Site icon Vistara News

Dogs Attack: ನಾಯಿಗಳು ದಾಳಿ ಮಾಡಲು ಬಂದರೆ ಏನು ಮಾಡಬೇಕು? ಹೇಗೆ ರಕ್ಷಿಸಿಕೊಳ್ಳಬೇಕು?

Dogs Attack

ಚೆನ್ನೈನ (chennai) ಸಾರ್ವಜನಿಕ ಪ್ರದೇಶದಲ್ಲಿ ಇತ್ತೀಚೆಗೆ ಎರಡು ಸಾಕು ನಾಯಿಗಳು ದಾಳಿ (Dogs Attack) ನಡೆಸಿದ್ದರಿಂದ ಐದು ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಯಿತು. ಕಳೆದ ಫೆಬ್ರವರಿಯಲ್ಲಿ ದೆಹಲಿಯ (delhi) ತುಘಲಕ್ ಲೇನ್‌ನ ಧೋಬಿ ಘಾಟ್ ಪ್ರದೇಶದಲ್ಲಿ ಎರಡು ವರ್ಷದ ಬಾಲಕಿ ಮೇಲೆ ಬೀದಿನಾಯಿಗಳ ಗುಂಪೊಂದು ದಾಳಿ ನಡೆಸಿ ಕೊಂದು ಹಾಕಿತ್ತು. ಕಳೆದ ವರ್ಷ, ವಾಘ್ ಬಕ್ರಿ ಟೀ ಗ್ರೂಪ್‌ನ (Wagh Bakri Tea Group) ಕಾರ್ಯನಿರ್ವಾಹಕ ನಿರ್ದೇಶಕ ಪರಾಗ್ ದೇಸಾಯಿ ಅವರು ಬೀದಿ ನಾಯಿಗಳ ದಾಳಿಗೆ ಒಳಗಾಗಿ ಸಾವನ್ನಪ್ಪಿದ್ದರು.

ಇದು ಕೆಲವು ಉದಾಹರಣೆಯಷ್ಟೇ. ದೇಶದ ಹಲವಾರು ಭಾಗಗಳಲ್ಲಿ ನಾಯಿಗಳ ದಾಳಿಯಿಂದ ಅನೇಕ ಮಂದಿ ಸಾವನ್ನಪ್ಪಿದ್ದಾರೆ ಹಾಗೂ ಗಾಯಗೊಂಡಿದ್ದಾರೆ. ಇದು ಸಮಾಜಿಕವಾಗಿ ಆತಂಕಕ್ಕೆ ಕಾರಣವಾಗಿದೆ. ಬೀದಿನಾಯಿಗಳು ದುರ್ಬಲ ಜನರನ್ನು, ಹೆಚ್ಚಾಗಿ ಮಕ್ಕಳು ಮತ್ತು ಹಿರಿಯ ನಾಗರಿಕರ ಮೇಲೆ ದಾಳಿ ನಡೆಸುತ್ತವೆ. ಬೀದಿ ನಾಯಿಗಳು ಏಕೆ ದಾಳಿ ಮಾಡುತ್ತವೆ, ನಾಯಿಗಳ ಬಗ್ಗೆ ಕಾನೂನು ಏನು ಹೇಳುತ್ತದೆ ಮತ್ತು ಅಂತಹ ದಾಳಿಗಳಿಗೆ ಯಾರು ಹೊಣೆಗಾರರಾಗುತ್ತಾರೆ ಎಂಬುದರ ಕುರಿತು ಮಾಹಿತಿ ಇಲ್ಲಿದೆ.

ದಾಳಿಗೆ ಏನು ಕಾರಣ?

