೆಡೆ ಜಗಮಗಿಸಲಿ ಎಂದು ಕರೆ ನೀಡಿದ್ದರು. ಅಯೋಧ್ಯೆ ರಾಮಮಂದಿರವು ದೇಶದ ಜನರ ದೇಗುಲವಾಗಿದೆ. ರಾಮಮಂದಿರದಿಂದ ದೇಶದ ರಾಮಭಕ್ತರು ಪುನೀತರಾಗುವ ಜತೆಗೆ ಉತ್ತರ ಪ್ರದೇಶದ ಅಭಿವೃದ್ಧಿಗೆ ರಾಮಮಂದಿರ ಸಂಕೇತವಾಗಲಿದೆ. ಭವ್ಯ ರಾಮಮಂದಿರದ ಲೋಕಾರ್ಪಣೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಅಯೋಧ್ಯೆಯ ರಾಮಮಂದಿರವು ಸಾವಿರಾರು ಜನರ ಪರಿಶ್ರಮದಿಂದ ನಿರ್ಮಾಣ ಮಾಡಲಾಗಿದೆ. ಹಾಗಾಗಿ, ಇದು ಎಲ್ಲ ರಾಮ ಭಕ್ತರಿಗೆ ಹೆಮ್ಮೆಯ ವಿಷಯವಾಗಿದೆ” ಎಂದು ಹೇಳಿದ್ದರು.

ಇದನ್ನೂ ಓದಿ: Dhruva Sarja: ಧ್ರುವ ಸರ್ಜಾ ಹೊಸ ಸಿನಿಮಾ ಅನೌನ್ಸ್‌; ಸಾಲು ಸಾಲು ಪೋಸ್ಟರ್‌ಗಳು ಔಟ್‌!

ಇದನ್ನೂ ಓದಿ: Ayodhya Ram Mandir: ಮೇಲೇಳುತ್ತಿರುವ ಭವ್ಯ ಮಂದಿರದ ಹಿಂದಿದೆ ಎಷ್ಟೊಂದು ಕಾಯುವಿಕೆ!

ಜನವರಿ 22ರಂದು ಎಲ್ಲರೂ ಅಯೋಧ್ಯೆಗೆ ಬರದಿರಿ

“ದೇಶದಲ್ಲಿರುವ ಎಲ್ಲ ರಾಮನ ಭಕ್ತರು ಅಯೋಧ್ಯೆಗೆ ಬರಬೇಕು, ರಾಮನ ದರ್ಶನ ಮಾಡಬೇಕು ಎಂದು ಬಯಸುತ್ತಿದ್ದಾರೆ. ಆದರೆ, ಜನವರಿ 22ರಂದು ಎಲ್ಲ ನಾಗರಿಕರು ಅಯೋಧ್ಯೆಗೆ ಬರದಿರಿ. ಭದ್ರತೆ, ಜನಜಂಗುಳಿಯನ್ನು ತಪ್ಪಿಸಲು ನಿಧಾನವಾಗಿ ಅಯೋಧ್ಯೆಯತ್ತ ಧಾವಿಸಿ. ರಾಮಮಂದಿರಕ್ಕಾಗಿ 550 ವರ್ಷ ಕಾದಿದ್ದೀರಿ. ಈಗ ರಾಮಮಂದಿರ ಕನಸು ನನಸಾಗುತ್ತಿದೆ. ಯಾರು ಕೂಡ ಅವಸರ ಮಾಡದೆ ಉದ್ಘಾಟನೆ ಬಳಿಕ ಸಮಯ ತೆಗೆದುಕೊಂಡು ಅಯೋಧ್ಯೆಗೆ ಬಂದು, ರಾಮನ ದರ್ಶನ ಮಾಡಿಕೊಳ್ಳಿ” ಎಂದು ಸಲಹೆ ನೀಡಿದ್ದರು.

“ಅಯೋಧ್ಯೆಯ ಜನರಿಗೆ ವಿಶೇಷವಾದ ಉಡುಗೊರೆ, ಅದೃಷ್ಟ ಲಭಿಸಿದೆ. ದೇಶದ ಕೋಟ್ಯಂತರ ಭಾರತೀಯರನ್ನು ಅಯೋಧ್ಯೆಗೆ ಸ್ವಾಗತಿಸುವ ಸೌಭಾಗ್ಯ ನಿಮ್ಮದಾಗಿದೆ. ಅಯೋಧ್ಯೆಗೆ ಆಗಮಿಸುವ ರಾಮನ ಭಕ್ತರನ್ನು ನೀವು ಚೆನ್ನಾಗಿ ಉಪಚರಿಸಿ. ಅಯೋಧ್ಯೆಯನ್ನು ಸ್ವಚ್ಛವಾಗಿಡಿ, ಸುಸಜ್ಜಿತವಾಗಿಡಿ. ಅಯೋಧ್ಯೆಗೆ ಆಗಮಿಸುವವರು ಕೂಡ ಸ್ವಚ್ಛತೆಗೆ ಪ್ರಾಮುಖ್ಯತೆ ಕೊಡಿ. ಆ ಮೂಲಕ ರಾಮನ ನಗರಿಯನ್ನು ದೇಶದ ನಗರಿಯನ್ನಾಗಿ ಕಾಪಾಡಿಕೊಳ್ಳಿ” ಎಂದು ಹೇಳಿದ್ದರು.

Exit mobile version