Site icon Vistara News

Budget Session 2023: ಮೋದಿ, ಆರ್‌ಆರ್‌ಆರ್ ಆಸ್ಕರ್ ಗೆದ್ದಿರುವ ಕ್ರೆಡಿಟ್ ತೆಗೆದುಕೊಳ್ಳಬೇಡಿ! ಖರ್ಗೆ ವ್ಯಂಗ್ಯ

Don't take credit oscar winning films, Kharge requested to Modi at Budget Session 2023

ನವದೆಹಲಿ: ಬೆಸ್ಟ್ ಒರಿಜಿನಲ್ ಸಾಂಗ್ ಕೆಟಗರಿಯಲ್ಲಿ ಆರ್‌ಆರ್‌ಆರ್ ಸಿನಿಮಾ ಮತ್ತು ಡ್ಯಾಕುಮೆಂಟರಿ ಶಾರ್ಟ್ ಫಿಲ್ಮ್ ದಿ ಎಲಿಫೆಂಟ್ ವಿಸ್ಪರರ್ಸ್ ಆಸ್ಕರ್ ಗೆದಿದ್ದು, ಅದರ ಕ್ರೆಡಿಟ್ ಅನ್ನು ನರೇಂದ್ರ ಮೋದಿ ಅವರು ತೆಗೆದುಕೊಳ್ಳಬಾರದು ಎಂದು ರಾಜ್ಯಸಭೆಯಲ್ಲಿ ಪ್ರತಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ವ್ಯಂಗ್ಯ ಮಾಡಿದ್ದಾರೆ(Budget Session 2023).

ಆರ್‌ಆರ್‌ಆರ್ ಸಿನಿಮಾ ತೆಲುಗು ಸಿನಿಮಾವಾದ್ರೆ, ಎಲಿಫೆಂಟ್ ವಿಸ್ಪರರ್ಸ್ ತಮಿಳು ಸಾಕ್ಷ್ಯ ಚಿತ್ರವಾಗಿದ್ದು, ಎರಡೂ ದೇಶದ ಸಿನಿಮಾ ಕ್ಷೇತ್ರಕ್ಕೆ ಕಾಣಿಕೆ ನೀಡಿವೆ ಎಂದು ಖರ್ಗೆ ಅವರು ಹೇಳಿದರು. ನಾವು (ಬಿಜೆಪಿ) ನಿರ್ದೇಶನ ಮಾಡಿದ್ದೇವೆ, ನಾವು (ಬಿಜೆಪಿ) ಹಾಡು ಬರೆದಿದ್ದೇವೆ ಎಂದೋ ಅಥವಾ ಮೋದಿಜಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ ಎಂದು ಆಡಳಿತ ಪಕ್ಷವು ಕ್ರೆಡಿಟ್ ತೆಗೆದುಕೊಳ್ಳಬಾರದು. ಇದು ನನ್ನ ವಿನಂತಿ ಮಾತ್ರ. ಇವು ದೇಶದ ಕೊಡುಗೆಯಾಗಿದೆ ಎಂದು ಖರ್ಗೆ ಸಂಸತ್ತಿನಲ್ಲಿ ಹೇಳಿದರು.

ಇದನ್ನೂ ಓದಿ: Oscars 2023 : ಆರ್‌ಆರ್‌ಆರ್, ದಿ ಎಲಿಫೆಂಟ್ ವಿಸ್ಪರರ್ಸ್ ತಂಡಗಳಿಗೆ ಪಿಎಂ ಮೋದಿ, ರಾಹುಲ್ ಶುಭಾಶಯ

ಕೇಂದ್ರ ಸಚಿವ ಪಿಯೂಷ್ ಗೋಯಲ್ ಅವರು, ಆರ್ ಆರ್ ಆರ್ ಚಿತ್ರದ ಕತೆ ಬರೆದವರು ವಿ ವಿಜಯೇಂದ್ರ ಪ್ರಸಾದರು. ಅವರನ್ನು ಮೋದಿ ನೇತೃತ್ವದ ಸರ್ಕಾರವೇ ಸಂಸತ್ತಿಗೆ ನಾಮನಿರ್ದೇಶನ ಮಾಡಿದೆ ಎಂಬುದು ವಾಸ್ತವಾಂಶ ಎಂದರು. ಗೋಯಲ್ ಅವರು ಈ ಮಾತಿಗೆ ತೀವ್ರ ವಿರೋಧ ವ್ಯಕ್ತವಾಯಿತು. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಪ್ರಮುಖ ನಾಯಕರೆಲ್ಲರೂ ಆಸ್ಕರ್ ವಿಜೇತ ಆರ್ ಆರ್ ಆರ್ ಹಾಗೂ ಸಾಕ್ಷ್ಯ ಚಿತ್ರ ದಿ ಎಲೆಫೆಂಟ್ ವಿಸ್ಪರರ್ಸ್ ಚಿತ್ರ ತಂಡಗಳಿಗೆ ಶಭಾಶಯ ಕೋರಿದ್ದಾರೆ.

Exit mobile version