ಭಾರತದಲ್ಲಿ ಪ್ರಾಣಿಗಳ ಆರೋಗ್ಯ ರಕ್ಷಣೆ ಮತ್ತು ನಿಯಂತ್ರಣಕ್ಕೆ ಸರಿಯಾದ ಕಾರ್ಯವಿಧಾನಗಳಿಲ್ಲ. ಸರಿಯಾದ ಪ್ರಾಣಿ ನಿಯಂತ್ರಣ ಕ್ರಮಗಳ ಕೊರತೆಯು ಬೃಹತ್ ಸಂಖ್ಯಾ ಸ್ಫೋಟಕ್ಕೆ ಮತ್ತು ಮನುಷ್ಯರೊಂದಿಗೆ ಘರ್ಷಣೆಗೆ ಕಾರಣವಾಗಿದೆ. ಇದಲ್ಲದೆ, ಸಾಂಕ್ರಾಮಿಕ ಕಾಯಿಲೆ, ಆಹಾರದ ಕೊರತೆಯಿಂದಾಗಿ ನಾಯಿಗಳು ಉಗ್ರವಾಗುತ್ತದೆ.

ನಾಯಿಗಳ ಸಂಖ್ಯೆ

ಅಂಕಿಅಂಶಗಳ ಪ್ರಕಾರ ಭಾರತದಲ್ಲಿ ಸಾಕು ನಾಯಿಗಳ ಒಟ್ಟಾರೆ ಸಂಖ್ಯೆಯು 2021ರಲ್ಲಿ 27 ಮಿಲಿಯನ್‌ಗಿಂತಲೂ ಹೆಚ್ಚಿದೆ. 2026ರ ವೇಳೆಗೆ ಇವುಗಳ ಸಂಖ್ಯೆಯು 43 ಮಿಲಿಯನ್‌ಗಿಂತಲೂ ಹೆಚ್ಚು ತಲುಪುವ ಸಾಧ್ಯತೆಯಿದೆ.
ಜಾಗತಿಕ ಪಿಇಟಿ ಆರೋಗ್ಯ ಮತ್ತು ಪೌಷ್ಟಿಕಾಂಶ ಕಂಪನಿಯಾದ ಮಾರ್ಸ್ ಪೆಟ್‌ಕೇರ್‌ನ ಸ್ಟೇಟ್ ಆಫ್ ಪೆಟ್ ಹೋಮ್‌ಲೆಸ್‌ನೆಸ್ ಇಂಡೆಕ್ಸ್ 2021ರ ಪ್ರಕಾರ ಭಾರತದಲ್ಲಿ ಬೀದಿ ನಾಯಿಗಳ ಸಂಖ್ಯೆಯು ಸುಮಾರು 62 ಮಿಲಿಯನ್ ಆಗಿದೆ.

ನಾಯಿ ಕಡಿತ ಪ್ರಕರಣ

2019ರಲ್ಲಿ ದೇಶದಲ್ಲಿ 4,146 ನಾಯಿ ಕಡಿತದ ಪ್ರಕರಣಗಳು ಮಾನವ ಸಾವಿಗೆ ಕಾರಣವಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಅಂಕಿಅಂಶಗಳನ್ನು ತೋರಿಸುತ್ತದೆ. ಇನ್ನೊಂದು ಮಾಹಿತಿ ಪ್ರಕಾರ ದೇಶದಲ್ಲಿ 2019 ರಿಂದ 1.5 ಕೋಟಿ ನಾಯಿ ಕಡಿತದ ಪ್ರಕರಣಗಳು ನಡೆದಿದೆ. ಅತೀ ಹೆಚ್ಚು ನಾಯಿಗಳು ಉತ್ತರ ಪ್ರದೇಶದಲ್ಲಿದ್ದು, 27.52 ಲಕ್ಷ ನಾಯಿಗಳನ್ನು ಹೊಂದಿದೆ. ತಮಿಳುನಾಡಿನಲ್ಲಿ 20.7 ಲಕ್ಷ ಮತ್ತು ಮಹಾರಾಷ್ಟ್ರ ದಲ್ಲಿ 15.75 ಲಕ್ಷ ನಾಯಿಗಳನ್ನು ಹೊಂದಿದೆ.

ನಾಯಿ ದಾಳಿಗೆ ಯಾರು ಹೊಣೆ?

ಬೀದಿ ನಾಯಿಗಳು ವ್ಯಘ್ರಗೊಂಡಿರಬಹುದು, ನೊಂದಿರಬಹುದು, ಹಸಿದಿರಬಹುದು, ಆಘಾತಕ್ಕೊಳಗಾಗಿರಬಹುದು, ಆತಂಕಕ್ಕೊಳಗಾಗಬಹುದು ಅಥವಾ ತಮ್ಮ ಮರಿಗಳನ್ನು ರಕ್ಷಿಸಿಕೊಳ್ಳಲು ದಾಳಿ ನಡೆಸುತ್ತವೆ. ಸರ್ಕಾರ ಮತ್ತು ಪ್ರಾಣಿ ಕಲ್ಯಾಣ ಸಂಸ್ಥೆಗಳ ನಿರ್ಲಕ್ಷ್ಯ ಮತ್ತು ವೈಯಕ್ತಿಕ ನಿರಾಸಕ್ತಿ ಸೇರಿದಂತೆ ಹಲವಾರು ಅಂಶಗಳ ಪರಿಣಾಮವಾಗಿ ಬೀದಿ ನಾಯಿಗಳ ದಾಳಿ ನಡೆಸುತ್ತವೆ.


ಸಾಕುಪ್ರಾಣಿಗಳನ್ನು ರಕ್ಷಣೆ ಕಾನೂನು

ಯಾವುದೇ ಪ್ರಾಣಿಯನ್ನು ದೀರ್ಘ ಕಾಲ ಸರಪಳಿಯಲ್ಲಿ ಬಂಧಿಸುವುದು ಕ್ರೌರ್ಯಕ್ಕೆ ಸಮಾನ. ಇದಕ್ಕೆ ದಂಡ ಅಥವಾ 3 ತಿಂಗಳವರೆಗೆ ಜೈಲು ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಮಾಲೀಕರು ತಮ್ಮ ಸಾಕುಪ್ರಾಣಿಗಳಿಗೆ ಸಾಕಷ್ಟು ಆಹಾರ, ಪಾನೀಯ ಅಥವಾ ಆಶ್ರಯವನ್ನು ಒದಗಿಸಲು ವಿಫಲವಾದರೆ ಅವರು ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯಿದೆ 1960 ರ ಸೆಕ್ಷನ್ 11 (1) (h) ಪ್ರಕಾರ ಶಿಕ್ಷೆಗೆ ಗುರಿಯಾಗುತ್ತಾರೆ. ಇದು 1960 ಶಿಕ್ಷಾರ್ಹ ಅಪರಾಧವಾಗಿದೆ. ಯಾವುದೇ ವ್ಯಕ್ತಿಯು, ಯಾವುದೇ ಸಮಂಜಸವಾದ ಕಾರಣವಿಲ್ಲದೆ ಪ್ರಾಣಿಯು ಹಸಿವು ಅಥವಾ ಬಾಯಾರಿಕೆಯಿಂದ ನೋವನ್ನು ಅನುಭವಿಸುವ ಪರಿಸ್ಥಿತಿಯಲ್ಲಿ ಪ್ರಾಣಿಯನ್ನು ತ್ಯಜಿಸಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಸೋಂಕಿತ, ರೋಗಗ್ರಸ್ತ ಅಥವಾ ಅಂಗವಿಕಲ ಪ್ರಾಣಿಯನ್ನು ಯಾವುದೇ ಅನುಮತಿಯಿಲ್ಲದೆ ಬೀದಿಗೆ ಬಿಟ್ಟರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಸಾಕುಪ್ರಾಣಿಗಳ ಮಾಲೀಕರನ್ನು ಬೆದರಿಸುವುದು, ಅಥವಾ ಆರೈಕೆ ಮಾಡದಂತೆ ತಡೆಯುವುದು IPC ಯ ಸೆಕ್ಷನ್ 503 ರ ಅಡಿಯಲ್ಲಿ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ನಾಯಿಗಳು ದಾಳಿ ಮಾಡಿದಾಗ ಏನು ಮಾಡಬೇಕು?

ನಾಯಿಗಳು ದಾಳಿ ಮಾಡಲು ಬಂದರೆ ಓಡಬೇಡಿ, ಕಿರುಚಬೇಡಿ. ಬದಲಾಗಿ ನಿಶ್ಚಲವಾಗಿರಿ. ಓಡಿದರೆ, ಕಿರುಚಿದರೆ ನಾಯಿ ದಾಳಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ.

ಕೋಲಿನಿಂದ ನಾಯಿಯನ್ನು ಬೆದರಿಸಬೇಡಿ. ಇದರಿಂದ ಅವು ಅಕ್ರಮಣಕಾರಿಯಾಗುತ್ತದೆ. ಬೀದಿಯಲ್ಲಿ ನಾಯಿಗಳಿಗೆ ಬಿಸ್ಕತ್ತುಗಳನ್ನು ನೀಡಿ. ಇದರಿಂದ ಅವುಗಳು ನಿಮ್ಮನ್ನು ಸ್ನೇಹಿತರಂತೆ ನೋಡುತ್ತದೆ.

ಇದನ್ನೂ ಓದಿ: Hindu Population: ಹಿಂದೂಗಳ ಜನಸಂಖ್ಯೆ ಶೇ.7.8 ಕುಸಿತ; ಮುಸ್ಲಿಮರ ಸಂಖ್ಯೆ ಶೇ.43.15 ಏರಿಕೆ!

ನಾಯಿಗಳು ದೊಡ್ಡ ಗುಂಪಿನಲ್ಲಿದ್ದರೆ ಅವುಗಳೊಂದಿಗೆ ಗುರಾಯಿಸಿ ನೋಡಬೇಡಿ. ನೇರವಾಗಿ ನಡೆಯಿರಿ. ನಾಯಿಗಳನ್ನು ಕಂಡು ಹಿಂತಿರುಗಿ ಓಡಬೇಡಿ. ಭಯವಾದರೆ ಬೇರೆ ಮಾರ್ಗವನ್ನು ಬಳಸಿ.

ನಿಮ್ಮನ್ನು ರಕ್ಷಿಸಿಕೊಳ್ಳಲು ಚೀಲವನ್ನು ಬಳಸಿ. ಹೊಟ್ಟೆ ಮತ್ತು ಕುತ್ತಿಗೆಯಂತಹ ಪ್ರಮುಖ ಅಂಗಗಳ ಮೇಲೆ ನಾಯಿಗಳು ದಾಳಿ ನಡೆಸುತ್ತವೆ. ಈ ಸಂದರ್ಭದಲ್ಲಿ ಚೀಲ ಅಥವಾ ಯಾವುದಾದರೂ ವಸ್ತುವನ್ನು ಅಡ್ಡವಾಗಿ ಹಿಡಿದು ರಕ್ಷಣೆಗೆ ಬಳಸಿ. ಶಾಂತವಾಗಿರಲು ಪ್ರಯತ್ನಿಸಿ.

ನಾಯಿಗಳು ದಾಳಿಗೆ ಮುಂದಾದಾಗ ನೇರವಾಗಿ ನಿಂತುಕೊಳ್ಳಿ. ತಲೆಯ ಮೇಲೆ ಕೈಗಳನ್ನು ಎತ್ತಿ. ಆತ್ಮವಿಶ್ವಾಸದಿಂದಿರಿ. ಆಗ ನಾಯಿಗಳೇ ಹೆದರಿ ಹಿಂದೆ ಸರಿಯುತ್ತವೆ.

Exit mobile version